ಕ್ರೈಂ ನ್ಯೂಸ್

ಗಾಂಜಾದೊಂದಿಗೆ ಪತ್ತೆಯಾಯಿತು‌ ಹರಿತವಾದ ಆಯುಧಗಳು

ಸುದ್ದಿಲೈವ್/ಶಿವಮೊಗ್ಗ

ಇನ್ನೋವಾ ಕಾರಿನಲ್ಲಿ ಗಾಂಜಾ ಮತ್ತು ಆಯುಧಗಳನ್ನ  ಸಾಗಿಸಲಾಗುತ್ತಿರುವ ಬಗ್ಗೆ ಬಂದ‌ ಮಾಹಿತಿ ಆಧಾರದ ಮೇರೆಗೆ ಡಿಐಎಸ್ಪಿ ಬಾಲರಾಜ್ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿಯ ವೇಳೆ‌ 440 ಗ್ರಾಂ ಗಾಂಜಾ ಮತ್ತು ಒಂದು ಡ್ರಾಗರ್, ಒಂದು ಮಚ್ಚು ಒಂದು ಬರ್ಜಿ ಪತ್ತೆಯಾಗಿದೆ. ಆರೋಪಿ ಅರ್ಬಾಜ್ ನನ್ನ‌ ಬಂಧಸಲಾಗಿದೆ.‌

ನಿನ್ನೆ ಮಧ್ಯಾಹ್ನ ಇನ್ನೋವಾ ಕಾರಿನಲ್ಲಿ ಗಾಜನೂರು ಕಡೆಯಿಂದ ಶಿವಮೊಗ್ಗ ನಗರದ ಕಡೆಗೆ ಇನ್ನೋವಾ‌ ಕಾರಿನಲ್ಲಿ ಮಾದಕ ವಸ್ತು ಗಾಂಜಾ ಮತ್ತು ಹರಿತವಾದ ಆಯುಧಗಳನ್ನ ವ್ಯಕ್ತಿಯೋರ್ವ ಸಾಗಿಸುತ್ತಿರುವುದಾಗಿ ಬಂದ ಮಾಹಿತಿಯ ಆಧಾರದ ಮೇರೆಗೆ ಅಲರ್ಟ್‌ಆದ ಖಾಕಿ ಪಡೆ ಡಿವೈಎಸ್ಪಿ ಬಾಲರಾಜ್  ನೇತೃತ್ವದಲ್ಲಿ ಫೀಲ್ಡ್ ಗೆ ಇಳಿದಿದೆ.

ಡಿವೈಎಸ್ಪಿ ಬಾಲರಾಜ್ ಮೇಲ್ವಿಚಾರಣೆಯಲ್ಲಿ, ದೊಡ್ಡಪೇಟೆ ಪಿಐ ರವಿ ಪಾಟೀಲ್ ಮತ್ತು ಪಿಎಸ್ಐ ವಸಂತ್  ಸಿಬ್ಬಂಧಿಗಳನ್ನ ಒಳಗೊಂಡ ತಂಡವು ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಮಂಡ್ಲಿ ಪಂಪ್ ಹೌಸ್ ನ ಹತ್ತಿರ ವಾಹನಗಳನ್ನು ತಪಾಸಣೆ ನಡೆಸಲಾಗಿದೆ.

ಕಾರಿನ ಹಿಂಭಾಗದ ಡಿಕ್ಕಿಯಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಗಾಂಜಾವನ್ನು ಸುತ್ತಿ ಇಟ್ಟಿದ್ದು ಮತ್ತು ಕಾರಿನ ಒಳಭಾಗದ ಮಧ್ಯದ ಸೀಟಿನ ಕೆಳಭಾಗದಲ್ಲಿ ಹರಿತವಾದ ಆಯುಧಗಳು ಇರುವುದು ಕಂಡು ಬಂದಿರುತ್ತದೆ. ನಂತರ ಕಾರಿನ ಚಾಲಕನಾದ ಆರೋಪಿ ಅರ್ಬಾಜ್ @ ಹರ್ಬಾಜ್ @ ಹಜರತ್ @ ಅರ್ಬಾಜ್ ಖಾನ್ (23) ನನ್ನ‌ಬಂಧಿಸಲಾಗಿದೆ.‌ ಆರೋಪಿತನಿಂದ ಅಂದಾಜು ಮೌಲ್ಯ 23,000/- ರೂಗಳ 440 ಗ್ರಾಂ ತೂಕದ ಒಣ ಗಾಂಜಾ ಮತ್ತು 1 ಮಚ್ಚು, 1 ಬರ್ಚಿ ಮತ್ತು 1 ಡ್ರ್ಯಾಗರ್ ಅನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.

ಪ್ರಕರಣದಲ್ಲಿ ತೋಹೀಬ್ ಯಾನೆ ಬಿ.ಡಿ, ಮೊಹಮ್ಮದ್ ಸಾದಿಕ್ ಯಾನೆ ನಿಹಾಲ್ ಯಾನೆ ಬಚ್ಚಾ, ಉಸ್ಮಾನ್ ಯಾನೆ ಚೋಟು ಪರಾರಿಯಾಗಿದ್ದಾರೆ.  ರೌಡಶೀಟರ್ ಗಳ ಬಂಧನಕ್ಕೆ ಖಾಕಿ‌ಪಡೆ ಬಲೆಬೀಸಿದೆ.

ಇದನ್ನೂ ಓದಿ-https://suddilive.in/archives/7189

Related Articles

Leave a Reply

Your email address will not be published. Required fields are marked *

Back to top button