ಸ್ಥಳೀಯ ಸುದ್ದಿಗಳು

ಮುಂದಿನ ದಿನಗಳಲ್ಲಿ ಮೋದಿ ಫೋಟೊ ಬಳಕೆ ಬದಲಾಗಲಿದೆ

ಸುದ್ದಿಲೈವ್/ಶಿವಮೊಗ್ಗ

ಜನಸಂಘದಿಂದ ಬಿಜೆಪಿ ಆದ ಮೇಲೆ ಹಿಂದುತ್ವದ ಮೇಲೆ ಚುನಾವಣೆ ಎದುರಿಸುತ್ತಾ ಬಂದ್ವಿ. ಕಾಂಗ್ರೆಸ್ ಹಿಂದೂಗಳ ವಿರೋಧವಾಗಿ 1951 ರಿಂದ ನಡೆಸಿಕೊಂಡು ಬಂದಿದೆ. 1993 ರಲ್ಲಿ ಹಿಂದೂ ಹಿತರಕ್ಷರಿಗೆ ಮತ‌ನೀಡಿ ಎಂದಿದ್ವಿ ಯಶಸ್ವಿಯೂ ಆಗಿದ್ವಿ ಎಂದು ಶಾಸಕ ಚೆನ್ನಬಸಪ್ಪ ತಿಳಿಸಿದರು.

ವೈಚಾರಿಕತೆಯ ನೆಲಗಟ್ಟು ಶಿವಮೊಗ್ಗದಲ್ಲಿ ಬದಲಾವಣೆಯಾಗಿದೆ. ವೈಚಾರಿಕತೆ ಭದ್ರ ಮಾಡುವ ಸಂಗತಿಗಳನ್ನ‌ಮಾಡುತ್ತಾ ಬಂದಿದ್ದೇವೆ. ಬಿಜೆಪಿಗೆ ಭಯ ಇಲ್ಲದ ಸಂದರ್ಭಗಳು ಒದಗಿ ಬಂದಿಲ್ಲ. ಪ್ರತಿ ಭೂತ್ ನಲ್ಲಿ 13 ಜನ ತಂಡ, ಅದರಲ್ಲಿ ಐದುಜನ ಇರಬೇಕು. ಪ್ರತಿ ಬೂತ್ ನಲ್ಲೂ ಪೇಜ್ ಪ್ರಮುಖ್ ರನ್ನ‌ನೇಮಿಸಲಾಗುತ್ತಿದೆ.

8 ಮೋರ್ಚಾಗಳನ್ನ ಬಲಪಡಿಸಲಾಗಿದೆ. ಇದಕ್ಕೆ ಪೂರಕವಾಗಿ ಸಭೆ ನಡೆದಿದೆ. ಚುನಾವಣೆಯ ತಯಾರಿ ಮೊದಲಿನಿಂದಲೂ ಮಾಡಿಕೊಂಡಿದ್ದೇವೆ. ಇದಕ್ಕೆ ದಿನಾಂಕ ನಿಗದಿಯಾಗಿದೆ. ಮೇ.7 ರಂದು ದಿನಾಂಕ ನಿಗದಿಯಾಗಿದೆ. 8 ತಿಂಗಳ ಹಿಂದೆ 95 ಸಾವಿರ ಮತ ಪಡೆದಿದ್ದೇವೆ. 1,10,700 ಮತವನ್ನ ಕಳೆದ ಲೋಕಸಭೆಯಲ್ಲಿ ಪಡೆದಿದ್ದೇವೆ. 1,50,000 ಲಕ್ಷ ಮತವನ್ನ ನಗರದಲ್ಲಿ ಪಡೆಯುವ ಕಾರ್ಯ ನಡೆಯುತ್ತಿದೆ. ಇದಕ್ಕೆ 12 ಸಾವಿರ ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ.

ಮಾ. 31ರಂದು ಸಂಜೆ 5 ಗಂಟೆಗೆ ಸೈನ್ಸ್ ಮೈದಾನದಲ್ಲಿ 7 ಸಾವಿರ ಪೇಜ್ ಪ್ರಮುಖ್ ರ ಸಭೆ ನಡೆಸಲಾಗುತ್ತಿದೆ. ಪೇಜ್ ನಂಬ ರ್ ಬೂ್ ಸಙಖ್ಯೆ ಮತ್ತು ವಾರ್ಡ್ ಸಂಖ್ಯೆಯನ್ನ ನೇಮಿಸಲಾಗಿದೆ. ಒಂದು ಪೇಜ್ ನಲ್ಲಿ 30 ಮತಗಳು ಇರುತ್ತವೆ. ಇವರನ್ನ ಪೇಜ್ ಪ್ರಮುಖರು ಸಂಪರ್ಕಿಸಲಿದ್ದಾರೆ ಎಂದರು.

