ಸ್ಥಳೀಯ ಸುದ್ದಿಗಳು

ನಾಲ್ವರಲ್ಲಿ ಸೋಂಕು ಪತ್ತೆ

ಸುದ್ದಿಲೈವ್/ಶಿವಮೊಗ್ಗ

ಜಿಲ್ಲೆಯಲ್ಲಿ ಕೊರೋನದ ಆರ್ಭಟ ಮುಂದು ವರೆದಿದೆ. ಇಂದು ನಾಲ್ವರಲ್ಲಿ ಸೋಂಕು ಪತ್ತೆಯಾಗಿದೆ. ಪತ್ತೆಯಾದ ಸೋಂಕಿತರೆಲ್ಲರೂ ಶಿಕಾರಿಪುರ ತಾಲುಕಿಗೆ ಸೇರಿದವರೆಂದು‌ ಹೆಲ್ತ್ ಬುಲಿಟಿನ್ ತಿಳಿಸಿದೆ.

ಇವತ್ತು 105 ಜನರನ್ನ ಸೋಂಕಿನ ಪರೀಕ್ಷೆಗೆ ಒಳಪಡಿಸಲಾಗಿತ್ತು. 105 ಜನರಲ್ಲಿ 4 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ 28 ಕ್ಕೆ ಏರಿಕೆಯಾಗಿದೆ. ಕಳೆದೆರಡು ಎರಡು ದಿನಗಳಲ್ಲಿ 7 ಜನರಿಗೆ ಸೋಂಕು ಪತ್ತೆಯಾಗಿದೆ.

ಇದುವರೆಗೂ ಸೋಂಕು ಪತ್ತೆಯಾದ 28 ಜನರಲ್ಲಿ 27 ಜನರಿಗೆ ಹೋಂ‌ ಐಸೋಲೇಷನ್ ಗೆ ಒಳಪಡಲು ಸೂಚಿಸಲಾಗಿದೆ.  ಒಬ್ಬರಿಗೆ ಮಾತ್ರ ಜನರಿಗೆ ನಿಗದಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಪತ್ತೆಯಾದ 4 ಜನ ಸೋಂಕಿತರಲ್ಲಿ ನಾಲ್ವರು ಶಿಕಾರಿಪುರ ತಾಲೂಕಿನವರಗಿದ್ದಾರೆ, ಶಿಕಾರಿಪುರ ತಾಲೂಕಿನವರು ಹೊರತು ಪಡಿಸಿ ಬೇರೆ ತಾಲೂಕಿನಲ್ಲಿ ಸೋಂಕು ಪತ್ತೆಯಾಗಿಲ್ಲ.‌ . ಇದುವರೆಗೂ ಸೋಂಕಿಗೆ ಯಾರೂ ಬಲಿಯಾಗಿಲ್ಲ ಎಂದು  ಇಂದು ಬಿಡುಗಡೆಯಾದ ಕೊರೋನ ಹೆಲ್ತ್ ಬುಲಿಟಿನ್ ಪ್ರಕಟಿಸಿದೆ.

ಇದನ್ನೂ ಓದಿ-https://suddilive.in/archives/5901

Related Articles

Leave a Reply

Your email address will not be published. Required fields are marked *

Back to top button