ಕ್ರೈಂ ನ್ಯೂಸ್

ಶಿವಮೊಗ್ಗ ಜಿಪಂನಲ್ಲಿ ಲೋಕಾಯುಕ್ತ ತಪಾಸಣೆ

ಸುದ್ದಿಲೈವ್/ಶಿವಮೊಗ್ಗ

ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿರುವ ನರೇಗಾ ವಿಭಾಗದಲ್ಲಿ ಲೋಕಾಯುಕ್ತ ಎಸ್ಪಿ ವಾಸುದೇವ ಅವರ ನೇತೃತ್ವದಲ್ಲಿ ಕಡತಗಳ ಪರಿಶೀಲನೆ ನಡೆದಿದೆ.

ನರೇಗಾ ಕಾಮಗಾರಿಯ ಬಗ್ಗೆ ಬಂದಿರುವ ದೂರಿನ ಆಧಾರದ ಮೇರೆಗೆ ಲೋಕಾಯುಕ್ತರು ಕಡತ ತಪಾಸಣೆಗೆ ಮುಂದಾಗಿದ್ದಾರೆ.

ನರೇಗಾ ಕಾಮಗಾರಿಯಲ್ಲಿ ಕಡತಗಳ ವಿಲೇ ವಿಳಂಬ ಅನುಸರಿಸಲಾಗುತ್ತಿದೆ ಎಂಬ ಸಾರ್ವಜನಿಕ ದೂರು ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರು ತಪಾಸಣೆಗೆ ಮುಂದಾಗಿದ್ದಾರೆ.

ಲೋಕಾಯುಕ್ತ ತಪಾಸಣೆಯ ಹಿನ್ನೆಲೆಯಲ್ಲಿ  20 ಕ್ಕೂ ಅಧಿಕ  ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಪಾಸಣೆ ನಡೆಸಲಾಗುತ್ತಿದ್ದಾರೆ. ಮಧ್ಯಾಹ್ನದ ಊಟವನ್ನ ನರೇಗಾ ವಿಭಾಗದಲ್ಲಿ ತರಿಸಲಾಗಿದ್ದು ಊಟದ ನಂತರವೂ ತಪಾಸಣೆ ಮುಂದುವರೆಯುವ ಸಾಧ್ಯತೆ ಇದೆ.

ಇದನ್ನೂ ಓದಿ-https://suddilive.in/archives/7185

Related Articles

Leave a Reply

Your email address will not be published. Required fields are marked *

Back to top button