ರಾಜಕೀಯ ಸುದ್ದಿಗಳು

ಆರ್ ಆಶೋಕ್ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನಿಡುವಂತೆ ಹಿಂದೂ ಕಾರ್ಯಕರ್ತರ ಬಿಗಿ ಪಟ್ಟು

ಸುದ್ದಿಲೈವ್/ಶಿವಮೊಗ್ಗ

ಮಾಜಿ ಡಿಸಿಎಂ ವಿರುದ್ಧ ವಿಹೆಚ್ ಪಿ ಮತ್ತು ಬಜರಂಗದಳದ ಕಾರ್ಯಕರ್ತರು ತಿರುಗಿಬಿದ್ದಿದ್ದಾರೆ. ಆರ್. ಅಶೋಕ್ ರವರನ್ನ ವಿಪಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ಆಗ್ರಹಿಸಿ ಹಿಂದೂ ಘಟನೆಯ ಕಾರ್ಯಕರ್ತರು ಇಂದು ಶಾಸಕ ಚೆನ್ನಬಸಪ್ಪನವರಿಗೆ ಮತ್ತು ಸಂಸದ ರಾಘವೇಂದ್ರರಿಗೆ ಮನವಿ ಸಲ್ಲಿಸಿದ್ದಾರೆ.‌

ವಿಧಾನ ಪರಿಷತ್ ಅಧಿವೇಶನದಲ್ಲಿ ಮಂಗಳೂರಿನ ಶಿಕ್ಷಕಿಯೊಬ್ಬರು ಹಿಂದೂಗಳ ಆರಾಧ್ಯ ಧೈವ ಭಗವಾನ್ ಶ್ರೀರಾಮಚಂದ್ರ ಮತ್ತು ಹಿಂದೂಗಳ ವಿರುಧ್ದ ಅಪಮಾನ ಮಾಡಿದ್ದಾರೆ ಎಂಬ ವಿಷಯದ ಮೇಲಿನ ಚರ್ಚೆಯ ವೇಳೆ ಸರ್ಕಾರಕ್ಕೆ ದೈರ್ಯವಾಗಿ ಕ್ರಮ ಜರುಗಿಸುವಂತೆ ಒತ್ತಾಯಿಸುವ ಭರದಲ್ಲಿ ವಿಪಕ್ಷ ನಾಯಕರು ಹಿಂದೂ ಕಾರ್ಯಕರ್ತರನ್ನ ಅವಮಾನಿಸಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.

ಮಂಗಳೂರಿನಲ್ಲಿ ಪಬ್ ಒಂದರಲ್ಲಿ ಬಜರಂಗದಳದ ಕಾರ್ಯರ್ತರು ದಾಳಿ ನಡೆಸಿದ್ದರು. ಈ ವೇಳೆ ಮಹಿಳೆಯರ ಮೇಲೆ ಹಲ್ಲೆ ನಡೆದಿತ್ತು. ಈ ಹಲ್ಲೆಯ ಬಗ್ಗೆ ಸದನದಲ್ಲಿ ಚರ್ಚೆ ನಡೆದಿತ್ತು. ಆಗ ನನ್ನ ಮೇಲೆ ಸಿಕ್ಕಾಪಟ್ಟೆ ಒತ್ತಡ ಬಂದಿತ್ತು. ಆದರೂ ನಾನು ಬಜಗದಳದ ಕಾರ್ಯಕರ್ತರನ್ನ ಗೂಂಡಾ‌ ಆಕ್ಟ್ ನಲ್ಲಿ ಬಂಧಿಸಿದ್ದೆ ಎಂದು ಹೇಳಿದ್ದಾರೆ.

ಸದನದಲ್ಲಿ ಹಿಂದೂಗಳ ವಿರುದ್ಧ ಅನ್ಯಾಯವಾಗಿರುವ ಬಗ್ಗೆ ಮಾತನಾಡಿ ಎಂದರೆ ದಿನವಿಡಿ ಹಿಂದೂ, ಹಿಂದೂ ಸಮಾಜ ಎಂದು ಪರದಾಡುವ ಹಿಂದೂ ಕಾರ್ಯಕರ್ತರಿಗೆ ಅವಮಾನ ವಾಗುವಂತೆ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿದ್ದಾರೆ.

ತಕ್ಷಣವೇ ಅವರನ್ನ ವಿಪಕ್ಷ ಸ್ಥಾನದಿಂದ ಕೆಳಗಿಳಿಸಿ ಸಾರ್ವಜನಿಕವಾಗಿ ಬೇಷರತ್ ಕ್ಷಮೆ‌ಕೇಳುವಂತೆ ಸಂಸದರು ಮತ್ತು ಶಾಸಕರಿಗೆ ನೀಡಿದ ಮನವಿಯಲ್ಲಿ ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಇದನ್ನೂ ಓದಿ-https://suddilive.in/archives/9413

Related Articles

Leave a Reply

Your email address will not be published. Required fields are marked *

Back to top button