ಜಿಟಿಡಿ ಇನ್ನಷ್ಟು ಹತ್ತಿರವಾಗ್ತಾರೆ, ಅಂದರೆ ಕಾಂಗ್ರೆಸ್ ಗೆ ಬರ್ತಾರೆ ಅಂತನಾ?

ಸುದ್ದಿಲೈವ್/ಶಿವಮೊಗ್ಗ

ನಗರದ ಕುವೆಂಪು ರಂಗ ಮಂದಿರದಲ್ಲಿ ಇಂದು ನಡೆದ 70 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ಶಾಸಕ ಜಿ.ಟಿ.ದೇವೇಗೌಡರು ಮತ್ತಷ್ಟು ಹತ್ತಿರ ವಾಗ್ತಾರೆ ಎಂಬ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಅಖಿಲ ಭಾರತ ಸಪ್ತಾಯ ಸಹಕಾರ ಕಾರ್ಯಕ್ರಮ ರಾಜಕೀಯ ರಹಿತ ವೇದಿಕೆಯಾಗಬೇಕು ಎಂದು ದೊಡ್ಡ ದೊಡ್ಡ ಭಾಷಣ ಮಾಡಿದ ನಾಯಕರೇ ವೇದಿಕೆಯ ಮೈಕು ಕೈಗೆ ಸಿಕ್ಕಾಗ ರಾಜಕೀಯಗೊಳಿಸಿದ ಅದೆಷ್ಟೋ ಉದಾಹರಣೆಗಳು ನಮ್ಮ ಮುಂದೆ ಇವೆ. ಅದರಂತೆ ಇಂದು ಸಹ ಸಚಿವ ಮಧು ಬಂಗಾರಪ್ಪನವರ ಭಾಷಣ ರಾಜಕೀಯ ವಾಸನೆ ಇಲ್ಲದೆ ಅರಂಭವಾದರೂ ಕೊನೆಯಲ್ಲಿ ಜಿಟಿಡಿಯವರು ಮತ್ತಷ್ಟು ಹತ್ತಿರವಾಗ್ತಾರೆ ಎಂಬ ಹೇಳಿಕೆ ರಾಜಕೀಯವನ್ನ ಮೈಮೇಲೆ ಹೊದ್ದುಕೊಂಡಿದೆ.
ಸಹಕಾರ ಸಪ್ತಾಹದ ವೇದಿಕೆ ಕಾರ್ಯಕ್ರಮದಲ್ಲಿ ಜಿಟಿಡಿ ಚಾಮುಂಡಿ ಕ್ಷೇತ್ರದಿಂದ ಇಂದು ನಗರದ ಕುವೆಂಪು ರಂಗ ಮಂದಿರದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿದ ಸಹಕಾರಿ ಸಚಿವ ರಾಜಣ್ಣ ಯಾವ ರಾಜಕಾರಣವನ್ನೂ ಮಾತನಾಡದೆ ಸಹಕಾರಿ ಕ್ಷೇತ್ರದ ಬಗ್ಗೆ ಮಾತನಾಡಿದರು. ನಂತರ ಮಾತನಾಡಿದ ಮಧು ಬಂಗಾರಪ್ಪ, ಸಿರಿಕಲ್ಚರ್, ಜೇನು ಸಾಕಾಣಿಕೆ, ಗುಡಿಕೈಗಾರಿಕೆ ಬಗ್ಗೆ ಮಾತನಾಡಿ, ತಂದೆ ಬಂಗಾರಪ್ಪನವರ ವಿಶ್ವ ಯೋಜನೆಯ ಬಗ್ಗೆ ಮಾತನಾಡಿ ಭಾಷಣದ ಕೊನೆಯಲ್ಲಿ ಜಿಟಿಡಿ ಕುರಿತು ಮಾತನಾಡಿದ್ದು ಜಿಟಿಡಿ ಕಾಂಗ್ರೆಸ್ ಸೇರುವ ಕ್ಲ್ಯೂ ವನ್ನೂ ಬಿಟ್ಟುಕೊಟ್ರಾ ಎಂಬ ಚರ್ಚೆಗೆ ನಾಂದಿ ಹಾಡಿದೆ.
ಜಿಟಿಡಿಯವರ ಜೊತೆ ನಾನು ಕೆಲಸ ಮಾಡಿದ್ದೆ. ಈಗ ಅವರುಬೇರೆಯಾಗಿದ್ದಾರೆ. ಈಗ ನಮ್ಮೊಂದಿಗೆ ಇದ್ದಾರೆ. ಮುಂದಿನ ದಿನಗಳಲ್ಲಿ ನಮಗೆ ಇನ್ನೂ ಹತ್ತಿರವಾಗಲಿದ್ದಾರೆ ಎಂಬ ಹೇಳಿಕೆ ಸಹಕಾರಿ ವಾಎದಿಕೆಯಿಂದಲೇ ಆಪರೇಷನ್ ಹಸ್ತದ ಕ್ಲ್ಯೂ ಕೊಟ್ರಾ ಎಂಬ ಅನುಮಾನಕ್ಕೆ ಗ್ರಾಸವಾಗಿದೆ.
ಇದನ್ನೂ ಓದಿ-https://suddilive.in/archives/3051
