ಕ್ರೈಂ ನ್ಯೂಸ್

ಪಾರ್ಕಿಂಗ್ ವಿಚಾರದಲ್ಲಿ ಶ್ರೀಸಾಮಾನ್ಯನ ಮೇಲೆ ನಡೆಯಿತೇ ದರ್ಪ?

ಸುದ್ದಿಲೈವ್/ಶಿವಮೊಗ್ಗ

ಪೊಲೀಸರ ದರ್ಪಗಳೆಲ್ಲಾ ಶ್ರೀ ಸಾಮಾನ್ಯನ ಮೇಲೆ ಇದ್ದಂತೆ ಕಾಣುತ್ತಿದೆ. ಆನಂದಪುರಂನಲ್ಲಿ ಪೊಲೀಸರ ಮೇಲೆ ಕೈ ಮಾಡಿದ ಪುಡಿರೌಡಿಯನ್ನ ಬಂಧಿಸಲು ಸಾಧ್ಯವಾಗಿಲ್ಲ. ಶಿವಮೊಗ್ಗದಲ್ಲಿ ಪಾರ್ಕಿಂಗ್ ವಿಚಾರದಲ್ಲಿ ಶ್ರೀಸಾಮಾನ್ಯನ ಮೇಲಿನ ಖಾಕಿ ಪಡೆ ಮುಗಿಬಿದ್ದಿದೆ.

ಗಾಂಧಿ ಬಜಾರ್ ನಲ್ಲಿ ಮುಸ್ಲೀಂ ವ್ಯಕ್ತಿ ಹಬ್ಬಕ್ಕಾಗಿ ಬಟ್ಟೆ ಅಂಗಡಿಗೆ ಖರೀದಿಗೆ ಹೋದಾಗ ಒನ್ ಸೈಡ್ ಪಾರ್ಕಿಂಗ್ ಮಾಡುವ ಬದಲು ಬೇರೆಡೆ ಪಾರ್ಕಿಂಗ್ ಮಾಡಿದ್ದಾನೆ. ಹೋಗಲಿ ಇತರೆ ವಾಹನ ಸವಾರರು ಅದೇ ಜಾಗದಲ್ಲಿ ಪಾರ್ಕ್ ಮಾಡಿದ್ದಾರೆ. ಬೈಕ್ ಮೇಲೆ ಕುಳಿತು ತನ್ನ ಕುಟುಂಬ ಬಟ್ಟೆ ಖರೀದಿಯ ಬಳಿಕ ಇಲ್ಲಿಂದಲೇ ಚಲಿಸೋಣ ಎಂಬುದು ಆತನ ನಿರ್ದಾರವಾಗಿತ್ತು.

ಅಲ್ಲಿಗೆ ಬಂದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ ಐ ಮತ್ತು ಅವರ ಸಿಬ್ಬಂದಿಗಳು ಮುಗಿಬಿದ್ದಿದ್ದಾರೆ. ರಾಂಗ್ ಸೈಡ್ ಪಾರ್ಕಿಂಗ್ ಎಂಬ ಅರಣಕ್ಕೆ ಟ್ರಾಫಿಕ್ ಪೊಲೀಸರು ಮುಗಿಬಿದ್ದಿದ್ದಾರೆ. ಇಂತಹ ವಾಹನ ಸಂಚಾರದ ಬಗ್ಗೆ ಪೊಲೀಸರಿಗೆ ಕಾಳಜಿ ಇದ್ದಿದ್ದರೆ ದಂಡವಿಧಿಸುವ ಬದಲು ನಗರದ ಎಲ್ಲಾ ಭಾಗದಲ್ಲಿ ಅಡ್ಡದಿಡ್ಡಿ ನಿಲ್ಲುವ ವಾಹನಗಳ ಬಗ್ಗೆ ಕ್ರಮ ಜರುಗಿಸಬಹುದಿತ್ತು. ಅಂತಹ ಕಾರ್ಯಾಚರಣೆ ಕಾಣದೇ ಇಲ್ಲ.

ಈ ಪ್ರಕರಣದ ನಂತರ ವ್ಯಕ್ತಿ ಸೀದಾ ಪೊಲೀಸ್ ಠಾಣೆಗೆ ಹೋಗಿ ಪಿಎಸ್ ಐ ಎದುರೇ ಮುಸ್ಲೀಂ ವ್ಯಕ್ತಿ ನಾನು ಉಪವಾಸ ಇದ್ದೀನಿ. ನನ್ನ ಮೇಲೆ ಮುಗಿಬಿದ್ದಿದ್ದೇಕೆ ಎಂದು ಪ್ರಶ್ನಿಸಿದ್ದಾನೆ. ನಾನು ನಿಮ್ಮ ವಿರುದ್ಧ ದೂರು ಕೊಡ್ತೀನಿ ಎಂದು ಹೇಳಿ ಬಂದಿದ್ದಾನೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಎಂದು ದೂರು ದಾಖಲು ಮಾಡಿ ನಿನ್ನನ್ನೇ ಒಳಗೆ ಹಾಕತೀನಿ ಎಂದು ಪಿಎಸ್ ಐ ಗದರಿಸಿದ್ದಾರೆ. ಪಿಟಿ ಕೇಸು ಸಹ ಹಾಕಲಾಗಿದೆ ಎಂದು ನೊಂದ ವ್ಯಕ್ತಿ ಆರೋಪಿಸಿದ್ದಾನೆ.

