ರಾಷ್ಟ್ರೀಯ ಸುದ್ದಿಗಳು

ಅಲ್ಲಮನ ಜನ್ಮಸ್ಥಳಕ್ಕೆ ಸಚಿವ ಮಧು ಬಂಗಾರಪ್ಪ‌ ವಿಸಿಟ್!

ಸುದ್ದಿಲೈವ್/ಶಿರಾಳಕೊಪ್ಪ

ದಾರ್ಶನಿಕ ಅಲ್ಲಮ ಪ್ರಭುವಿನ ಜನ್ಮಸ್ಥಳಕ್ಕೆ ಇಂದು ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಸಂಚಲನ ಮೂಡಿಸಿದ್ದಾರೆ. ಮೊನ್ನೆ ಯುವನಿಧಿ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಫ್ರೀಡಂ ಪಾರ್ಕ್ ಗೆ ಅಲ್ಲಮನ ನಾಮಕರಣದ ಪ್ರಸ್ತಾಪ ಮಾಡಿರುವ ಬೆನ್ನಲ್ಲೇ ಸಚಿವರ ಭೇಟಿ ಮಹತ್ವ ಪಡೆದುಕೊಂಡಿದೆ.

ಜಿಲ್ಲೆಯ ಆಸ್ಮಿಥೆಯನ್ನ ಪ್ರಸ್ತಾಪಿಸಿದ ಬೆನ್ನಲ್ಲೇ ದಾರ್ಶನಿಕ ಅಲ್ಲಮ‌ಪ್ರಭುವಿನ ಜನ್ಮ ಸ್ಥಳವಾದ ಬಳ್ಳಿಗಾವಿಗೆ ಭೇಟಿ ನೀಡಿದ ಸಚಿವರು ಅಲ್ಲಮನ ಗದ್ದುಗೆಗೆ ಪೂಜೆ ಸಲ್ಲಿಸಿದ್ದಾರೆ.

ಅಲ್ಲಮ ಪ್ರಭು 12 ನೇ ಶತಮಾನದಲ್ಲಿ ಅನುಭವ ಮಂಟಪದ ಅಧ್ಯಕ್ಷರಾಗಿದ್ದರು. ಕೂಡಲ ಸಂಗಮದಲ್ಲಿ ಅನುಭವ ಮಂಟಪ ಮುಗಿದ ನಂತರ 96 ಸಾವಿರ ಶರಣರು ಅವರರವರ ಜನ್ಮಸ್ಥಳಕ್ಕೆ ವಾಪಾಸಾಗುತ್ತಾರೆ. ಅಲ್ಲಮ ವಾಪಾಸಾಗಿ ಕೆಲವರು ಬಳ್ಳಿಗಾವಿಯಲ್ಲೇ ಐಕ್ಯರಾಗಿದ್ದಾರೆ ಎಂದು ಹೇಳುತ್ತಾರೆ.

ಆದರೆ ಕೆಲವರು ಶ್ರೀಶೈಲದಲ್ಲಿ ಐಕ್ಯರಾಗುತ್ತಾರೆ ಎಂಬ ನಂಬಿಕೆ ಇದೆ. ಅಲ್ಲಮನ ಐಕ್ಯಸ್ಥಳದ ಬಗ್ಗೆ ಗೊಂದಲವಿದ್ದರೂ ಹುಟ್ಟೂರಿನ ಬಗ್ಗೆ ಸ್ಪಷ್ಟತೆ ಇದೆ. ಈ ಜನ್ಮಸ್ಥಳ ಹಲವಾರು ಪ್ರಯತ್ನದ ನಡುವೆಯೂ ಅಭಿವೃದ್ಧಿಯಾಗಿಲ್ಲ. ಗದ್ದುಗೆಯನ್ನ ವಿರಕ್ತಮಠ ಶಿವಲಿಂಗೇಶ್ವರ ಮಹಾಸ್ವಾಮಿಗಳು ನೋಡಿಕೊಳ್ಳುತ್ತಿದ್ದಾರೆ.

ಅಲ್ಲಮನ ತಂದೆ ನಿರಂಕಾರಿ ಮತ್ತು ತಾಯಿ ಸುಜ್ಞಾನಮ್ಮನವರ ಗದ್ದುಗೆ ಪಕ್ಕದಲ್ಲಿಯೇ ಇದೆ.‌ ಆರ್ಕಿಯಾಲಜಿ ಇಲಾಖೆ‌ಯ ತ್ರಿಪುರಾಂತೇಶ್ವರ ದೇವಾಲಯ ಇರುವುದರಿಂದ ಅಲ್ಲಮನ ಗದ್ದುಗೆ ಅಭಿವೃದ್ಧಿ ಕುಂಠಿತವಾಗಿದೆ.‌ ಗದ್ದುಗೆ ಮುಜರಾಯಿ ಇಲಾಖೆಗೆ ಬಂದರೂ ಅಭಿವೃದ್ಧಿಯಾಗಿಲ್ಲ. ಸ್ವಾಮೀಜಿಯವರು ಅಭಿವೃದ್ಧಿಗೆ 10 ಕೋಟಿ ರೂ. ಬೇಡಿಕೆಯ ಮನವಿ ಪತ್ರವನ್ನ ಸಚಿವರಗೆ ನೀಡಿದ್ದಾರೆ.

ಸಚಿವ ಮಧು ಬಂಗಾರಪ್ಪ ಗದ್ದುಗೆಯ ಸರ್ವಾಂಗಿಣ ಅಭಿವೃದ್ಧಿಯ ಕುರಿತು ಭರವಸೆ ನೀಡಿದ್ದಾರೆ. ಇದು ಚುನಾವಣೆಯ ವರೆಗೆ ಮಾತ್ರ ಅಲ್ಲಮನ ನಾಮಕಣ ಮತ್ತು ಸರ್ವಾಂಗೀಣ ಅಭಿವೃದ್ಧಿ ಕಾವು ಉಳಿದುಕೊಳ್ಳುತ್ತದೆಯಾ? ಅಥವಾ ಚುನಾವಣೆಯ ನಂತರವೂ ಅಭಿವೃದ್ಧಿ ಆಗಲಿದೆಯಾ ಕಾದು ನೋಡಬೇಕಿದೆ.

ಇದನ್ನೂ ಓದಿ-https://suddilive.in/archives/6811

Related Articles

Leave a Reply

Your email address will not be published. Required fields are marked *

Back to top button