ರಾಜಕೀಯ ಸುದ್ದಿಗಳು

ನಮ್ಮ ಕಾರ್ಯಕರ್ತರಿಗೂ ಧಮಕಿ-ಸಂಸದ ರಾಘವೇಂದ್ರ

ಸುದ್ದಿಲೈವ್/ಶಿವಮೊಗ್ಗ

ಮೊದಲು ಕಮ್ಯೂನಸ್ಟ್ ಪಕ್ಷ ದೇಶದಲ್ಲಿ ಅತಿದೊಡ್ಡ ಪಕ್ಷವಾಗಿತ್ತು. ಈಗ ಬಿಜೆಪಿ ವಿಶ್ವದಲ್ಲಿಯೇ ದೊಡ್ಡಪಕ್ಷವಾಗಿ ಹೊರಹೊಮ್ಮಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.

ನಗರದ ಸೈನ್ಸ್ ಮೈದಾನದಲ್ಲಿ ಪೇಜ್ ಪ್ರಮುಖರ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿ, ಶಿವಮೊಗ್ಗಕ್ಕೆ ಪ್ರಧಾನಿ‌ಮೋದಿ ಮೂರು ಬಾರಿ ಬಂದು ಹೋಗಿದ್ದು ಇದು ಬಿಜೆಪಿ ಕಾರ್ಯಕರ್ತರ ಶ್ರಮವಿದೆ ಎಂದರು.

ಶಿವಮೊಗ್ಗಕ್ಕೆ ಪ್ರಧಾನಿ ಬಂದಾಗ ರಸ್ತೆಯ‌ ಎರಡೂ ಎಕ್ಕೆಗಳಲ್ಲಿ ನಿಂತು ಕಣ್ಣೀರು ಹಾಕಿರುವ ದೃಶ್ಯಗಳು ಲಭ್ಯವಾಗಿದ್ದವು.‌ ಒಂದು ಕಾಲದಲ್ಲಿ ಗ್ರಾಮಪಂಚಾಯಿತಿ ಗೆಲ್ಲಲು ಸಾಧ್ಯವಾಗದ ಸ್ಥಿತಿಯಿಂದ ಬಿಜೆಪಿ ಬೆಳೆದು ಬಂದಿದೆ.

ಆರ್ಟಿಕಲ್ 370, ಅಯೋಧ್ಯದಲ್ಲಿ ಬಾಲರಾಮನ ಪ್ರತಿಷ್ಠಾಪನೆ, ಭಾರತೀಯ ವಿದ್ಯಾರ್ಥಿಗಳನ್ನ ಉಕ್ರೇನ್ ನಿಂದ ಕರೆದುಕೊಂಡು ಬಂದ ಘಟನೆ, ಸೌದಿಯಲ್ಲಿ ಆರ್ಮಿಗಳಿಗೆ ಗಲ್ಲುಶಿಕ್ಷೆ ಉಂಟಾದಾಗ ಮೋದಿಯವರ ಪಾತ್ರ ಏನು ಎಂಬುದನ್ನ ನಾವು ಮರೆಯಲು ಸಾಧ್ಯವಿಲ್ಲ.‌ ಹಾಗಾಗಿ ಮೋದಿ‌ಕೈಯಲ್ಲಿ ಬಾರತ ಸುರಕ್ಷತೆಯಾಗಿದೆ ಎಂದರು.

ಈ ಚುನಾವಣೆ ಪಕ್ಷವನ್ನ ಅಧಿಕಾರಕ್ಕೆ ತರುವ ವಿಚಾರವಾಗದೆ, ರಾಷ್ಟದ ಸುರಕ್ಷತೆಯ ಚುನಾವಣೆ ಆಗಿದೆ. ಶಿವಮೊಗ್ಗದಲ್ಲಿ 3½ ಲಕ್ಷ ಮನೆಗಳಿದ್ದರೆ ಕೇವಲ 1½ ಲಕ್ಷದ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಇತ್ತು. ಆದರೆ ಮೋದಿ ಪ್ರಧಾನಿಯಾದ ಮೇಲೆ 3½ ಲಕ್ಷ ಜನರಿಗೆ ಕುಡೀಯುವ ನೀರನ್ನ ಒದಗಿಸಲಾಗಿದೆ ಎಂದರು.

