ರಾಷ್ಟ್ರೀಯ ಸುದ್ದಿಗಳು

ಸ್ವಚ್ಛ ತೀರ್ಥ ಅಭಿಯಾನಕ್ಕೆ ಸಂಸದ ಮತ್ತು ಶಾಸಕರಿಂದ ಚಾಲನೆ

ಸುದ್ದಿಲೈವ್/ಶಿವಮೊಗ್ಗ

ಅಯೋಧ್ಯ ರಾಮಮಂದಿರ ಉದ್ಘಾಟನೆಯ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು,  ಇಂದಿನಿಂದ ದೇಶದಾದ್ಯಂತ  ದೇವಾಲಯಗಳ ಸ್ವಚ್ಛತಾ ಅಭಿಯಾನ ಆರಂಭಗೊಂಡಿದೆ,

ಸ್ವಚ್ಛ ತೀರ್ಥ ಅಭಿಯಾನವು ಅಯೋಧ್ಯೆಯನ್ನು ಭಾರತದ ಸ್ವಚ್ಛ ನಗರವನ್ನಾಗಿ ಪರಿವರ್ತಿಸಲು ಸಾಮೂಹಿಕ ಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಕರೆಯಿಂದ ಪ್ರೇರಿತವಾಗಿದೆ. ಡಿಸೆಂಬರ್ 30, 2023 ರಂದು ಅಯೋಧ್ಯೆಯಲ್ಲಿ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ನಂತರ, ಜನವರಿ 14 ರಿಂದ 21 ರವರೆಗೆ ಬೃಹತ್ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಲು ದೇಶಾದ್ಯಂತ ಎಲ್ಲಾ ಯಾತ್ರಾ ಸ್ಥಳಗಳು ಮತ್ತು ದೇವಾಲಯಗಳಿಗೆ ಪ್ರಧಾನಮಂತ್ರಿ ಸ್ಪಷ್ಟವಾದ ಕರೆಯನ್ನು ನೀಡಿದ್ದರು.

ಸ್ವಚ್ಛ ಭಾರತ್ ಮಿಷನ್ ಜನವರಿ 14 ಮತ್ತು 21 ರ ನಡುವಿನ ವಾರವನ್ನು ಸ್ವಚ್ಛ ತೀರ್ಥ ಅಭಿಯಾನ ಎಂದು ಘೋಷಿಸುವುದರಿಂದ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಆವರಣಗಳನ್ನು ಮತ್ತು ಅವುಗಳ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿ ಮತ್ತು ಕಸದಿಂದ ಮುಕ್ತವಾಗಿಡಲು ನಡವಳಿಕೆ ಮತ್ತು ಮನೋಭಾವದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತದೆ ಎಂಬ ಭಾವನೆಯ ಅಡಿಯಲ್ಲಿ ಈ ಕಾರ್ಯಕ್ಕೆ ಪ್ರಧಾನಿ ಮೋದಿ ದೇಶಾದ್ಯಂತ ಕರೆ ನೀಡಿದ್ದರು.

ಇದರ ಅಂಗವಾಗಿ ಇಂದು ಶಿವಮೊಗ್ಗದ ಶ್ರೀ ಅರೆಕೇಶ್ವರ ಸ್ವಾಮಿ ದೇವಾಲಯದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಸಂಸದ ರಾಘವೇಂದ್ರ, ಶಾಸಕ ಚೆನ್ನಬಸಪ್ಪ, ಎಂಎಲ್ ಸಿ ರುದ್ರೇಗೌಡ, ಡಿಎಸ್ ಅರುಣ್ ಬಿಜೆಪಿಯ ಗಿರೀಶ್ ಪಟೇಲ್, ಜಗದೀಶ್ ಮೊದಲಾದವರು ಪಾಲ್ಗೊಂಡು ಸ್ವಚ್ಛತಾ ಕಾರ್ಯ ನಡೆಸಿದರು.

ಸಂಸದ ರಾಘವೇಂದ್ರ, ಶಾಸಕ ಚೆನ್ನ ಬಸಪ್ಪ ಹಾಗೂ ಸ್ಥಳೀಯ ಬಿಜೆಪಿ ನಾಯಕರು ಕಸಪೊರಕೆ ಹಿಡಿದು ಸ್ವಚ್ಛಗೊಳಿಸಿದ ದೃಶ್ಯಗಳು ಲಭ್ಯವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ರಾಘವೇಂದ್ರ ಚುನಾವಣೆ ಬಂದ ಸಂದರ್ಭದಲ್ಲಿ ಮಾತ್ರ ಜನರೊಂದಿಗೆ ಬೆರೆಯುವುದಲ್ಲ.‌ ಇಂತಹ‌ ಅಭಿಯಾನದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ದೊರೆತಿದೆ. ಈ ಅವಕಾಶ ನೀಡಿದ ಪ್ರಧಾನಿ‌ ಮೋದಿಗೆ ಧನ್ಯವಾದ ತಿಳಿಸಿದರು.

ಇದನ್ನೂ ಓದಿ-https://suddilive.in/archives/6794

Related Articles

Leave a Reply

Your email address will not be published. Required fields are marked *

Back to top button