ರಾಷ್ಟ್ರೀಯ ಸುದ್ದಿಗಳು

ಸಫಾರಿ ಸುತ್ತಮುತ್ತ ಖಾಸಗಿಯವರ ಹಾವಳಿ-ಕ್ರಮ ಜರುಗುತ್ತಾ?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಶರಾವತಿ ಸಂತ್ರಸ್ತರನ್ನ ಒಕ್ಕಲೆಬ್ಬಿಸಲು ಮಾತ್ರ ಅರಣ್ಯ ಇಲಾಖೆಗೆ ಧಂ ಇರೋದ ಅಥವಾ ಕಾನೂನು ಪಾಲಿಸುವರಿಗೆ ಮಾತ್ರ ಕಾನೂನು ಜಾರಿಯಾಗುತ್ತದೆಯಾ ಎಂಬ ಅಲಿಖಿತ ನಿಯಮಾವಳಿ ಲಯನ್ ಸಫಾರಿಯಲ್ಲಿ ಕಂಡು ಬರುತ್ತಿದೆ.

ಶಿವಮೊಗ್ಗದ ಹೊರವಲಯದಲ್ಲಿರುವ ಲಯನ್ ಸಫಾರಿಯ ಬಫರ್ ಜೋನ್ ಜಾಗದಲ್ಲಿ ಖಾಸಗಿ ಲೇಔಟ್ ತಲೆ ಎತ್ತುತ್ತಿದೆ, ಡಾಂಬರ್ ಆಸ್ಪಾಟ್ ಮಿಕ್ಸಿಂಗ್ ಸೆಂಟರ್ ಇದೆ. ಕಲ್ಲು ಕ್ರಷರ್ ತಲೆ ಎತ್ತುತ್ತಿದೆ. ಇವೆಲ್ಲಾ ಹೇಗೆಸಾಧ್ಯ? ಹಾಗಾದರೆ ಕಾನೂನು ಈ ಖಾಸಗಿಯವರಿಗೆ ಲಾಗೂ ಆಗೊದಿಲ್ವಾ ? ಅಥವಾ ದೇಶದಲ್ಲಿ ಅರಣ್ಯ ಕಾಯ್ದೆಯಲ್ಲಿ ಎರೆಡೆರಡು ಕಾಯ್ದೆಗಳು ಜಾರಿಯಲ್ಲಿವೆಯಾ? ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಖಾಸಗಿ ಲೇ ಔಟ್ ಗೆ ರಸ್ತೆ ನಿರ್ಮಣವಾಗಿದೆ. ಇಲ್ಲಿನ ಖಾಸಗಿ ಲೆ ಔಟ್ ಹಂತ ಹಂತವಾಗಿ ನಿರ್ಮಾಣವಾಗುತ್ತಿದೆ. ಒಮ್ಮೆ ಮನೆಗಳು ತಲೆ‌ ಎತ್ತಿದರೆ ಈ ಮನೆಗಳನ್ನ ತೆರವುಗೊಳಿಸಲು ಮತ್ತೆ ಕಾನೂನು ಹೋರಾಟ ನಡೆಸ ಬೇಕಿದೆ. ಹೋಗಲಿ ಶರಾವತಿ ಸಂತ್ರಸ್ತರಿಗೆ ಭೂಪರಿವರ್ತನೆ ಸಮಸ್ಯೆ ಇದೆ. ಆದರೆ ಬಫರ್ ಜೋನ್ ನಲ್ಲಿ ಖಾಸಗಿಲೇಔಟ್ ನವರಿಗೆ ಭೂಪರಿವರ್ತನೆ, ಅಲಿನೇಷನ್ ಹೇಗೆ ಸಾಧ್ಯ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ.

ಸಫಾರಿ ಜಾಗದ ಬಫರ್ ಜೋನ್ ಗಳನ್ನೇ ಈ ರೀತಿ ಖಾಸಗಿಯವರು ಕಬ್ಜ ಹಾಕುತ್ತಿದ್ದರೂ ಇಲಾಖೆಯ ಮೌನ ಅಚ್ಚರಿ ಮೂಡಿಸಿದೆ. ಈ ಕುರಿತು ವೈಲ್ಡ್ ಲೈಫ್ ಅಧಿಕಾರಿ ಪ್ರಸನ್ನ ಕುಮಾರ್ ಪಟೇಗಾರ್ ಸುದ್ದಿಲೈವ್ ಗೆ ಮಾಹಿತಿ ನೀಡಿ, ನಮ್ಮ ಅಪ್ರೂವೆಲ್ ಗೆ ಇನ್ನೂ ಬಂದಿಲ್ಲ. ಅದು ಅಲಿನೇಷನ್ ಆಗಿರಬೇಕು. ಭೂಪರಿವರ್ತನೆಗೆ ನಮ್ಮ ಒಪ್ಪಿಗೆಗೆ ಬರುತ್ತದೆ. ಇಲ್ಲಿಯ ವರೆಗೆ ನಮ್ಮ ಒಪ್ಪಿಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ಹಂತ ಹಂತವಾಗಿ ಲೇಔಟ್ ನಿರ್ಮಾಣವಾಗುತ್ತಿದೆ. ರಸ್ತೆ ನಿರ್ಮಾಣವಾಗಿದೆ. ವನ್ಯ ಜೀವಿಗಳ ತಾಣದ ಸುತ್ತಮುತ್ತ ನೋಮ್ಯಾನ್ ಏರಿಯಾ ಎಂಬುದಕ್ಕೆ ಬಫರ್ ಜೋನ್ ಎನ್ನಲಾಗುತ್ತದೆ. ಈ ಜಾಗದಲ್ಲಿ ಖಾಸಗಿ ಲೇ ಔಟ್ ನ ಲಗ್ಗೆ ಅಚ್ಚರಿ ಮೂಡಿಸಿದೆ. ಬಫರ್ ಜೋನ್ ನಲ್ಲಿ ಇಷ್ಟು ದೊಡ್ಡದಾಗಿ ಲೇಔಟ್ ನಿರ್ಮಾಣವಾಗುತ್ತಿದ್ದರೂ ನೋಟೀಸ್ ನೀಡದೆ ಇರುವುದು ಅಚ್ಚರಿ ಮೂಡಿಸಿದೆ.

ಅದರಂತೆ ಸಫಾರಿ ಎದುರಿನ ಜಾಗದಲ್ಲಿ ಕಲ್ಲು ಕ್ರಶರ್ ಗಳು ಹೇಗೆ ತಲೆ ಎತ್ತಿವೆ ಗೊತ್ತಿಲ್ಲ. ಇಲಾಖೆ ಇವುಗಳ ಬಗ್ಗೆ ಕ್ರಮಕೈಗೊಳ್ಳಲಿದೆಯಾ ಅಥವಾ ಬಡರೈತನನ್ನ ಹಿಂಡಲು ಮಾತ್ರ ಇದೆಯಾ ಕಾದು ನೋಡಬೇಕಿದೆ.

ಇದನ್ನೂ ಓದಿ-https://suddilive.in/archives/11343

Related Articles

Leave a Reply

Your email address will not be published. Required fields are marked *

Back to top button