ಸ್ಥಳೀಯ ಸುದ್ದಿಗಳು

ನಗರದ ಹಲವು ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿಯ ವಿಶೇಷತೆ

ಸುದ್ದಿಲೈವ್/ಶಿವಮೊಗ್ಗ

ಮಹಾವಿಷ್ಣು ‘ಮುರಾ’ ಎಂಬ ರಾಕ್ಷಸನನ್ನು ‘ಏಕಾದಶ’ ಎಂಬ ತನ್ನ ಆಯುಧದಿಂದ ಸಂಹಾರ ಮಾಡಿದ ದಿನ, ಕ್ಷೀರಸಾಗರ ಮಂಥನ ಮಾಡಿ ಅಮೃತ ಉದ್ಭವವಾದ ದಿನ, ಹಾಗೆ ಪಿತಾಮಹ ಬೀಷ್ಮರು ವಿಷ್ಣುಸಹಸ್ರನಾಮವನ್ನು ಬೋಧಿಸಿದ ದಿನವೂ ವೈಕುಂಠ ಏಕಾದಶಿಯಾಗಿದೆ. ಏಕಾದಶಿ ವ್ರತ ಮಾಡುವುದರಿಂದ ಪಿತೃ ದೋಷ ಪರಿಹಾರವಾಗುತ್ತದೆ.

ಇಂದು ಎಲ್ಲಾ ಕಡೆ ವೈಕುಂಠ ಏಕಾದಶಿ (Vaikunta Ekadasi) ಸಂಭ್ರಮ ಮನೆ ಮಾಡಿದೆ. ಇದು ಭಗವಾನ್ ಮಹಾವಿಷ್ಣು (Lord Vishnu) ನಿದ್ರೆಯಿಂದ ಎಚ್ಚರವಾಗಿ ಮುಕ್ಕೋಟಿ ದೇವತೆಗಳಿಗೆ ದರ್ಶನ ಕೊಟ್ಟ ಪುಣ್ಯ ದಿನ. ಆದ್ದರಿಂದ ‘ಮುಕ್ಕೋಟಿ ಏಕಾದಶಿ’ ಎಂದೂ ಕರೆಯುತ್ತಾರೆ. ಜೊತೆಗೆ ಇಂದು ಮಹಾವಿಷ್ಣು ‘ಮುರಾ’ ಎಂಬ ರಾಕ್ಷಸನನ್ನು ‘ಏಕಾದಶ’ ಎಂಬ ತನ್ನ ಆಯುಧದಿಂದ ಸಂಹಾರ ಮಾಡಿದ ದಿನ, ಕ್ಷೀರಸಾಗರ ಮಂಥನ ಮಾಡಿ ಅಮೃತ ಉದ್ಭವವಾದ ದಿನ, ಹಾಗೆ ಪಿತಾಮಹ ಬೀಷ್ಮರು ವಿಷ್ಣುಸಹಸ್ರನಾಮವನ್ನು ಬೋಧಿಸಿದ ದಿನವೂ ವೈಕುಂಠ ಏಕಾದಶಿಯಾಗಿದೆ. ಏಕಾದಶಿ ವ್ರತ ಮಾಡುವುದರಿಂದ ಪಿತೃ ದೋಷ ಪರಿಹಾರವಾಗುತ್ತದೆ. ಆದ್ದರಿಂದ ಇದನ್ನು ‘ಮೋಕ್ಷದ’ ಮತ್ತು ಪುತ್ರದಾ ಏಕಾದಶಿ ಎಂದೂ ಕರೆಯುತ್ತಾರೆ.

ಇಂದು ನಗರದ ಹಲವು ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ದೇವರಿಗೆ ವಿವಿಧ ಅಲಂಕಾರ ಮತ್ತು ಪೂಜೆ ಸಲ್ಲಿಸಲಾಗುವುದು. ಧನುರ್ಮಾಸದಲ್ಲಿ ವೈಕುಂಠ ಏಕಾದಶಿ ಬಂದಿರುವುದು ವಿಶೇಷವಾಗಿದೆ. ಬೆಳಗ್ಗಿನ ಜಾವದಲ್ಲಿ ಭಗವಂತನಿಗೆ ಪೂಜೆ ಸಲ್ಲಿಸಲಾಗುವುದು. ವರ್ಷವಿಡಿ ಏಕಾದಶಿ ಮಾಡದವರು ಇಂದು ಏಕಾದಶಿ ಮಾಡಿದರೆ ಫಲವಿದೆ ಎಂಬ ನಂಬಿಕೆ ಇದೆ. ಹಾಗಾಗಿ ಇಂದಿನ ಉಪವಾಸ ಶ್ರೇಷ್ಠತೆಯನ್ನ ಪಡೆದುಕೊಂಡಿದೆ.

ಏಕಾದಶಿಯ ದಿನ ಸಾವನ್ನಪ್ಪಿದರೆ ಆ ಆತ್ಮಕ್ಕೆ ನೇರವಾದ ಸ್ವರ್ಗ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆಯೂ ಇದೆ. ನಗರದ ಕೋಟೆ ದೇವಸ್ಥಾನ, ವೆಂಕಟೇಶ್ವರ ನಗರದ ವೆಂಕಟೇಶ್ವರ ದೇವಾಲಯ, ಜಯನಗರ ರಾಮಮಂದಿರ, ಕೋಟೆ ಸೀತಾ ರಾ ಮಾಂಜನೇಯ ದೇವಸ್ಥಾನ, ದೇವಗಿರಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಅಶ್ವಥ್ ನಗರ,  ನವಲೆ ವೆಂಕಟೇಶ್ವರ ಸ್ವಾಮಿ ದೇವಸ್ಥಾನ,  ಹಾಡೋನ ಹಳ್ಳಿ ಗ್ರಾಮದ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ವಿಶೇಷ ಪೂಜೆ ನಡೆದಿದೆ.

ಇದನ್ನೂ ಓದಿ-https://suddilive.in/archives/5367

Related Articles

Leave a Reply

Your email address will not be published. Required fields are marked *

Back to top button