ಕ್ರೈಂ ನ್ಯೂಸ್

ತೀರ್ಥಹಳ್ಳಿಯಲ್ಲಿ ಬಾಲಕ ನೀರು ಪಾಲು, ಶಿವಮೊಗ್ಗದಲ್ಲಿ ವಿಷಸೇವಿಸಿ ವೃದ್ಧರು ಆತ್ಮಹತ್ಯೆ?

ಸುದ್ದಿಲೈವ್/ತೀರ್ಥಹಳ್ಳಿ/ರಿಪ್ಪನ್ ಪೇಟೆ/ಶಿವಮೊಗ್ಗ

ಜಿಲ್ಲೆಯಲ್ಲಿ ಇಂದು ಮೂರು ಸಾವು ಪ್ರಕರಣ ನಡೆದಿದ್ದು ತೀರ್ಥಹಳ್ಳಿ, ರಿಪ್ಪನ್‌ಪೇಟೆ ಹಾಗೂ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತೀರ್ಥಹಳ್ಳಿಯ ಜಾತ್ರೆ ಆರಂಭವಾಗಲು ಒಂದು ದಿನ ಬಾಕಿ ಇರುವಾಗಲೇ ತುಂಗ ನದಿಗೆ ಸ್ನಾನಕ್ಕೆ ಇಳಿದಿದ್ದ ಬಾಲಕ ನೀರು ಪಾಲಾಗಿರುವ ಘಟನೆ ಇಂದು ಮಧ್ಯಾಹ್ನ 12 ಗಂಟೆಯ ಆಸುಪಾಸಿನಲ್ಲಿ ನಡೆದಿದೆ.

ತೀರ್ಥಹಳ್ಳಿಯ ಜಾತ್ರೆ ನಾಳೆಯಿಂದ ಮೂರು ದಿನಗಳ ವರೆಗೆ ಭರ್ಜರಿಯಾಗಿ ನಡೆಯಲಿದೆ. ನಾಳೆ ಆರಂಭವಾಗಲು ಜಾತ್ರೆಯ ಅಂಗಡಿ ಇಡಲು ಬಿಹಾರದಿಂದ ಬಂದಿದ್ದ ಬಾಲಕ ತುಂಗ ನದಿಗೆ ಈಜಲು ಹೋದಾಗ ನೀರು ಪಾಲಾಗಿದ್ದಾನೆ.

ಆತನಿಗಾಗಿ ಶೋದಕಾರ್ಯ ಆರಂಭವಾಗಿದೆ. ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿಗಳು ಶೋಧಕಾರ್ಯದಲ್ಲಿ ತೊಡಗಿದ್ದಾರೆ. ಆತನ ಪತ್ತೆ ಇನ್ನೂ ಆಗಿಲ್ಲ.

ಬಾಲಕಿ ಆತ್ಮಹತ್ಯೆ

ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 11 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿ  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಶುಗರ್ ಫ್ಯಾಕ್ಟರಿ ಬಳಿ ವೃದ್ಧರ ಶವ ಪತ್ತೆ

ಶಿವಮೊಗ್ಗದ ಶುಗರ್ ಫ್ಯಾಕ್ಟರ ಬಳಿ ವೃದ್ಧ ಜೋಡಿಯ ಶವ ಪತ್ತೆಯಾಗಿದ್ದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಈ ಮೃತ ದೇಹಗಳು ಪತ್ತೆಯಾಗಿದೆ. ಇಂದು ಸಂಜೆ‌ ಈ ಘಟನೆ ನಡೆದಿದೆ. ಅಪರಿಚಿತ ಶವದ ಗುರುತು ಪತ್ತೆಯಾಗಬೇಕಿದೆ.‌ ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.‌

ಇದನ್ನೂ ಓದಿ-https://suddilive.in/archives/6576

Related Articles

Leave a Reply

Your email address will not be published. Required fields are marked *

Back to top button