ಸ್ಥಳೀಯ ಸುದ್ದಿಗಳು

ತವರು ಮನೆಯಿಂದ ಗಂಡನ ಮನೆಗೆ ಹೋಗಬೇಕಿದ್ದ ಮಹಿಳೆ ಮಕ್ಕಳೊಂದಿಗೆ ನಾಪತ್ತೆ

ಸುದ್ದಿಲೈವ್/ಶಿವಮೊಗ್ಗ

ಮಹಿಳೆಯೋರ್ವಳು ಮಕ್ಕಳ ಸಮೇತ ಕಾಣೆಯಾಗಿದ್ದು,  ಪತ್ನಿ ನಾಪತ್ತೆಯಾಗಿರುವ ಬಗ್ಗೆ ಪತಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತವರು‌ಮನೆಯಿಂದ ಗಂಡನ ಮನೆಗೆ ಹೋಗುವುದಾಗಿ ಹೇಳಿ ಮೂವರು ಮಕ್ಕಳಿಂದ ಮನೆಯಿಂದ ಹೊರಗೆ ಹೋದ ಮಹಿಳೆ ದಿಡೀರ್ ಎಂದು ನಾಪತ್ತೆಯಾಗಿದ್ದಾಳೆ.

ತಮ್ನಡಿಯಹಳ್ಳಿಯ ಹರೀಶ್ ಜೊತೆ 10 ವರ್ಷ ಹಿಂದೆ  ಹೊಸಮನೆಯ 5 ನೇ ತಿರುವಿನ ನಿವಾಸಿ ಭೂಮಿಕಾರನ್ನ ಮದಯವೆಯಾಗಿದ್ದರು. ಗಾನವಿ, ಕೃತಿಕಾ ಮತ್ತು ಸಂಕೇತ ಎಂಬ ಮೂವರು ಮಕ್ಕಳಿದ್ದಾರೆ.

ಡಿ. 24 ರಂದು ಮೂವರು ಮಕ್ಕಳೊಂದಿಗೆ ಹೊಸಮನೆಯ ತವರಿಗೆ ಬಂದಿದ್ದ ಭೂಮಿಕಾ ಡಿ.27 ರಂದು ಹೊಸಮಬೆಯ ತವರಿನಿಂದ‌ ಊರಿಗೆ ಹೋಗುವುದಾಗಿ ಹೇಳಿ ಹೋದವರು ಇದುವರೆಗೂ ಗಂಡನ‌ಮನೆಗೆ ಬಂದಿಲ್ಲ. ಭೂಮಿಕಾ ಮತ್ತು ಮಕ್ಕಳು ನಾಪತ್ತೆಯಾಗಿರುವುದಾಗಿ ಪತಿ ಹರೀಶ್ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮನೆಯವರೆಲ್ಲರೂ ಬಿಆರ್ ಪಿಯಲ್ಲಿದ್ದಾರೆ ಎಂಬ ಮಾಹಿತಿಯ ಆಧಾರದ ಮೇಲೆ ಹೋಗಿ ಬಂದಿದ್ದಾರೆ. ಎಲ್ಲೂ ಪತ್ತೆಯಾಗಿಲ್ಲ. ನಾಪತ್ತೆಗೆ ಕಾರಣ ಏನು ಎಂಬುದು ಇನ್ನೂ ಗೊತ್ತಾಗಬೇಕಿದೆ.

ಇದನ್ಬೂ ಓದಿ-https://suddilive.in/archives/5919

Related Articles

Leave a Reply

Your email address will not be published. Required fields are marked *

Back to top button