ಶಿವಮೊಗ್ಗದಲ್ಲಿ ಅಭಿವೃದ್ಧಿ ಶಕೆ ಆರಂಭವಾಗಿದ್ದು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸರ್ಕಾರವಿದ್ದಾಗ. ಮೆಡಿಕಲ್, ಆಯುರ್ವೇದಿಕ್, ವೆಟರ್ನಿಟಿ, ಕೇಂದ್ರೀಯ ವಿದ್ಯಾಲಯ, ಆಕಾಶವಾಣಿಗೆ ಟ್ರಾನ್ಸ್ಮೀಟರ್ ಅಳವಡಿಕೆ, ಇಎಸ್ ಐ ಆಸ್ಪತ್ರೆ, ಸಿಜಿಎಸ್ ಸಿ ಆಸ್ಪತ್ರೆ, ಟ್ರಾಫಿಕ್ ಕ್ಲಿಯರೆನ್ಸ್, ಏರ್ ಪೋರ್ಟ್ ಮೊದಲಾದ ಅಭಿವೃದ್ಧಿ ಕಾರ್ಯ ಆರಂಭಿಸಲಾಗುವುದು.

ನಗರದಲ್ಲಿ ಶುಗರ್ ಕಾರ್ಖಾನೆ, ಎಂಪಿಎಂ ಮುಚ್ಚಲಾಯಿತು. ಕೇವಲ ಮೆಟ್ರೋಪಾಲಿಟಿನ್ ಸಿಟಿಯಲ್ಲಿ ಸೀಮಿತವಾಗದೆ ಜಿಲ್ಲಾ ಘಟಕ ಮತ್ತು ತಾಲೂಕು ಘಟಕಕ್ಕೆ ಶಾಹೀ ಗಾರ್ಮೆಂಟ್ಸನ್ನ ಸ್ಥಾಪಿಸಲಾಯಿತು. ಜನೌಷಧಿ ಕೇಂದ್ರವನ್ನ ಮುಂದಿನ ದಿನಗಳಲ್ಲಿ ಗ್ರಾಮಪಂಚಾಯಿತಿಯಲ್ಲಿ ಸ್ಥಾಪಿಸಲಾಗುವುದು. 24 ರೂ.ಗಳಿಗೆ ವಿಮೆ ಮಾಡಿಸುವ ಕೆಲಸ ಆಗಿದ್ದು ಮೋದಿ ಸರ್ಕಾರದ್ದು ಎಂದರು.

ಕಾಮತ್ ಎಂಬ ಕಾರ್ಯಕರ್ತನಿಗೆ ಧಮಿಕಿ ಬಂದಿದೆ. ಬಿಜೆಪಿ ಕಾರ್ಯಕರ್ತ ಹೆದರಿಕೊಂಡು ಕೆಲಸ ಮಾಡುವಂತಿಲ್ಲ ಎಂದು ರಾಘವೇಂದ್ರ ಕಾರ್ಯಕರ್ತರ ಬೆನ್ನಿಗೆ ನಿಲ್ಲುವ ಭರವಸೆ ನೀಡಿದರು.

ಧಮಕಿ ಚುನಾವಣೆ

ಆದರೆ ಈ ಬಾರಿಯ ಚುನಾವಣೆಯ ವೇಳೆ ಈಸ್ವರಪ್ಪನವರ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಯ ಘೋಷಣೆ ಆದ ನಂತರ ಈಶ್ವರಪ್ಪನವರೂ ಸಹ ನಮ್ಮ ಕಾರ್ಯಕರ್ತರಿಗೆ ಫೋನ್ ಕರೆಗಳು ಬರ್ತಾ ಇವೆ. ಕೆಲವರು‌ ಫೋನ್ ನಿಂದಲೇ ನಮ್ಮ ಪ್ರಚಾರಕ್ಕೆ ಬರಲಿಲ್ಲ ಎಂದು ಹೇಳುತ್ತಾ ಬಂದಿದಿದ್ದಾರೆ.

ಆದರೆ ಇವತ್ತು ಸಂಸದರು ಸಹ‌ನಮ್ಮ ಕಾರ್ಯಕರ್ತರಿಗೆ ಧಮ್ಕಿ ಬರ್ತಾ ಇದೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದೆ. ಯಾರು ಧಮ್ಕಿ ಹಾಕಿದರು ಎಂಬುದು ಮಾತ್ರ ಬಾಯಿಬಿಡಲಿಲ್ಲ. ಇದರಿಂದ ಈ ಬಾರಿ ಧಮಕಿ ಚುನಾವಣೆ ಶಿವಮೊಗ್ಗದಲ್ಲಿ ನಡೆಯುತ್ತಿದೆಯಾ ಎಂಬ ಅನುಮಾನವೂ ಹುಟ್ಟಿದೆ.

ಇದನ್ನೂ ಓದಿ-https://suddilive.in/archives/11833

Related Articles

Leave a Reply

Your email address will not be published. Required fields are marked *

Back to top button