ಪೇಜ್ ಗೆದ್ದರೆ ದೇಶ ಗೆಲ್ಲಿಲಿದೆ ಎಂಬ ಘೋಷಾವಾಕ್ಯದಿಂದ ಹೊರಟಿದ್ದೇವೆ. ಮೊದಲು ಬೂತ್ ಗೆದ್ದರೆ ದೇಶ ಗೆದ್ದಂತೆ ಎಂಬ ಘೋಷವಾಕ್ಯವಿತ್ತು. ಈಗ ಬದಲಾಯಿಸಿಕೊಢಿದ್ದೇವೆ ಎಂದರು.

370 ಸ್ಥಾನ ಬಿಜೆಪಿ ಎನ್ ಡಿಎ 400 ಗಡಿ ದಾಟುವ ಗುರಿಹೊಂದಿದ್ದೇವೆ. ಬೂತ್ ಮತ್ತು ಪೇಜ್ ಕಾರ್ಯಕರ್ತರೊಂದಿಗೆ ಸೇರುತ್ತಿದ್ದೇವೆ. ಬಿಜೆಪಿ ಮತ್ತು ಜೆಡಿಎಸ್ ಜೊತೆ ಸಭೆ ನಡೆಸಲು ಯೋಚಿಸಲಾಗುತ್ತಿದೆ. ನಾಡಿದ್ದಿನ ಕಾರ್ಯಕ್ರಮದಲ್ಲಿ ಜೆಡಿಎಸ್ ಪ್ರಮುಖರು ಬರಲಿದ್ದಾರೆ.

ಈಶ್ವರ್ಪನವರಿಂದಿಗೆ ಪೇಜ್ ಪ್ರಮುಖರಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ‌ ಶಾಸಕರು, ಸಾವರ್ಕರ್ ಹೇಳಿಕೆಯನ್ನ ಉಲ್ಲೇಖಿಸಿ ಮಾತನಾಡಿ, ಬಂದರೆ ಜೊತೆಯಲ್ಲಿ, ಬಾರದಿದ್ದರೆ ಬಿಟ್ಟು, ಅಡ್ಡಬಂದರೆ ಮೆಟ್ಟಿ ಎಂಬ ಹೇಳಿಕೆಯನ್ನ ಉಲ್ಲೇಖಿಸಿದರು.

ಚುನಾವಣೆಯ ನಂತರ ವಿಜೇಂದ್ರ ರಾಜ್ಯಾಧ್ಯಕ್ಷರು ರಾಜೀನಾಮೆ ನೀಡುವ ಪರಿಸ್ಥಿತಿ ನಿರ್ಮಾಣವಾಗೊಲ್ಲ. ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದರು. 6 ಜನ ಮಾಜಿ ಕಾರ್ಪರೇಟರ್ ಈಸ್ವರಪ್ಪನವರ ಜೊತೆ ಇದ್ದಾರೆ. ಈಶ್ವರಪ್ಪ ಎಷ್ಟು ಮತ ಪಡೆಯಲಿದ್ದಾರೆ ಎಂಬುನ್ನ ನಾವು ಹೇಳಲು ಸಾಧ್ಯವಿಲ್ಲ.

ಈಶ್ವರಪ್ಪನವರು ಗೆದ್ದು ಮೋದಿ ಕೈ ಜೋಡಿಸುವುದಾಗಿ ಈಶ್ವರಪ್ಪನವರು ಹೇಳಿದ್ದಾರೆ. ಅದು ಸಾಧ್ಯನಾ? ಗುರಿ 370 ಬಿಜೆಪಿಯವರದ್ದು, ಬೇರೆಯವರ ಕರೆಯಲ್ಲ. ನಾವು ಮತಯಾಚಿಸುವುದಕ್ಕಿಂತ ಮೋದಿಯವರು ಜನಮನದಲ್ಲಿ ನೆಲೆವೂರಿದ್ದಾರೆ. ಹಾಗಾಗಿ ಬಿಜೆಪಿಯ ರಾಘವೇಂದ್ರ ಗೆಲ್ಲಲಿದ್ದಾರೆ. ಮುಂದಿನ ದಿನಗಳಲ್ಲಿ ಮೋದಿ ಫೋಟೊ ಸಹ ಬಳುವುದು ಬದಲಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ, ಬಿಜೆಪಿಯ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಜ್ಞಾನೇಶ್ವರ್, ಮಾಧ್ಯಮ ವಿಭಾಗದ ಅಣ್ಣಪ್ಪ, ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button