ರಾಷ್ಟ್ರೀಯ ಸುದ್ದಿಗಳು

ಸ್ವದೇಶಿ ಮೇಳಕ್ಕೆ ಭೂಮಿಪೂಜೆಗೆ

ಸುದ್ದಿಲೈವ್/ಶಿವಮೊಗ್ಗ

ಸ್ವದೇಶಿ ಜಾಗರಣ ವೇದಿಕೆಯಿಂದ ಸ್ವದೇಶಿ ಮೇಳಕ್ಕೆ ಚಾಲನೆ ನೀಡಲಾಗಿದೆ. ಡಿ.6-12 ರವರೆಗೆ ನಗರದ ವಿನೋಬ ನಗರದಲ್ಲಿರುವ ಫ್ರೀಡಂ ಪಾರ್ಕ್ ನಲ್ಲಿ ಸ್ವದೇಶಿ ಮೇಳ ನಡೆಯಲಿದೆ. ದೇಶಿ ವಸ್ತುಗಳನ್ನ ಪ್ರಪಂಚಕ್ಕೆ ಪರಿಚಯಿಸಲು ಈ ಮೇಳ ಹಮ್ಮಿಕೊಳ್ಳಲಾಗಿದ್ದು ರಾಜ್ಯದಲ್ಲಿ ಮಾತ್ರವಲ್ಲ ದೇಶದ ಇತರೆ 100 ಭಾಗಗಳಲ್ಲಿ ನಡೆಯಲಿದೆ.

ಅದರಂತೆ ಶಿವಮೊಗ್ಗದಲ್ಲೂ ನಡೆಯಲಿದೆ. ಈ ಕುರಿತು ಮಾತನಾಡಿದ ಸಂಘದ ಮುಖಂಡ ಜಗದೀಶ್ ಕಾರಂತ್ ಸ್ವದೇಶಿ ಮೇಳಕ್ಕೆ ಆರ್ಥಿಕ ಅವಶ್ಯಕತೆ ಇದೆ. ದೇಶದ 100 ಕಡೆಗಳಲ್ಲಿ ಮೇಳ ನಡೆಯಲಿದೆ. ಅದರಂತೆ ಶಿವಮೊಗ್ಗದಲ್ಲೂ ನಡೆಯುತ್ತಿದ್ದು 230 ಅಂಗಡಿಗಳು ನಡೆಯಲಿವೆ.  ಇದರಲ್ಲಿ 1 ವರೆ  ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು.

ಸಂಸದ ರಾಘವೇಂದ್ರ ಮಾತನಾಡಿ, ಸ್ವದೇಶಿ ಮೇಳವನ್ನ ಸದ್ಬಳಕೆ ಮಾಡಿಕೊಳ್ಳಲು ಕರೆ ನೀಡಿದರು. ರಾಷ್ಟ್ರಕ್ಕೆ ಶಿವಮೊಗ್ಗದಲ್ಲಿ ನಡೆಯುತ್ತಿರುವ  ಮೇಳ ಮಾದರಿಯಾಗಲಿ ಎಂದರು.

ಆರ್ ಎಸ್ ಎಸ್ ನ ಮುಖಂಡ ಪಟ್ಟಾಭಿರಾಮ್ ಭೂಮಿ ಪೂಜೆ ಮಾಡಲಾಗಿದೆ. ಸನಾತನ ಧರ್ಮದ ಬಗ್ಗೆ ಆರ್ ಎಸ್ ಎಸ್ ನ ಸರಸಂಚಚಾಲಕ ಮೋಹನ್ ಭಾಗವತ್ ಮಾತನಾಡಿದ್ದಾರೆ.  ಪ್ರಕೃತಿಯನ್ನ‌ಗೌರವಿಸಿ ಪೂಜಿಸುವುದು ಸನಾತನದ ನಡೆವಳಿಕೆಯಾಗಿದೆ. ಅದರಂತೆ ಸ್ವದೇಶಿ ಬಳಕೆಯೂ ಸಹ ಸನಾತನದ ಭಾಗವಾಗಿದೆ ಎಂದರು.

ಮೇಳಕ್ಕೆ ಬಿಜೆಪಿಯ ಬೂತ್ ನಲ್ಲಿ ಸಂಪರ್ಕ ಶಾಖೆ ನಡೆಸಬೇಕು. ಅವರೆಲ್ಲಾರು ಮೇಳಕ್ಕೆ ಬಂದು ನೋಡುವಂತಾಗಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳು ಇವೆ. ಸಾವಯುವ ಕೃಷಿ, ತ್ರಾಸಿ ತೋಟ, ಆಯುರ್ವೇದಿಕ್ ಶಿಬಿರ ನಡೆಯಲಿದೆ . ಸ್ಥಳೀಯರು ಹೆಚ್ಚಿನ ಭಾಗವಹಿಸುವಂತಾಗಲಿ.

ವ್ಯಾಪಾರದ ಉದ್ದೇಶ ಇದರಲ್ಲಿ ಇಲ್ಲ. ಬದಲಿಗೆ ಸ್ವದೇಶಿ ಬಳಕೆಯ ಮೂಲಕ ಸ್ವದೇಶದ ಜಾಗೃತಿಯ ಕರೆಯಾಗಿದೆ. ಹಿಂದೂ ಸಂಘಟನೆ, ಬಿಜೆಪಿ ಮತ್ತು ಆರ್ ಎಸ್ ನ ಎಲ್ಲರೂ ಭಾಗಿಯಾಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಯುವಕ ಯುವತಿಯರನ್ನ ಕರೆ ತರುವಂತಾಗಲಿ ದೇಶದ ಎಲ್ಲೆಡೆ ನಡೆಯುತ್ತಿದೆ. ಶಿವಮೊಗ್ಗ ಮಾದರಿಯಾಗಲಿ ಎಂದು ಆಶಿಸಿದರು‌.

ಶಾಸಕ ಚೆನ್ನಬಸಪ್ಪ, ಎಂಎಲ್ ಸಿ ಡಿ.ಎಸ್.ಅರುಣ್, ಬಿಜೆಪಿಯ ನಾಯಕರಾದ ಡಾ.ಧನಂಜಯ ಸರ್ಜಿ, ಪಾಲಿಕೆ ಸದಸ್ಯೆ ಸುರೇಖಾ ಮುರುಳೀಧರ್ ಮೊದಲಾದವರು ಭೂಮಿ ಪೂಜೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ-https://suddilive.in/archives/3577

Related Articles

Leave a Reply

Your email address will not be published. Required fields are marked *

Back to top button