ರಾಜಕೀಯ ಸುದ್ದಿಗಳು

ನನ್ನ ಎದೆ ಸೀಳಿದ್ರೆ ರಾಮ ಸಿದ್ದರಾಮ ಇಬ್ಬರೂ ಕಾಣ್ತಾರ-ಪ್ರದೀಪ್ ಈಶ್ವರ್

ಸುದ್ದಿಲೈವ್/ಶಿವಮೊಗ್ಗ

ನನ್ನ ಆರಾಧ್ಯ ದೈವ ಶ್ರೀ ರಾಮ ಎಂದು ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮ ಮಂದಿರದ ವಿಚಾರದಲ್ಲಿ ನನ್ನ ಎದೆ ಸೀಳಿದರೆ ಸಿದ್ದರಾಮಯ್ಯ ಮತ್ತು ರಾಮ ಕಾಣ್ತಾನೆ. ಬಿಜೆಪಿಯವರ ತರ ರಾಮನನ್ನ ರಾಜಕೀಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.‌ ಸಾರ್ವಜನಿಕರು ರಾಮನ ವಿಚಾರದಲ್ಲಿ ಬಿಜೆಪಿಯವರು ಮಾಡುವ ಭಾಷಣದಿಂದ ಉದ್ವೇಗಕ್ಕೆ ಒಳಗಾಗಿ ಅವರ ಕುಟುಂಬವನ್ನ‌ ಬೀದಿಗೆ ತರಲು ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಯಾರೂ ಸಹ ರಾಜಕಾರಣಿಗಳ ಹಿಂದೆ ಬರಬೇಡಿ. ಹೆಚ್ಚು ಕಮ್ಮಿ ಆದರೆ ನಿಮ್ಮ ಕುಟುಂಬಕ್ಕೆ ಯಾರೂ ಬರೊಲ್ಲ. ಕಾಂಗ್ರೆಸಿಗರಾದ ನಾವು ಹಿಂದೂ, ಮುಸ್ಲೀಂ ಕ್ರಿಶ್ಚಿಯನ್ ಸಮಾನವಾಗಿ ಕಾಣುವ ಸಮಾಜ ಎಂದು ಹೇಳಿದರು. ಅಯೋಧ್ಯ ವಿಚಾರದಲ್ಲಿ ಕಾಂಗ್ರೆಸ್ ಇರಿಸು ಮುರಿಸಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಅಯೋಧ್ಯ‌ದಲ್ಲಿನ ರಾಮ ಮಂದಿರವನ್ನ ಬಾಗಿಲ ತೆಗೆಸಿದ್ದು ರಾಜೀವ್ ಗಾಂಧಿ ಅವರು. ಹಾಗಾಗಿ ಕಾಂಗ್ರೆಸ್ ಅಯೋಧ್ಯ ಮಂದಿರದ ವಿಚಾರದಲ್ಲಿ ಏನೂ ಮಾಡಿಲ್ಲವೆಂಬ ಆರೋಪ ಸತ್ಯಕ್ಕೆ ದೂರವಾದುದ್ದು ಎಂದು ಹೇಳುವ ಮೂಲಕ ಬಿಜೆಪಿಗೆ ಟಾಂಗ್ ನೀಡಿದ್ದಾರೆ.

ಸಿದ್ದರಾಮಯ್ಯನವರು ಪಿಎಂ ಗೆ ಬೈದರೆ‌ ಮೋದಿಯವರು ಉತ್ತರಿಸಬೇಕು. ಅನಂತ್ ಕುಮಾರ್ ಹೆಗಡೆ ಮತ್ತು ಪ್ರತಾಪ್ ಸಿಂಹ ಮಾತನಾಡುವುದು ಯಾಕೆ ಎಂದು ಮರು ಪ್ರಶ್ನಿಸಿದ ಪ್ರದೀಪ್ ಈಶ್ವರ್ ಅನಂತ್ ಕುಮಾರ್ ಹೆಗಡೆ ಮತ್ತು ಪ್ರತಾಪ್ ಸಿಂಹ ಸಿದ್ದರಾಮಯ್ಯನವರಿಗೆ ಸಮಾರಲ್ಲ. ಹಾಗಾಗಿ ನೀವು ನಾಲ್ಕು ಕಲ್ಲು ಎಸೆದರೆ ನಾವು ನಾಲ್ಕು ಕಲ್ಲು ಎಸೆಯುತ್ತೇವೆ ಎಂದು ಹೇಳುವ ಮೂಲಕ ಈ ವಿಷಯವನ್ನ‌ ಹಾಗೆ ಜೀವಂತವಾಗಿರಿಸುವ ಪ್ರಯತ್ನ ನಡೆಸಿದರು.