ಪೊಲೀಸರ ಜೊತೆ‌ ನಡೆದ ಸಂಭಾಷಣೆ ಅಷ್ಟು ವಿಡಿಯೋ ಸುದ್ದಿ ಲೈವ್ ಗೆ ಲಭ್ಯವಾಗಿದೆ. ಶ್ರೀಸಾಮಾನ್ಯನ ಜೊತೆ ಜನಸ್ನೇಹಿ ಪೊಲೀಸ್ ಎಂದು ಹೇಳಿಕೊಳ್ಳುವುದು ಹೀಗೆನಾ? ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಜನಸ್ನೇಹಿಯಾಗಿ ವರ್ತಿಸಿದ್ದರೆ ಆ ವ್ಯಕ್ತಿ ಪಿಎಸ್ ಐ ನ್ನ ಠಾಣೆವರೆಗೂ ಬಂದು ಪ್ರಶ್ನಿಸುತ್ತಾನಾ?

ಎಲ್ಲರೂ ರಾಂಗ್ ಸೈಡ್ ಪಾರ್ಕಿಂಗ್ ಮಾಡಿದಾಗ ನಿರ್ದಿಷ್ಟ ವ್ಯಕ್ತಿಯ ಮೇಲೆ ಮುಗಿಬೀಳೋದೆ ಪರಿಹಾರವೇ?  ಎಸ್ಪಿ ಬಳಿ ದೂರುವುದಾಗಿ ಆತ ಮಾಹಿತಿ ನೀಡಿದ್ದಾನೆ. ಸ್ಥಳದಲ್ಲಿಯೇ ಕಾಂಗ್ರೆಸ್ ಮುಖಂಡನೋರ್ವನಿಗೆ ಪಿಎಸ್ ಐನ ದರ್ಪದ ಬಗ್ಗೆ ಮಾಹಿತಿ ನೀಡಿದ್ದಾನೆ.

ಈ ವಿಚಾರ ಇಲ್ಲಿಗೆ ಮುಗಿಯುವ ಹಾಗೆ ಕಾಣುತ್ತಿಲ್ಲ. ಕೆಲವೊಮ್ಮೆ ಪೊಲೀಸರು ತಗ್ಗಿ ಬಗ್ಗಿ‌ಹೋಗುವುದು ಅನಿವಾರ್ಯವಾಗುತ್ತದೆ. ಇದೇ ಯಾವುದೋ‌ ಪುಂಡ‌ಪೋಕರಿ ಹೀಗೆ ಮಾಡದ್ದರೆ ಪೊಲೀಸರನ್ನ ಸಮರ್ಥಿಸಬಹುದಿತ್ತು.

ಅಮಾಯಕನ ಮೇಲೆ ಕರ್ತವ್ಯದ ಬರೆ ಹಾಕುವುದು ಎಷ್ಟು ಸರಿ? ಮಿನಿಟ್ ಮತ್ತೊಂದು‌ ಮಗದೊಂದು ಎಂದು ಡ್ಯೂಟಿ ಮೆರೆಯುವ ಪೊಲೀಸರಿಗೆ ಪುಂಡಪೋಕರಿಗಳನ್ನ ದಂಡಿಸುವ ಬದಲು ಶ್ರೀಸಾಮಾನ್ಯನನ್ನ  ಕ್ಷುಲ್ಲಕ ಕಾರಣಕ್ಕೆ ಟಾರ್ಗೆಟ್ ಮಾಡೋದು ಎಷ್ಟು ಸರಿ?

ಊರಿಡಿ ಸಮಸ್ಯೆ ಇದೆ. ಅಲ್ಲಿಯಾಕೆ ಬಂದು ಪೊಲೀರು ಪ್ರಶ್ನಿಸೊಲ್ಲ. ದಂಡ ವಸೂಲಿ ಮಾಡುವುದರಲ್ಲೇ ಆಸಕ್ತರಾಗಿರುವ ಪೊಲೀಸರು ಬೇರೆಡೆ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಪೋಟೊ ಹೊಡೆದು ಹಾಕಿದರೂ ಸಮಸ್ಯೆ ಬಗೆಹರಿಸೊಲ್ಲ. ಅಂತಹದ್ದರಲ್ಲಿ ಅಮಾಯಕನ ಮೇಲೆ ಹಲ್ಲೆ ಎಷ್ಟು ಸರಿ?

ಇದನ್ನೂ ಓದಿ-https://suddilive.in/archives/12056

Related Articles

Leave a Reply

Your email address will not be published. Required fields are marked *

Back to top button