ಕ್ರೈಂ ನ್ಯೂಸ್

ಹೊಸ ವರ್ಷದ ಆಚರಣೆ ಹೊಸ್ತಿಲಲ್ಲೇ ಮೊಳಗಿದ ಗುಂಡಿನ ಶಬ್ದ-ಇಬ್ಬರು ಆರೋಪಿಗಳು ಪತ್ತೆ

ಸುದ್ದಿಲೈವ್/ಶಿವಮೊಗ್ಗ

2023 ರ ಹೊಸವರ್ಷ ಆಚರಣೆಯ ವೇಳೆ ಕೋವಿಯಿಂದ ಹೊರಬಿದ್ದ ಬುಲೆಟ್ ವೊಂದು ಓರ್ವನ ಜೀವ ತೆಗೆದಿತ್ತು. ಈ ಪ್ರಕರಣಕ್ಕೆ ಜ.1 2024 ಕ್ಕೆ ಸಂಪೂರ್ಣ ಒಂದು ವರ್ಷ. ಈಗ 2024 ಕ್ಯಾಲೆಂಡರ್ ವರ್ಷಾಚರಣೆಯ ಹೊಸ್ತಿನಲ್ಲಿರುವ ವೇಳೆ ಶಿವಮೊಗ್ಗದ ಹೊರವಲಯದಲ್ಲಿ  ಬಂದೂಕಿನಿಂದ ಗುಂಡು ಹಾರಿದೆ.

ಇವರೆಡೂ ಘಟನೆಗಳೇ ಕೊನೆಯದ್ದಲ್ಲ ಎರಡು ಘಟನೆಗಳ ನಡುವೆ ಮತ್ತೊಂದೆರಡು ಸೇರ್ಪಡೆಯಾಗಬಹುದು.  2024 ರ ಹೊಸವರ್ಷಾಚರಣೆಗೆ ಕೆಲವು ಗಂಟೆಗಳು ಬಾಕಿ ಇದೆ.

ಶಿವಮೊಗ್ಗದ ಹೊರವಲಯದಲ್ಲಿ ಬಂದೂಕಿನ ಶಬ್ದಮೊಗಳಗಿದೆ. ಸಾಮಾಜಿಕ ಜಾಲತಾಣದಲ್ಲಿ 1 ನಿಮಿಷ 23 ಸೆಕೆಂಡಿನ ವಿಡಿಯೋವೊಂದನ್ನ‌ ಹರಿಬಿಡಲಾಗಿತ್ತು.‌ ಯಾವಾಗ ಈ ವಿಡಿಯೋ ಪತ್ತೆಯಾಗುತ್ತೆ ಅಲ್ಲಿಂದಲೇ ಆರಂಭವಾಗುತ್ತೆ ಪೊಲೀರ ಚೇಸಿಂಗ್. ಚೇಸಿಂಗ್ ನಲ್ಲಿ  ತುಂಗ ನಗರ ಪೊಲೀಸರು ಆರೋಪಿಗಳನ್ನ‌ ಪತ್ತೆ ಮಾಡಿ ಬಂದೂಕನ್ನ ವಶಪಡಿಸಿಕೊಂಡಿದ್ದಾರೆ.

ವಿಡಿಯೋವನ್ನು ಪರಿಶೀಲಿಸಿದಾಗ ಗೊತ್ತಾಗಿದ್ದು ಘಟನೆ ನಡೆದಿದ್ದು  ಡಿ.26 ರಂದು ಮಧ್ಯ ರಾತ್ರಿ ಅಂತ.  ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಚೇನಹಳ್ಳಿಯ ಮಾಲ್ನಾಡು ಕ್ಯಾನ್ಸರ್ ಆಸ್ಪತ್ರೆ ಬಳಿ ಹೆದ್ದಾರಿ ಹತ್ತಿರ ಇಬ್ಬರು ವ್ಯಕ್ತಿಗಳು ಒಂದು ಕಾರನ್ನು ನಿಲ್ಲಿಸಿಕೊಂಡು,  ಬಂದೂಕನ್ನ ಹಿಡಿದು, ಅಜಾಗೃಕತೆ ಹಾಗೂ ಬೇಜಾವಬ್ದಾರಿತನದಿಂದ ವರ್ತಿಸುತ್ತ  ಆಕಾಶದ ಕಡೆಗೆ ಗುಂಡು ಹಾರಿಸಿದ್ದರು.

ಆ ವಿಡಿಯೋವನ್ನೇ ಆಧಾರವಾಗಿಟ್ಟುಕೊಂಡು ತುಂಗ ನಗರ ಪಿಎಸ್ಐ ರಘುವೀರ್  ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದರು. ದೂರಿನ ಆಧಾರದ ಮೇರೆಗೆ ಚೇಸ್ ಮಾಡಿದ ಪೊಲೀಸರಿಗೆ ಇಬ್ವರು ಆರೋಪಿಗಳು ಪತ್ತೆಯಾಗಿದ್ದಾರೆ.

ಆರೋಪಿತರಾದ 1) ಹರ್ಷ ಪಟೇಲ್, 23 ವರ್ಷ, ಸಿರಗನಹಳ್ಳಿ, ಚಿಕ್ಕಮಗಳೂರು ಮತ್ತು 2) ಅಭಿಷೇಕ್, 23 ವರ್ಷ, ಅಜ್ಜಂಪುರ, ಚಿಕ್ಕಮಗಳೂರು ಎಂಬುವರನ್ನ ಪತ್ತೆಹಚ್ಚಲಾಗಿದೆ.  ಒಂದು ಏರ್ ಗನ್ ಮತ್ತು ಕಾರನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ-https://suddilive.in/archives/5873

Related Articles

Leave a Reply

Your email address will not be published. Required fields are marked *

Back to top button