ಕ್ರೈಂ ನ್ಯೂಸ್

16 ಕೋಳಿಗಳ ತಿಂದು ಹಾಕಿದ ಬೀದಿ ನಾಯಿಗಳು

ಶಿರಾಳಕೊಪ್ಪ ಪೋಲಿಸ್ ಠಾಣೆಯಲ್ಲಿ ಪುರಸಭಾ ಅಧಿಕಾರಿಗಳ ವಿರುದ್ಧ ದೂರು ನೀಡಲು ಮುಂದಾದ ಮಾಲೀಕ

16 ಕೋಳಿಗಳ ತಿಂದು ಹಾಕಿದ ಬೀದಿ ನಾಯಿಗಳು,  ಶಿರಾಳಕೊಪ್ಪ ಪೋಲಿಸ್ ಠಾಣೆಯಲ್ಲಿ ಪುರಸಭಾ ಅಧಿಕಾರಿಗಳ ವಿರುದ್ಧ ದೂರು ನೀಡಲು ಮಾಲೀಕರು ಮುಂದಾಗಿದ್ದಾರೆ.

ಸುದ್ದಿಲೈವ್/ಶಿಕಾರಿಪುರ

ಮನೆಯಲ್ಲಿ ಸಾಕಿದ್ದ 16 ಕೋಳಿಗಳನ್ನು ಬೀದಿನಾಯಿಗಳು ತಿಂದು ಹಾಕಿರುವ ಘಟನೆ ತಾಲೂಕಿನ
ಶಿರಾಳಕೊಪ್ಪ ಪುರಸಭಾ ವ್ಯಾಪ್ತಿಯ ಆನವಟ್ಟಿ ರಸ್ತೆಯಲ್ಲಿ ನಡೆದಿದೆ.

ಶಿರಾಳಕೊಪ್ಪದ ನಿವಾಸಿ ಪ್ರಾಣಿ ಹಾಗೂ ಪಕ್ಷಿ ಪ್ರಿಯ ಸುಹೈಲ್ ಎಂಬುವರು 9 ನಾಟಿ ಕೋಳಿ ಹಾಗೂ 7 ವಿದೇಶಿ ತಳಿಯ ಕೋಳಿಗಳನ್ನು ಸಾಕಿದ್ದು, ಮನೆಯ ಹಿಂಭಾಗದಲ್ಲಿ ನಾಯಿಗಳು ಬರದಂತೆ ವ್ಯವಸ್ಥೆ ಮಾಡಿಕೊಂಡಿದ್ದರು, ಅದರೆ ಗುರುವಾರ ಮಧ್ಯಾಹ್ನ ಸುಮಾರಿಗೆ ಏಕಾಏಕಿ ಐದಾರು ಬೀದಿ ನಾಯಿಗಳು ಕೋಳಿಗಳು ಇರುವ ಸ್ಥಳಕ್ಕೆ ಬಂದು 16 ಕೋಳಿಗಳನ್ನು ಸಂಪೂರ್ಣ ತಿಂದು ಹಾಕಿರುವ ಘಟನೆ ನಡೆದಿದೆ, ಇದರಿಂದ ಸುಹೈಲ್ ಅವರಿಗೆ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ.ನಾಯಿಗಳು ಕೋಳಿಗಳನ್ನು ಹಿಡಿಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾ ಕಣ್ಣಿನಲ್ಲಿ ಸೇರೆಯಾಗಿದೆ

ಅಧಿಕಾರಿಗಳ ವಿರುದ್ಧ ಪೋಲಿಸ್ ಠಾಣೆಯಲ್ಲಿ ದೂರು ನೀಡಲು ಮುಂದಾದ ಸುಹೈಲ್

ಇನ್ನು ಶಿರಾಳಕೊಪ್ಪ ಪುರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಅನೇಕ ಘಟನೆಗಳು ನಡೆದಿವೆ, ಪುರಸಭಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ, ಹೀಗೆ ಕೋಳಿಗಳನ್ನು ತಿಂದ ನಾಯಿಗಳು ಮುಂದೆ ಬೀದಿಯಲ್ಲಿ ಹೋಗುವ ಮಕ್ಕಳನ್ನು ಬಿಡುತ್ತವೆಯೇ? ಎಂಬ ಅನುಮಾನ ವ್ಯಕ್ತವಾಗಿದೆ.

