ಸ್ಥಳೀಯ ಸುದ್ದಿಗಳು

26 ಜನರಿಗೆ ಕೊರೋನ ಸೋಂಕು ಪತ್ತೆ

ಸುದ್ದಿಲೈವ್/ಶಿವಮೊಗ್ಗ

ಎಂದಿನಂತೆ ಜಿಲ್ಲೆಯಲ್ಲಿ ಕೊರೋನದ ಆರ್ಭಟ ಮುಂದು ವರೆದಿದೆ. ಇಂದು ಐವರಲ್ಲಿ ಜನರಲ್ಲಿ ಸೋಂಕು ಪತ್ತೆಯಾಗಿದೆ. ಪತ್ತೆಯಾದ ಸೋಂಕಿತರೆಲ್ಲರೂ ಶಿವಮೊಗ್ಗ ಮತ್ತು ಭದ್ರಾವತಿ ತಾಲುಕಿಗೆ ಸೇರಿದವರೆಂದು‌ ಹೆಲ್ತ್ ಬುಲಿಟಿನ್ ತಿಳಿಸಿದೆ.

ಇವತ್ತು 265 ಜನರನ್ನ ಸೋಂಕಿನ ಪರೀಕ್ಷೆಗೆ ಒಳಪಡಿಸಲಾಗಿತ್ತು. 265 ಜನರಲ್ಲಿ 5 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ 26 ಕ್ಕೆ ಏರಿಕೆಯಾಗಿದೆ. ಕಳೆದೆರಡು ಎರಡು ದಿನಗಳಲ್ಲಿ 8 ಜನರಿಗೆ ಸೋಂಕು ಪತ್ತೆಯಾಗಿದೆ.

ಇದುವರೆಗೂ ಸೋಂಕು ಪತ್ತೆಯಾದ 26 ಜನರಲ್ಲಿ 25 ಜನರಿಗೆ ಹೋಂ‌ ಐಸೋಲೇಷನ್ ಗೆ ಒಳಪಡಲು ಸೂಚಿಸಲಾಗಿದೆ.  ಒಬ್ಬರಿಗೆ ಮಾತ್ರ ಜನರಿಗೆ ನಿಗದಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಪತ್ತೆಯಾದ 5 ಜನ ಸೋಂಕಿತರಲ್ಲಿ ಮೂವರು ಶಿವಮೊಗ್ಗದವರು, ಇಬ್ಬರು ಭದ್ರಾವತಿಯವರಾಗಿದ್ದಾರೆ. ಇದುವರೆಗೂ ಸೋಂಕಿಗೆ ಯಾರೂ ಬಲಿಯಾಗಿಲ್ಲ ಎಂದು  ಇಂದು ಬಿಡುಗಡೆಯಾದ ಕೊರೋನ ಹೆಲ್ತ್ ಬುಲಿಟಿನ್ ಪ್ರಕಟಿಸಿದೆ.

ಇದನ್ನೂ ಓದಿ-https://suddilive.in/archives/5867

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373