ಸ್ಥಳೀಯ ಸುದ್ದಿಗಳು

ಶಿವಮೊಗ್ಗ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ದರ ಎಷ್ಟೆಷ್ಟಿವೆ?

ಸುದ್ದಿಲೈವ್/ಶಿವಮೊಗ್ಗ

ಆವಾಗಾವಾಗ ತರಕಾರಿಗಳು ಸುದ್ದಿಯಾಗ್ತಾವೆ. ಒಮ್ಮೆ ಮೆಣಸಿನಕಾಯಿ, ಮತ್ತೊಮ್ಮೆ ಟೆಮೊಟೋ, ಮಗದೊಮ್ಮೆ ಈರುಳ್ಳಿ, ಬೀನ್ಸು ಹೀಗೆ ತರಕಾರಿಗಳು ಸೆಂಚೂರಿ ಬಾರಿಸುತ್ತಿದ್ದಂತೆ ಸುದ್ದಿಗಳಾಗ್ತಾವೆ.

ಈ ಬಾರಿಯ ಸರದಿ ಈರುಳ್ಳಿದು, ಈರುಳ್ಳಿ ಒಮ್ಮೆ ನೂರರ ಗಡಿ ದಾಟಿದ್ದಕ್ಕೆ ಸರ್ಕಾರವನ್ನೇ ಬೀಳಿಸಿದ ಖ್ಯಾತಿಯೂ ಇದೆ. ಹಾಗಾಗಿ ತರಕಾರಿನಾ ಎಂದು ಮೂಗು ಮುರಿಯುವ ಹಾಗಿಲ್ಲ. ದೈನಂದಿನ ಅಡುಗೆಗೆ ತರಕಾರಿಗಳ ಅವಶ್ಯಕ ಈ ಅವಶ್ಯಕ ವಸ್ತುಗಳು ದುಬಾರಿ ಆದರೆ ಸಾಮಾನ್ಯರ ಕೈ ಸುಡಲಿದೆ.

ಈರುಳ್ಳಿ ಇನ್ನೂ 1 ಕೆ.ಜಿ.ಯ ಗಡಿ ದಾಟಿಲ್ಲ ಎಪಿಎಂಸಿಯಲ್ಲಿ 60-70 ರೂ ಕೆಜಿಗೆ ಮಾರಾಟವಾಗುತ್ತಿದೆ. ಹೊರಗಡೆ 70-80 ರೂ. ಮಾರಾಟವಾಗುತ್ತಿದೆ. ಇದು ಕೆ.ಜಿಗೆ ನೂರರ ಗಡಿ ದಾಟಲಿದೆ ಎಂಬುದು ಸಾಮಾನ್ಯರ ಮಾತಾಗಿದೆ. ಈರುಳ್ಳಿ ನೂರರ ಗಡಿ ಹತ್ತಿರ ಬಂದು ವಾರ ಕಳೆದಿವೆ. ಈ ಹಿಂದೆ ಟೆಮೋಟೋ ಕೆಜಿಗೆ 200 ಗಡಿ ದಾಟಿತ್ತು. ಕೆಲ ರೈತರಿಗೆ ಉತ್ತಮ ಆದಾಯವನ್ನೂ ತಂದುಕೊಟ್ಟಿತ್ತು.

150 ರೂ ತಲುಪುವ ನಿರೀಕ್ಷೆ

ಭಾನುವಾರ ಬೆಂಗಳೂರಿನಲ್ಲಿ ಈರುಳ್ಳಿಯ ಸಗಟು ದರ ಕೆಜಿಗೆ 70 ರೂಪಾಯಿ ಇತ್ತು. ವಾರದ ಹಿಂದೆ ಕೇವಲ 50 ರೂಪಾಯಿ ಇತ್ತು. ಇದೇ ವೇಳೆ ಚಿಲ್ಲರೆ ದರ ಕೆಜಿಗೆ 39ರಿಂದ 80 ರೂ.ಗೆ ಏರಿಕೆಯಾಗಿದೆ.  ವರದಿಯ ಪ್ರಕಾರ, ಈರುಳ್ಳಿ ಬೆಲೆ ಇನ್ನೂ ಕೆಲವು ದಿನಗಳವರೆಗೆ ಏರಿಕೆಯ ಹಾದಿಯಲ್ಲೇ ಸಾಗಲಿದೆ. ಇದು ಹೀಗೆಯೇ ಮುಂದುವರಿದರೆ ಪ್ರತಿ ಕೆಜಿ ಈರುಳ್ಳಿಗೆ 150 ರೂ. ತಲುಪುವ ನಿರೀಕ್ಷೆ ಇದೆ.