ಈ ಘಟನೆಗೆ ನೇರ ಕಾರಣ ಪುರಸಭೆಯ ಅಧಿಕಾರಿಗಳು ಹಾಗೂ ಸ್ಥಳೀಯ ಸದಸ್ಯರು, ತುಂಬಾ ನೋವು ಉಂಟಾಗುತ್ತದೆ, ಬೀದಿ ನಾಯಿಗಳ ಹಾವಳಿಯಿಂದ ತತ್ತರಿಸಿ ಹೋಗಿದ್ದೇವೆ, ಸರಿಸುಮಾರು 35 ಸಾವಿರ ರೊ ನಷ್ಟವಾಗಿದೆ, ಸ್ವಲ್ಪ ದಿನಗಳು ಕಳೆದರೆ ಶಿರಾಳಕೊಪ್ಪದಲ್ಲಿ ನಾಯಿಗಳ ಪ್ರಪಂಚ ಸೃಷ್ಟಿಯಾಗುತ್ತದೆ, ಅಧಿಕಾರಿಗಳಿಗೆ ಹಲವು ಬಾರಿ ಸಾರ್ವಜನಿಕರು ಮನವಿ ಮಾಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲ, ನನ್ನ ಕೋಳಿಗಳ ಸಾವಿಗೆ ಪುರಸಭೆಯ ಅಧಿಕಾರಿಗಳು ನೇರ ಕಾರಣ, ಇನ್ನು ಪಶು ವೈದ್ಯರಿಗೆ ಸಂಪರ್ಕಿಸಿದರೆ ನೋ ರೆಸ್ಪಾನ್ಸ್, ಇಲ್ಲಿವರೆಗೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಅಗಮಿಸಿಲ್ಲ , ನನ್ನಗೆ ಅಗಿರು ನಷ್ಟ ಕಾನೂನು ಪ್ರಕಾರ ಪಡೆದುಕೊಳ್ಳುತ್ತಾನೆ, ಬೀದಿ ನಾಯಿಗಳ ಹಾವಳಿ ತಡೆಯಾದೆ ಮೌನವಾಗಿರುವ ಅಧಿಕಾರಿಗಳ ವಿರುದ್ಧ ಶಿರಾಳಕೊಪ್ಪ ಪೋಲಿಸ್ ಠಾಣೆಯಲ್ಲಿ ಪ್ರಾಣಿಗಳ ಮೇಲಿನ ಕ್ರೋರ ತಡೆ ಕಾಯಿದೆ 1960 ಅಡಿಯಲ್ಲಿ ಶುಕ್ರವಾರ ದೂರು ನೀಡಲಾಗುವುದು ಎಂದು ಅವರು ಹೇಳಿದರು.

ಶಿರಾಳಕೊಪ್ಪ ಪುರಸಭಾ ಅಧಿಕಾರಿಗಳು ತಕ್ಷಣ ಗಮನ ಹರಿಸಿ ಮುಂದೆ ಈ ರೀತಿ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಇಂದು ಕೋಳಿಗಳ ಮೇಲೆ ದಾಳಿ ನಾಳೆ ಮಕ್ಕಳ ಮೇಲೆ ದಾಳಿ ಮುಂದೆ ಒಂದು ದಿನ ದೊಡ್ಡ ಅನುಹುತ ಆಗದಂತೆ ಕ್ರಮ ಕೈಗೊಳ್ಳಬೇಕು.

ಇದನ್ನೂ ಓದಿ-https://suddilive.in/archives/7178

Related Articles

Leave a Reply

Your email address will not be published. Required fields are marked *

Back to top button