ಕ್ರೈಂ ನ್ಯೂಸ್

ಪತ್ನಿ ಮತ್ತು 6 ತಿಂಗಳ ಮಗುವಿಗೆ ವಿಷ ಉಣಿಸಿದ ಪತಿ-ಪತ್ನಿ ಸಾವು

ದ್ದಿಲೈವ್/ಶಿವಮೊಗ್ಗ

ಪತ್ತಿಯನ್ನ ಚೆನ್ನಾಗಿ ನೋಡಿಕೊಳ್ಳದ ಪತಿಯೊಬ್ಬ ಪತ್ನಿ ಮತ್ತು 6 ತಿಂಗಳ ಗಂಡು ಮಗುವಿಗೆ ವಿಷ ಸೇವಿಸಿರುವ ಘಟನೆ ತಾಲೂಕಿನ ಸಿದ್ಲೀಪುರದಲ್ಲಿ ನಡೆದಿದ್ದು, ವಿಷ ಉಣಿಸಿ ಪತ್ನಿಯನ್ನ ಆಸ್ಪತ್ರೆಗೆ ಕರೆತರುವಾಗ ಸಾವನ್ನಪ್ಪಿದ್ದಾಳೆ. ಮಗು ಸಾವು ಮತ್ತು ಬದುಕಿನ ನಡುವೆ ಹೋರಾಡುತ್ತಿದೆ.

ಕಸ್ತೂರಿ (24) ಎಂಬ ವಿವಾಹಿತ ಮಹಿಳೆಗೆ ಪತಿ ಮಂಜುನಾಥ್ ವಿಷ ಉಣಸಿ ಸಾವಿಗೆ ಕಾರಣವೆಂದು ಮೃತಳ ಕುಟುಂಬ ಆರೋಪಿಸಿದೆ. ತಾವರೆಕೊಪ್ಪದ ಪೆರಿ ಸ್ವಾಮಿಗೆ ಮೂವರು ಮಕ್ಕಳಿದ್ದು ಎರಡು ಹೆಣ್ಣು ಒಂದು ಗಂಡು ಮಕ್ಕಳಿದ್ದಾರೆ.

ಐದು ವರ್ಷದ ಹಿಂದೆ ಸಿದ್ಲೀಪುರದ ಮಂಜುನಾಥ್ ಎಂಬುವನಿಗೆ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದಾಗ ಚೆನ್ನಾಗಿ ನೋಡಿಕೊಂಡಿದ್ದ ಮಂಜುನಾಥ್ ಮೊದಲನೇ ಹೆಣ್ಣು ಮಗು ಸೀಳು ತುಟಿಯೊಂದಿಗೆ ಹುಟ್ಟಿದ ವೇಳೆಯಿಂದ ಹಿಂಸೆ ಆರಂಭಿಸಿರುವುದಾಗಿ ಮೃತಳ ಕುಟುಂಬ ಆರೋಪಿಸಿದೆ. ಮಗುವಿನ ಸೀಳುತುಟಿ ಆಪರೇಷನ್ ಗೆ ಕವಿತಾಳ ತವರು ಮನೆಯವರೆ ಐದು ಲಕ್ಷ ಖರ್ಚು ಮಾಡಿರುವುದಾಗಿ ಮೃತಳ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಂಜುನಾಥ್ ಮತ್ತು ಕಸ್ತೂರಿಗೆ ಎರಡು ಮಕ್ಕಳಿವೆ. ಮೊದಲನೇ ಮಗು ಹೆಣ್ಣು ಮಗು ಹುಟ್ಟಿದ್ದರೆ ಎರಡನೇ ಮಗು ಗಂಡಾಗಿದೆ. ಸೀಳುತುಟಿ ಮಗುವಾಗಿದೆ. 6 ತಿಂಗಳು ಗಂಡು ಮತ್ತು ತಾಯಿ ಕಸ್ತೂರಿಗೆ ಪತಿ ಮಂಜುನಾಥ್ ವಿಷ ಉಣಿಸಿರುವುದಾಗಿ ಆರೋಪಿಸಿದ್ದು 3 ವರ್ಷದ ಹೆಣ್ಣುಮಗು ಎಲ್ಲಿದೆ ಎಂಬುದು ತಿಳಿದಿಲ್ಲ. ಸತ್ತಿದೆಯೋ ಅಥವಾ ಬದುಕಿದಿಯೋ ಗೊತ್ತಿಲ್ಲ ಎಂದು ದೂರಲಾಗಿದೆ.

ಮುದ್ದಿನಕೊಪ್ಪ ಗ್ರಾಪಂ ಸದಸ್ಯ ಹಾಗೂ ಸಿದ್ಲೀಪುರದ ನಿವಾಸಿ ಚಂದ್ರನಾಯ್ಕನ ಬಳಿ ಮಂಜುನಾಥ್ ಕೂಲಿ ಕೆಲಸಕ್ಕಿದ್ದನು. ಕಸ್ತೂರಿ ಚಂದ್ರನಾಯ್ಕ್ ಬಳಿ ಕೆಲಸ ಮಾಡಲು ನಿರಾಕರಿಸುತ್ತಿದ್ದಳು. ಇದರಿಂದ ಪ್ರತಿದಿನ ಗಲಾಟೆಯಾಗುತ್ತಿತ್ತು ಎಂದು ತಂದೆ ಪೆರಿಸ್ವಾಮಿ ಆರೋಪಿಸಿದ್ದಾರೆ.

ನಿನ್ನೆ ಮದ್ಯಾಹ್ನ 3-50 ಗೆ ಕಸ್ತೂರಿ ಮತ್ತು 6 ತಿಂಗಳ ಗಂಡು ಮಗುವಿಗೆ ವಿಷ ಉಣಿಸಿ ಕೊಲೆ ಮಾಡಿ ಬೈಕ್ ನಲ್ಲಿ ಇಬ್ಬರನ್ನೂ ಮೆಗ್ಗಾನ್ ಗೆ ಕರೆತಂದಿದ್ದಾನೆ. ತಾಯಿ ಸಾವನ್ನಪ್ಪಿದ್ದಾಳೆ. ಮಗು ಮೆಗ್ಗಾನ್ ನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದೆ.

ಇದನ್ನೂ ಓದಿ-https://suddilive.in/archives/9498

Related Articles

Leave a Reply

Your email address will not be published. Required fields are marked *

Back to top button