ಶಿಕಾರಿಪುರ ತಾಲೂಕಿನ ಬಿಜೆಪಿ ಅಧ್ಯಕ್ಷನ ವಿರುದ್ಧ ಎಫ್ಐಆರ್

ಸುದ್ದಿಲೈವ್/ಶಿಕಾರಿಪುರ

ಶಿಕಾರಿಪುರ ತಾಲೂಕಿನ ಬಿಜೆಪಿ ಅಧ್ಯಕ್ಷ ಹಾಗೂ ಅರಶಿಣಗೆರೆ ಅಧ್ಯಕ್ಷ ವೀರೇಂದ್ರ ಪಾಟೀಲ್ ಅವರು ಜಾಗದ ವಿಚಾರವಾಗಿ ಮಹಿಳೆ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ನಡೆದಿದೆ.
ಅರಶಿಣಗೆರೆಯಲ್ಲಿ ವೀರೇಂದ್ರ ಪಾಟೀಲ್ ಶರ್ಟ್ ಹರಿದ ಸ್ಥಿತಿಯಲ್ಲಿ ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ ದೃಶ್ಯವನ್ನು ಮಹಿಳೆಯ ಕುಟುಂಬಸ್ಥರು ಮೊಬೈಲ್ನಲ್ಲಿ ಸೆರೆ ಹಿಡಿದ್ದಾರೆ. ಈ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಗುಂಪು ಕಟ್ಟಿಕೊಂಡು ಶೋಭಾ ಹಾಗೂ ಪತಿ ರಾಮು ಎಂಬುವರ ಮನೆಗೆ ನುಗ್ಗಿದ ವೀರೇಂದ್ರ ಪಾಟೀಲ್, ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಹಲವು ಬಾರಿ ಈ ರೀತಿ ಗಲಾಟೆ ಮಾಡಿರುವುದಾಗಿ ಕುಟುಂಬಸ್ಥರು ಅರೋಪಿಸುತ್ತಿದ್ದಾರೆ.
ವಿಡಿಯೋದಲ್ಲಿ ಇರುವಂತೆ, ವೀರೇಂದ್ರ ಪಾಟೀಲ್ ಅವರು ಮಹಿಳೆ ಶೋಭಾ ಅವರ ಕುತ್ತಿಗೆ, ಕೈ ಹಿಡಿದು ಅವಾಜ್ ಹಾಕಿದ್ದನ್ನು ಕೂಡ ಕಾಣಬಹುದು. ಅಲ್ಲದೆ, ವೀರೇಂದ್ರ ಮತ್ತು ಮಹಿಳೆ ನಡುವಿನ ಹೊಡೆದಾಟದ ವೇಳೆ ಮಹಿಳೆಯ ಮಗಳು ಕಿರುಚಾಡುವುದನ್ನು ಕೇಳಬಹುದು ಮತ್ತು ಅಮ್ಮನ ಬಟ್ಟೆ ಹರಿಯುತ್ತಿದ್ದಾರೆ ಎಂದು ಹೇಳುವುದನ್ನು ಕೇಳಬಹುದು.
ಪ್ರಕರಣ ಸಂಬಂಧ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಧ್ಯಕ್ಷ ವೀರೇಂದ್ರ ಪಾಟೀಲ್ ಅವರು ಸಹ ಮಹಿಳೆಯ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಎರಡೂ ದೂರು 354(B) ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/2823