ಸಿದ್ದರಾಮಯ್ಯನವರನ್ನ ಸಂಸದ ಪ್ರತಾಪ್ ಸಿಂಹ‌ ಕೊಚ್ಚೆ ಎನ್ನುತ್ತಾರೆ ಕೊಚ್ಚೆಯನ್ನ ಯಾರು ಇಷ್ಟಪಡುತ್ತಾರೆ. ನಾನು ಬಯೋಲಜಿ ಶಿಕ್ಷಕ ಕೊಚ್ಚೆಯನ್ನ ಹಂದಿಗಳು ಇಷ್ಟಪಡುತ್ತಾರೆ ಎನ್ನುವ ಮೂಲಕ ಮತ್ತೊಂದು ಗಂಭೀರ ನಾಮಕರಣವನ್ನ ಸಂಸದರೆಡೆಗೆ ಎಸೆದಿದ್ದಾರೆ. ಬಿಜೆಪಿಯ ಮಾಜಿ ಸಚಿವ ಸುಧಾಕರ್ ಗೆ ಬುದ್ದಿವಾದ ಹೇಳಿದ ಶಾಸಕರು ಮತ್ತೊಮ್ಮೆ ಚುನಾವಣೆಗೆ ಎದುರಿಸಬೇಡಿ. ನನ್ನನ್ನ ಎದುರಿಸಲು ನಾಲ್ಕು ವರ್ಷ ತಯಾರಿ ಮಾಡಿಕೊಂಡು ಬನ್ನಿ. ಆಗಲೂ ನಿಮ್ಮೂರ ಹುಡುಗ ಸೋಲುತ್ತಾರೆ. ಕಾಂಗ್ರೆಸ್ ಪಕ್ಷ‌ ನನಗೆ ಸಂಸದರ ಸ್ಥಾನಕ್ಕೆ ಸ್ಪರ್ಧಿಸಿ ಎಂದರೆ ಸ್ಪರ್ಧಿಸುವೆ ಎಂದರು.

ಕೊರೋನ ಅವ್ಯವಹಾರದ ಬಗ್ಗೆ ನಾನು ಮಾತನಾಡಿದ್ದರೆ ರಾಜಕಾರಣ ಎನ್ನಬಹುದಿತ್ತು. ಆದರೆ ಬಿಜೆಪಿಯ ಶಾಸಕ ಯತ್ನಾಳ್ ಅವರೇ 40 ಸಾವಿರ ಕೋಟಿ ಹಣ ಅವ್ಯವಹಾರ ನಡೆದಿದೆ ಎಂದಿದ್ದಾರೆ. ಅದಕ್ಕೆ ಉತ್ತರಿಸಲಿ ಎಂದರು.

ಜಲಜೀವನ ಮಿಷನ್ ಕೆಲ ಗ್ರಾಮಗಳಲ್ಲಿ ಇನ್ನೂ ಆರಂಭವಾಗಿಲ್ಲ. ಜನಜೀವನ್‌ ಮಿಷನ್ ಸಮರ್ಪಕವಾಗಿ ನೆರವೇರಲು ಇನ್ನೂ ಕನಿಷ್ಠ ಎರಡು ವರ್ಷ ಬೇಕಿದೆ. ಚಿಕ್ಕಬುಳ್ಳಾಪುರದಲ್ಲಿ ವ್ಯಾಪಕವಾಗಿ ಕ್ರಶರ್ ಗಳ ಹಾವಳಿ ಹೆಚ್ಚಿದ್ದರು, ಪ್ರದೀಪ್ ಈಶ್ವರ್ ಮೌನಕ್ಕೆ ಜಾರಿದ್ದಾರಾ ಎಂಬ ಪ್ರಶ್ನೆಗೂ ಉತ್ತರಿಸಿದ ಶಾಸಕತು ಆಂಧ್ರ ಪ್ರದೇಶದ ಸಿಎಂ ಜಗನ್ ಮೋಹನ್ ಕ್ರಶರ್ ನಿಲ್ಸಲಾಗಿದೆ ಮಾಜಿ ಸಚಿವರ ಸುಧಾಕರ್ ಅವರ ಕ್ರಶರ್ ಗೆ ಎರಡುನೋಟೀಸ್ ನೀಡಲಾಗಿದೆ. ರಾಜಿ ರಾಜಕಾರಣ ಮಾಡಿಕೊಳ್ಳಲ್ಲ.‌ ಏಕಾಏಕಿ ಸುಧಾಕರ್ ಅವರ ಕ್ರಶರ್ ಮುಚ್ಚಿಸಿದರೆ ದ್ವೇಷದ ರಾಜಕಾರಣ ಎನ್ನಲಾಗುತ್ತದೆ. ಹಾಗಾಗಿ ನೋಟೀಸ್ ನೀಡಲಾಗಿದೆ ಎಂದರು.

ಇದನ್ನೂ ಓದಿ-https://suddilive.in/archives/7165

Related Articles

Leave a Reply

Your email address will not be published. Required fields are marked *

Back to top button