ಸ್ಥಳೀಯ ಸುದ್ದಿಗಳು

ಗಾರ್ಮೆಂಟ್ಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಾಂತರ ಠಾಣೆಗೆ ಮನವಿ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಮಾಚೇನಹಳ್ಳಿಯ ಶಾಹೀ ಗಾರ್ಮೆಂಟ್ಸ್ ನಿಂದ ಭದ್ರಾ ಅಚ್ಚುಕಟ್ಟು ಕೆರೆಗಳಿಗೆ ಕಲುಷಿತ ನೀರು ಹರಿದು ಬಂದು ಮೀನುಗಳು ಸಾವನ್ನಪ್ಪಿದ ಬೆನ್ನಲ್ಲೇ ಇಂದು ಗ್ರಾಮಸ್ಥರು ಮತ್ತು ಕೆರೆ ಸಮಿತಿಯವರು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಜ.28 ರಂದು ಶಾಹೀ ಗಾರ್ಮೆಂಟ್ಸ್ ನಿಂದ ಹೊರಡುವ ಕಲುಷಿತ ನೀರು ಭದ್ರ ಎಡ ದಂಡೆ ನಾಲೆಯ ಮೂಲಕ ಹರಿದು ಬಂದು ಮಲವಗೊಪ್ಪದ ಕೆರೆಗೆ ಸೇರುತ್ತದೆ. ಕೆರೆಗೆ ಈ ಕಲೂಷಿತ ನೀರು ಸೇರ್ಡೆಯಿಂದಾಗಿ ಮೀನುಗಳು ಸಾವನ್ನಪ್ಪಿದ್ದವು. ಮೀನು ಸಾವನ್ನಪ್ಪಿರುವುದು ಗಾರ್ಮೆಂಟ್ಸ್ ನ ಕಲೂಷಿತ ನೀರು ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.

ಮಲವಗೊಪ್ಪದ ಕೆರೆಯಲ್ಲಿ 70 ಸಾವಿರ ಮೀನು ಸಾಕಾಣಿಕೆಗೆ ಮಾಡಲಾಗಿತ್ತು. ಗ್ರಾಮಸ್ಥರೇ ನಿರ್ಮಿಸಿರುವ ಕೆರೆ ಇದಾಗಿದ್ದು ಇಲ್ಲಿ ಗುತ್ತಿಗೆ ಮೂಲಕ ಸುರೇಶ್ ಮತ್ತು ವೀರೇಶ್ ಮೀನು ಸಾಕಾಣಿಕೆಯ ಟೆಂಡರ್ ಹಿಡಿದಿದ್ದರು. ಕಲೂಷಿತ ನೀರಿನಿಂದ ಈ ಮೀನುಗಳು ಸಾವನ್ನಪ್ಪಿದೆ.

ಗಾರ್ಮೆಂಟ್ಸ್ ನ ನಿಂದ ಬಿಟ್ಟಿರುವ ನೀರು ಎರಡು‌ ಮಾರ್ಗದಲ್ಲಿ ಹರಿಯುತ್ತದೆ ಎಂದು‌ಕೆರೆ ಸಮಿತಿಯ ಸದಸ್ಯ ವೆಂಕಟೇಶ್ ನಾಯ್ಕ್ ತಮ್ಮನ್ನ‌ ಭೇಟಿಯಾದ. ಮಾಧ್ಯಮದವರಿಗೆ ತಿಳಿಸಿದ್ದಾರೆ. 36 ನೇ ಚಾನೆಲ್ ನಿಂದ ಹರಿದು ಬರುವ ಭದ್ರ ಎಡದಂಡೆ ನೀರು ಉಚ್ಚಣಿಕೆರೆ, ನಿಧಿಗೆ, ಬಿದರೆ, ಮಲವಗೊಪ್ಪ, ಹರಿಗೆ, ಪುರಲೆ ಮೂಲಕ ತುಂಗ ನದಿಗೆ ಹರಿಯಲಿದೆ.

38 ಚಾನೆಲ್ ಗಳಲ್ಲಿ ಹರಿಯುವ ನೀರು ದುಮ್ಮಳ್ಳಿ ಸಂತಕಡೂರು, ಸೋಗಾನೆ ಮಂಡೇನಕೊಪ್ಪ, ಕಾಚಿನಕೊಪ್ಪ, ಮೂಲಕ ವಾದಿಯೇ ಹುದ ಬಳಿ ತಂಗ ನದಿಗೆ ಸೇರಲಿದೆ. ಭದ್ರ ಎಡದಂಡೆಯ ಎರಡು ಮಾರ್ಗದಲ್ಲಿ ಹರಿದು ಬರುವ ನೀರು ಒಟ್ಟು‌ 20 ಕೆರೆಗಳಿಗೆ ತಲುಪಿ ಹಾದು ತುಂಗ ನದಿ ಸೇರಲಿದೆ ಎಂದಿದ್ದಾರೆ

ಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ ನಿರ್ಮಿಸಿರುವ ಗಾರ್ಮೆಂಟ್ಸ್ ಕೆರೆ ನೀರಿನಲ್ಲಿ ಕಲೂಷಿತ ನೀರು ಹರಿಸಿ ಜಲಚರ ಪ್ರಾಣಿಗಳಿಗೆ ಮಾರಕವಾಗಿದೆ. ಮೀನು ಸಾಕಾಣಿಕೆಗೆ ಲಕ್ಷಾಂತರ ರೂ. ನಷ್ಟ ಉಂಟು ಮಾಡಿದೆ. ಹಾಗಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮತ್ತು ಕೆರೆ ಸಮಿತಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದೆ. ಇದೇನಾಗಲಿದೆ ಕಾದು‌ ನೋಡಬೇಕಿದೆ.

ಇದನ್ನೂ ಓದಿ-https://suddilive.in/archives/8066

Related Articles

Leave a Reply

Your email address will not be published. Required fields are marked *

Back to top button