ಸ್ಥಳೀಯ ಸುದ್ದಿಗಳು

ಎಎಸ್ಐ ಹರ್ಷರವರಿಗೆ ಸನ್ಮಾನ ಅವತ್ತೇ ಆಗಬೇಕಿತ್ತು! ತಡವಾಗಿದೆ ಅಷ್ಟೆ!

ಸುದ್ದಿಲೈವ್/ಶಿವಮೊಗ್ಗ

ಕೋಟೆ ಎಎಸ್ಐ ಹರ್ಷರವರ ಸಮಯ ಪ್ರಜ್ಞೆಗೆ ಇಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಪ್ರಶಂಸನಾ ಪತ್ರ ಮತ್ತು‌ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.

ನಗರದ ಶಿವಪ್ಪ ನಾಯಕನ ಪ್ರತಿಮೆ ಬಳಿ ಜ.22 ರಂದು ಸಿಹಿ ಹಂಚುವ ಕಾರ್ಯ ನಡೆದಿತ್ತು. ಸಿಹಿ ಹಂಚಿಕೆಯ ವೇಳೆ ಮುಸ್ಲೀಂ ಮಹಿಳೆ ಅಂಜುಂ ಎಂಬುವರು ಅಲ್ಲಾಹೋ ಅಕ್ಬರ್ ಎಂಬ ಘೋಷಣೆ‌ಕೂಗಿ ಕೆಲ ನಿಮಿಷ‌ ಗೊಂದಲ ಉಂಟು ಮಾಡಿದ್ದರು.‌

ಅಲ್ಲೇ ಕರ್ತವ್ಯದಲ್ಲಿದ್ದ ಎಎಸ್ಐ ಹರ್ಷ ರವರು ತಾಳ್ಮೆಯಿಂದ ಕರ್ತವ್ಯ ನಿರ್ವಹಿಸಿದ್ದರು. ಮಾಜಿ ಡಿಸಿಎಂ ಈಶ್ವರಪ್ಪನವರ ಪುತ್ರ ಕಾಂತೇಶ್ ಅವರು ಸ್ಥಳದಲ್ಲಿ ಬಂದು ಅರೆಸ್ಟ್ ಮಾಡಿ ಎಂದು ಆಗ್ರಹಿಸಿದರೂ ಎಎಸ್ಐ ಹರ್ಷ ವಿಚಲಿತರಾಗಿರಲಿಲ್ಲ.

ಅಲ್ಲದೆ ತಕ್ಷಣಕ್ಕೆ ಡಬ್ಲೂ ಪಿಎಸ್ (ಮಹಿಳ ಸಿಬ್ಬಂದಿ) ಸ್ಥಳದಲ್ಲಿ ಇಲ್ಲವಾದಲ್ಲೂ ಸಮರ್ಪಕವಾಗಿ ಪರಿಸ್ಥಿತಿಯನ್ನ‌ ನಿಭಾಯಿಸಿದ್ದರು. ಮಹಿಳೆಯನ್ನ ರಕ್ಷಿಸಿ‌ ಸುರಕ್ಷಿತವಾಗಿ ಸಮಯಪ್ರಜ್ಞೆಯಿಂದ ಠಾಣೆಗೆ ಕರೆದುಕೊಂಡು ಬರುವಲ್ಲಿ‌ ಹರ್ಷರವರ ಪಾತ್ರ ಮಹತ್ವದಾಗಿತ್ತು.  ಬಿಜೆಪಿಗೆ ಟಾಂಗ್ ನೀಡಲು ಎಎಸ್ಐ ಹರ್ಷರವರನ್ನ‌ ಗುರುತಿಸಿ ಪ್ರಶಸ್ತಿ ನೀಡಲಾಗಿದೆ ಎಂಬ ಚರ್ಚೆ ಹುಟ್ಟಬಹುದು.‌ ಆದರೆ ಪೊಲಿಟಿಕಲಿ ಈ ಚರ್ಚೆ ಉತ್ತರಕೊಡಲು ಆಗೊಲ್ಲ. ಆದರೆ ಹರ್ಷರವರ ಕರ್ತವ್ಯ ಪ್ರಜ್ಞೆ ಈಗಿದ್ದನದ್ದಲ್ಲ.

ಇದೇ ಬಾಪೂಜಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತ್ರಿವರ್ಣ ಧ್ವಜ ಹಾರಿಸುವ ವಿಚಾರದಲ್ಲಿ ಉಂಟಾಗಿದ್ದ ಕಲ್ಲು ತೂರಾಟ, ಅದಕ್ಕೆ ಪ್ರತಿಯಾಗಿ ಲಷ್ಕರ್ ಮೊಹಲ್ಲಾದಲ್ಲಿ ಆಯುಧ ಹಿಡಿದು ಓಡಾಡುತ್ತಿದ್ದ ವ್ಯಕ್ತಿಯನ್ನ ಪತ್ತೆ ಮಾಡಿ ಆಯುಧ ವಶಕ್ಕೆ ಪಡೆದು ಸೂಕ್ತ ಕ್ರಮ‌ಜರುಗಿಸಲಾಗಿತ್ತು. ಈ ಕರ್ತವ್ಯದಲ್ಲಿ ಹರ್ಷರವರ ಪಾತ್ರ ಎಂದೂ ಮರೆಯಲು ಸಾಧ್ಯವಿಲ್ಲ. ಕೈಯಲ್ಲಿಯೇ ಆಯುಧವನ್ನ ವಶಕ್ಕೆ ಪಡೆದ ಹರ್ಷ ಕರ್ತವ್ಯ ಪ್ರಜ್ಞೆಯನ್ನ ಮೆರೆದಿದ್ದರು. ಹೀಗೆ ಹರ್ಷರವರ ವಿಷಯದಲ್ಲಿ ರಾಜಕೀಯ ಬೆರೆಸಿದರೆ ಅಸಂಭದ್ಧವಾಗಬಹುದು. ಅವತ್ತೆ ಅವರನ್ನ ಗುರುತಿಸಿ ಗೌರವಿಸಬೇಕಿತ್ತು. ತಡವಾಗಿದೆ ಅಷ್ಟೆ.

ಇದು ಬೇರೆಯವರಿಗೆ ಪೊಲೀಟಿಕಲಿ ಟಾಂಟ್ ಎನಿಸಿದರೂ ಓರ್ವ ಪೊಲೀಸ್ ಅಧಿಕಾರಿಯಾಗಿ ಸೂಕ್ತ ಸಮಯದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಿದ್ದಾರೆ. ಪೊಲೀಸ್ ಇರುವುದು ರಾಜಕಾರಣ ಮಾಡಲು ಅಲ್ಲ, ಕಾನೂನು ಪಾಲನೆ ಮಾಡಲು ಎಂಬುದನ್ನ ಹರ್ಷ ಸಾಬೀತು ಪಡಿಸಿದ್ದಾರೆ. ಅದಕ್ಕೆ ತಕ್ಕಂತೆ ಎಸ್ಪಿಯವರು ಗೌರವಿಸುತ್ತಿರುವುದು ಸಹ ಸಮಂಜಸವಾಗಿದೆ.

ಇದನ್ನೂ ಓದಿ-https://suddilive.in/archives/7600

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373