ಸ್ಥಳೀಯ ಸುದ್ದಿಗಳು

492 ಸ್ವತ್ತು ಕಳವು ಪ್ರಕರಣಗಳಲ್ಲಿ 181 ಪ್ರಕರಣಗಳು ಪತ್ತೆ-ಶೇ36 ರಷ್ಟು ಪ್ರಕರಣ ಪತ್ತೆ

ಸುದ್ದಿಲೈವ್/ಶಿವಮೊಗ್ಗ

2023ನೇ ಸಾಲಿನಲ್ಲಿ ಸ್ವತ್ತು ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕವಾಯತು (Property Return Parade) ನಿನ್ನೆ ಪೊಲೀಸ್ ಡಿಎಆರ್ ಗ್ರೌಂಡ್ ನಲ್ಲಿ ನಡೆದಿದೆ.

ಸ್ವತ್ತು ಕಳವು ಪ್ರಕರಣಗಳು ಪತ್ತೆಯಾಗೋದೇ ಕಷ್ಟ. ಅಂತಹದರಲ್ಲಿ ರಿಕವರಿ ರೇಟು ಶೇ.50 ರಷ್ಟು ಆಗಿರೋದು ನೆಮ್ಮದಿ ತಂದಿದೆ. 2023ನೇ ಸಾಲಿನ 181 ಪ್ರಕರಣಗಳು ಮತ್ತು ಹಿಂದಿನ ವರ್ಷಗಳ 42 ಪ್ರಕರಣಗಳು ಸೇರಿ ಒಟ್ಟು 223 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಅಂದಾಜು ಮೌಲ್ಯ 3,55,24,368/- ರೂಗಳ ಮಾಲುಗಳನ್ನು ವಶ ಪಡಿಸಿಕೊಂಡಿರುತ್ತದೆ ಮತ್ತು CEIR ( Central Equipment Identity Register) ಪೋರ್ಟಲ್ ಮುಖಾಂತರ ಕಳೆದು ಹೋದ ಒಟ್ಟು 333 ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಲಾಗಿದೆ.

2023ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 492 ಸ್ವತ್ತು ಕಳವು ಪ್ರಕರಣಗಳು ದಾಖಲಾಗಿದ್ದವು. ಸದರಿ ಪ್ರಕರಣಗಳಲ್ಲಿ 1 ಲಾಭಕ್ಕಾಗಿ ಕೊಲೆ, 7 ದರೋಡೆ, 11 ಸುಲಿಗೆ, 1 ಶ್ರೀ ಗಂಧ ಮರದ ತುಂಡುಗಳ ಕಳ್ಳತನ, 7 ಸರಗಳ್ಳತನ, 7 ಜಾನುವಾರು ಕಳವು, 8 ಮನೆಗಳ್ಳತನ, 27 ಸಾಮಾನ್ಯ ಕಳವು, 43 ಕನ್ನಕಳವು, 63 ವಾಹನ ಕಳವು ಹಾಗೂ 6 ವಂಚನೆ ಪ್ರಕರಣಗಳು ಸೇರಿದಂತೆ ಒಟ್ಟು 181 ಪ್ರಕರಣಗಳನ್ನು ಪತ್ತೆ ಮಾಡಿ ಅಂದಾಜು ಮೌಲ್ಯ 2,96,29,775/- ರೂ ಗಳ ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು, ಮೊಬೈಲ್ ಫೋನ್, ವಾಹನಗಳು, ಜಾನುವಾರು, ನಗದು ಹಣ, ಎಲೆಕ್ಟ್ರಾನಿಕ್ ವಸ್ತುಗಳು, ಅಡಿಕೆ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.‌

ಅಲ್ಲದೇ ಹಿಂದಿನ ವರ್ಷಗಳಲ್ಲಿ ವರದಿಯಾದ ಪ್ರಕರಣಗಳಲ್ಲಿ 19 ಮನೆಗಳ್ಳತನ, 2 ಮೋಸ, 6 ಸಾಮಾನ್ಯ ಕಳವು ಮತ್ತು 15 ವಾಹನ ಕಳವು ಸೇರಿದಂತೆ ಒಟ್ಟು 42 ಪ್ರಕರಣಗಳನ್ನು ಸಹಾ ಪತ್ತೆ ಮಾಡಿ ಅಂದಾಜು ಮೌಲ್ಯ 58,94,593/- ರೂಗಳ ಮಾಲುಗಳನ್ನು ವಶ ಪಡಿಸಿಕೊಂಡಿದ್ದು ಸದರಿ ಮಾಲನ್ನು ಹಾಗೂ CEIR ಪೋರ್ಟಲ್ ಮುಖಾಂತರ ಪತ್ತೆ ಹಚ್ಚಲಾದ ಮೊಬೈಲ್ ಫೋನ್ ಗಳನ್ನು ಈ ದಿನ ವಾರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ.

ಸ್ವತ್ತು ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿ, ಕಳೆದುಹೋದ ಮಾಲನ್ನು ಅವುಗಳ ಮಾಲೀಕರಿಗೆ ಹಿಂದಿರಿಸುವಲ್ಲಿ, ಪ್ರಮುಖ ಪಾತ್ರವಹಿಸಿದ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳ ಉತ್ತಮ ಕಾರ್ಯಕ್ಕೆ ಎಸ್ಪಿ ಮಿಥುನ್ ಕುಮಾರ್ ಪ್ರಂಶಂಸಿಸಿ ಅಭಿನಂದಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/5878

Related Articles

Leave a Reply

Your email address will not be published. Required fields are marked *

Back to top button