ರಾಷ್ಟ್ರೀಯ ಸುದ್ದಿಗಳು
ಆಗಸದಲ್ಲಿಯೇ 5 ಸುತ್ತು ಹಾಕಿದ ವಿಮಾನ, 20 ನಿಮಿಷ ಲ್ಯಾಂಡಿಗ

ಸುದ್ದಿಲೈವ್/ಶಿವಮೊಗ್ಗ

ಬೆಂಗಳೂರು- ಶಿವಮೊಗ್ಗ ಇಂಡಿಗೋ ವಿಮಾನ ಲ್ಯಾಂಡಿಂಗ್ ವಿಳಂಬ ಹಿನ್ನಲೆಯಲ್ಲಿ ನಿಗದಿತ ಸಮಯಕ್ಕೆ ಇಂಡಿಗೋ ವಿಮಾನ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ತಡವಾಗಿ ಲ್ಯಾಂಡಿಗ್ ಆಗಿದೆ.
ಮೋಡ ಕವಿದ ವಾತವರಣ ಹಿನ್ನೆಲೆ ಲ್ಯಾಂಡಿಂಗ್ ವಿಳಂಬವಾಗಿದೆ. ವಿಸಿಬಲಿಟಿ ಇಲ್ಲದ ಹಿನ್ನಲೆಯಲ್ಲಿ ಇಂಡಿಗೋ ವಿಮಾನ ಆಗಸದಲ್ಲಿಯೇ 5 ಸುತ್ತು ರೌಂಡ್ ಹೊಡೆದಿದೆ. ಈ ಹಿಂದೆಯೂ ವಿಮಾನ ಒಮ್ಮೆ ಶಿವಮೊಗ್ಗಕ್ಕೆ ಬಂದು ವಾಪಾಸ್ ಬೆಂಗಳೂರಿಗೆ ಹೋಗಿತ್ತು.
ನಿಗಧಿತ ಸಮಯಕ್ಕಿಂತ 20 ನಿಮಿಷ ತಡವಾಗಿ ವಿಮಾನ ಲ್ಯಾಂಡ್ ಆಗಿದೆ. ಮಾಜಿ ಸಿಎಂ ಬಿಎಸ್ವೈ ಕೂಡ ಇದೇ ವಿಮಾನದಲ್ಲಿ ಶಿವಮೊಗ್ಗಕ್ಕೆ ಆಗಮಿಸಿದರು. ಬೆಳಿಗ್ಗೆ 9.50 ಕ್ಕೆ ಬೆಂಗಳೂರಿನಿಂದ ಹೊರಟಿದ್ದ ವಿಮಾನ 11.05 ಕ್ಕೆ ಲ್ಯಾಂಡ್ ಆಗಬೇಕಿತ್ತು.
ಇದನ್ನೂ ಓದಿ-https://suddilive.in/archives/1078
