ರಾಷ್ಟ್ರೀಯ ಸುದ್ದಿಗಳು

ಕರ್ನಾಟಕದ ಆರಂಭಿಕ‌ ಬ್ಯಾಟ್ಸ್ ಮ್ಯಾನ್ ಪ್ರಕಾರ್ ಚತುರ್ವೇದಿ ದ್ವಿಶತಕ

ಪ್ರಕಾಶ್ ಚತುರ್ವೇದಿ ಅವರ ಅಮೋಘ ದ್ವಿಶತಕದಿಂದ ಕರ್ನಾಟಕ ಕ್ರಿಕೆಟ್ 19 ವರ್ಷದ ಒಳಗಿನ ತಂಡ ಉತ್ತಮ ಸ್ಥಿತಿಯಲ್ಲಿದೆ. 

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ನವುಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19 ವರ್ಷದ ಒಳಗಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದ ಪ್ರಕಾರ್ ಚತುರ್ವೇದಿ ಅಮೋಘ‌ ದ್ವಿಶತಕ ಭಾರಿಸಿದ್ದಾರೆ. ಇದರಿಂದ ಕರ್ನಾಟಕದ 572 ಕ್ಕೆ 3 ವಿಕೆಟ್ ಕಳೆದುಕೊಂಡಿದೆ.

ನಾಲ್ಕು ದಿನಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ 380 ರನ್ ಗಳನ್ನ ಕೂಡಿಸಿ ಆಲ್ ಆಟ್ ಆಗಿತ್ತು. ಮೊದಲು ಟಾಸ್ ಗೆದ್ದ ಕರ್ನಾಟಕ ತಂಡ ಮೊದಲು ಬೌಲ್ ಮಾಡಿತ್ತು.

ಮೊದಲ ದಿನ ಮುಂಬೈ ತಂಡ 328 ರನ್ ಗೆ 6 ವಿಕೆಟ್ ಕಳೆದುಕೊಂಡು ಎರಡನೇ ದಿನಕ್ಕೂ ಆಟ ಮುಂದುವರೆಸಿತ್ತು. ಆದರೆ ಕರ್ನಾಟಕ ತಂಡ 380 ರನ್ ಗೆ ಆಲ್ ಔಟ್ ಆಗಿತ್ತು. ಎರಡನೇ ದಿನದ ಅಂತ್ಯಕ್ಕೆ ಕರ್ನಾಟಕ ತಂಡ 280 ರನ್ ಗೆ ಒಂದು ವಿಕಿಟ್ ಕಳೆದುಕೊಂಡಿತ್ತು.

ಮೂರನೇ ದಿನಕ್ಕೆ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ಕರ್ನಾಟಕ 572 ರನ್ ಗೆ 3 ವಿಕೆಟ್ ಕಳೆದುಕೊಂಡಿದೆ. 192 ರನ್ ಗಳ ಲೀಡ್ ನೀಡಿರುವ ತಂಡದಲ್ಲಿ ಆರಂಭಿಕ ಬ್ಯಾಟ್ಸ್ ಮ್ಯಾನ್ ಪ್ರಕಾರ್ ಚತುರ್ವೇದಿ 237 ರನ್ ಗಳಿಸಿ ನಾಟೌಟ್ ಆಗದೆ ಉಳಿದಿದ್ದಾರೆ.

ಕರ್ತಿಕ್ ಎಸ್ ಉ 50, ಹರ್ಷಿತ್ ಧರ್ಮಾನಿ 169 ರನ್ ಕಾರ್ತಿಕೇಯ ಕೆಪಿ 72 ರನ್ ಗಳಿಸಿ ಔಟಗಿದ್ದಾರೆ.ಭಾರತದ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮರ್ಥ್ ದ್ರಾವಿಡ್ 11 ರನ್ ಗಳಿಸಿ ಸ್ಕ್ರೀಜ್ ನಲ್ಲಿದ್ದಾರೆ.

ಇದನ್ನೂ ಓದಿ-https://suddilive.in/archives/6803

Related Articles

Leave a Reply

Your email address will not be published. Required fields are marked *

Back to top button