ಸ್ಥಳೀಯ ರೈತರಿಂದ ಈರುಳ್ಳಿ ಪೂರೈಕೆ ಕಡಿಮೆಯಾದ ಕಾರಣ, ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ. ಕಳೆದ ವಾರ ಹುಬ್ಬಳ್ಳಿಯಲ್ಲಿ ಈರುಳ್ಳಿ ಬೆಲೆ ಕ್ವಿಂಟಾಲ್‌ಗೆ 2500 ರೂ.ನಿಂದ 3000 ರೂ. ಇತ್ತು. ಒಂದೇ ವಾರಕ್ಕೆ ಕ್ವಿಂಟಲ್‌ಗೆ 6,000-6,600 ರೂ. ಗೆ ಏರಿಕೆಯಾಗಿದೆ. ಅದೇ ರೀತಿ ಚಿಲ್ಲರೆ ಮಾರುಕಟ್ಟೆಯಲ್ಲಿ 30 ರಿಂದ 35 ರೂ. ಇದ್ದ ಈರುಳ್ಳಿ ಬೆಲೆ 75 ರಿಂದ 80 ರೂ.ಗೆ ಏರಿಕೆಯಾಗಿದೆ. ಈ ಬೆಲೆಗಳು ಕೇವಲ ಒಂದು ವಾರದಲ್ಲಿ ಹೆಚ್ಚಾಗಿದೆ.ಸರ್ಕಾರ ಏನು ಕ್ರಮ ಕೈಗೊಂಡಿದೆ?

ಸರ್ಕಾರದ ಕ್ರಮ

ಏರುತ್ತಿರುವ ಬೆಲೆಗಳನ್ನು ತಗ್ಗಿಸಲು ಸರ್ಕಾರ ಕೆಲವು ದೃಢವಾದ ಕ್ರಮಗಳನ್ನು ಕೈಗೊಂಡಿದೆ. ಶನಿವಾರ ಈರುಳ್ಳಿ ರಫ್ತಿಗೆ ಸುಂಕ ವಿಧಿಸಲಾಗಿದೆ. ಈಗ ಪ್ರತಿ ಕೆಜಿಗೆ 40 ರೂಪಾಯಿ ಇದ್ದ ಈರುಳ್ಳಿ ರಫ್ತು ಸುಂಕವನ್ನು ಡಿಸೆಂಬರ್‌ವರೆಗೆ 60 ರೂ.ಗೆ ಏರಿಕೆ ಮಾಡಲಾಗಿದೆ. ರಫ್ತು ಸುಂಕವನ್ನು ಹೆಚ್ಚಿಸುವ ಮೂಲಕ, ಹೆಚ್ಚಿನ ಈರುಳ್ಳಿ ದೇಶೀಯ ಮಾರುಕಟ್ಟೆ ತಲುಪುವಂತೆ ಮಾಡಿದೆ. ಇದರಿಂದ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ.

ಶಿವಮೊಗ್ಗ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ದರಗಳು ಒಂದು ಕೆಜಿಗೆ ಹೀಗಿವೆ

ಬೀನ್ಸು-50-60. ರೂ.
ಕ್ಯಾರೇಟ್-20-30 ರೂ.
ನವೀಲ್ ಕೋಸು- 30-40 ರೂ.
ಕೋಸು-10-12 ರೂ
ಮೆಣಸಿನಕಾಯಿ-20-30 ರೂ.
ತೆಂಗಿನ ಕಾಯಿ-20 ರೂ ಒಂದಕ್ಕೆ
ಕುಂಬಳ-10 ರೂ.
ಸಿಹಿ ಕುಂಬಳ-10 ರೂ.
ಹಿರೇಕಾಯಿ-24 ರೂ.
ಈರುಳ್ಳಿ-60-70 ರೂ.
ಟೆಮೆಟೋ-15-20 ರೂ.
ತೊಂಡೆ-20-26 ರೂ.
ಶುಂಠಿ-80-90 ರೂ.
ಬಣ್ಣದ ಸೌತೆ-16-20 ರೂ.
ಮುಳ್ಳಸೌತೆಕಾಯಿ-26-30 ರೂ. ಬೀಟ್ರೂಟ್ 16-20 ರೂ.ಗಳಿವೆ

ಇದನ್ನೂ ಓದಿ-https://suddilive.in/archives/2132

Related Articles

Leave a Reply

Your email address will not be published. Required fields are marked *

Back to top button