ಕ್ರೈಂ ನ್ಯೂಸ್

ಮತ್ತೆ ಆಕ್ಟಿವ್ ಆದ ನಕಲಿ ಪೊಲೀಸರು

ಸುದ್ದಿಲೈವ್/ಶಿವಮೊಗ್ಗ

ಕಳೆದೆರಡು ವರ್ಷಗಳಲ್ಲಿ ಪೊಲೀಸರು ನಾವು ನಿಮ್ಮ ಮೈಮೇಲಿನ ಚಿನ್ನಾಭರಣಗಳು ಜೋಪಾನ ಎಂದು ಪೇಪರ್ ನಲ್ಲಿ ದುಂಡುಗೆ ಸುತ್ತುಕೊಡುವುದಾಗಿ ಹೇಳಿ ವಂಚಿಸುತ್ತಿದ್ದ ಪ್ರಕರಣಗಳು ನಡೆದಿದ್ದವು.

ಆ ವಂಚನೆ ಪ್ರಕರಣಗಳು ಅನೇಕ ತಿಂಗಳು ನಂತರ ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ನಡೆದಿದೆ. ನಗರಗಳಲ್ಲಿ ನಡೆಯುತ್ತಿದ್ದ ಪ್ರಕರಣಗಳು ಶಿಫ್ಟ್ ಆಗಿ ಗ್ರಾಮಾಂತರ ಭಾಗಕ್ಕೆ ಹೋದ್ವಾ ಎಂಬ ಅನುಮಾನಕ್ಕೆ ಈ ಪ್ರಕರಣಗಳು ಎಡೆಮಾಡಿಕೊಟ್ಟಿದೆ.

ಫೆ.27 ರಂದು ಹಾರಹಳ್ಳಿಯ ಮಹಿಳೆಯೊಬ್ಬರು ಅರಹತೊಳಲು ಗ್ರಾಮಕ್ಕೆ ಹೋಗಲು ಶಿವಮೊಗ್ಗಕ್ಕೆ ಬಂದು ಕೈಮರ ಬಸ್ ನಿಲ್ದಾಣದಲ್ಲಿ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುವಾಗ ಇಬ್ಬರು ಪರಿಚಿತರು ಮಹಿಳೆಯ ಬಳಿ ಬಂದು ನಾವು ಪೊಲೀಸರು ಎಂದು ಹೇಳಿಕೊಂಡಿದ್ದಾರೆ.

ಇಲ್ಲಿ ತುಂಬಾ ಕಳ್ಳರು ಇದ್ದಾರೆ ಎಷ್ಟೊಂದು ಒಡವೆ ಹಾಕಿಕೊಂಡು ಬಂದಿದ್ದೀರಿ ಒಡವೆಯನ್ನು ಬಿಚ್ಚಿ ಬ್ಯಾಗಲ್ಲಿ ಇಟ್ಟುಕೊಳ್ಳಿ, ಅಂಥ ಹೇಳಿದ್ದಾರೆ. ಆಗ ಮಹಿಳೆ ತನ್ನ ಕೊರಳಲ್ಲಿದ್ದ 43 ಗ್ರಾಂ ನ ಮಾಂಗಲ್ಯ, ಚೈನು ಸರ ಮತ್ತು ಇನ್ನೊಂದು 38 ಗ್ರಾಂ ನ ಬಂಗಾರದ ಸರ ಎರಡನ್ನು ಬಿಚ್ಚಿರುತ್ತಾರೆ. ಆಗ ಅಪರಿಚಿತರು ಈ ಪೇಪರಿಗೆ ಹಾಕಿ ಅಂಥ ಪೇಪರಿಗೆ ಹಾಕಿಸಿಕೊಂಡು ಪೇಪರನ್ನು ದುಂಡುಗೆ ಮಾಡಿ ಕೊಟ್ಟಿದ್ದಾರೆ.

ನಂತರ ಅಹರತೊಳಲು ಕಡೆ ಬಸ್ಸನ್ನು ಹತ್ತಿ ಸರವನ್ನು ಕೊರಳಿಗೆ ಹಾಕಿ ಕೊಳ್ಳೋಣ ಎಂದು ಮಹಿಳೆ ಪೇಪ‌ರ್ ಬಿಚ್ಚಿ ನೋಡಿದಾಗ ಅದರಲ್ಲಿ ಬರೀ ಸಣ್ಣ ಸಣ್ಣ ಕಲ್ಲುಗಳು ಇರುವುದು ಕಂಡು ಬಂದಿದೆ. ಗಾಬರಿಯಿಂದ ಎಲ್ಲಾ ಕಡೆ ನೋಡುವಷ್ಟರಲ್ಲಿ ಅಪರಿಚಿತರು ಪರಾರಿಯಾಗಿದ್ದಾರೆ.

ಮಹಿಳೆ ಬ್ಯಾಗನ್ನೆಲ್ಲಾ ಹುಡುಕಾಡಿದರೂ ಸರಗಳು ಕಾಣಿಸಲಿಲ್ಲ. ಸರವನ್ನು ಬಿಚ್ಚಿಸಿ ಪೇಪರ್ ನಲ್ಲಿ ಹಾಕುವ ರೀತಿ ನಟನೆ ಮಾಡಿ ಮಹಿಳೆಗೆ ಮೋಸ ಮಾಡಿರುವ ಬಗ್ಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಒಟ್ಟು 3,28,000 ರೂ. ಮೌಲ್ಯದ 81 ಗ್ರಾಂ ಚಿನ್ನಾಭರಣವನ್ನ ಪೊಲೀಸರಂತೆ ನಟಿಸಿ ವಂಚಿಸಿದ್ದಾರೆ.

ಇದನ್ನೂ ಓದಿ-https://suddilive.in/archives/9748

Related Articles

Leave a Reply

Your email address will not be published. Required fields are marked *

Back to top button