ಸ್ಥಳೀಯ ಸುದ್ದಿಗಳು

ಹಿಜಬ್ ವಿಚಾರದಲ್ಲಿ ಸಿಎಂ ಜೊತೆಗೆ ನಿಲ್ತೇವೆ-ಮಧು ಬಂಗಾರಪ್ಪ

ಸುದ್ದಿಲೈವ್/ಶಿವಮೊಗ್ಗ

ನಿನ್ನೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹಿಜಬ್ ನಿಷೇಧ ಹಿಂಪಡೆಯುವ ವಿಚಾರದ ಬಗ್ಗೆ ಮಾತನಾಡಿದ್ದು ಅದಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳಿಗೆ ಮಾತನಾಡಿದ ಬಿಜೆಪಿಯವರು ಜೀವನದಲ್ಲಿ ಏನು ಮಾಡಿದ್ದಾರೆ. ಧಾರ್ಮಿಕ ವಿಚಾರ ಬಿಟ್ಟು ಬೇರೆ ಏನಾದರೂ ಮಾಡಿದ್ದಾರಾ ಎಂದು ಗರಂ ಆದ ಮಧು ಬಂಗಾರಪ್ಪ, ಬಿಜೆಪಿಯವರು ಸೋತಿದ್ದು ಇದೇ ಕಾರಣಕ್ಕೆ. ಪಠ್ಯಪುಸ್ತಕದಲ್ಲಿ ಬೇಡವಾಗಿರೋದು ಹಾಕೋದು ಬರಿ ಇಂತಹದ್ದೆ ಮಾಡಿರೋದು ಎಂದು ಆರೋಪಿಸಿದರು.

ಬಿಜೆಪಿಯೊಂದು ನ್ಯಾಷನಲ್‌ ಪಾರ್ಟಿ. ಬಿಜೆಪಿಯವರು ಬರ ಅಧ್ಯಯನ ಮಾಡಿದ್ರಲ್ಲ ಎಲ್ಲಿಟ್ಟೀರಿ, ಕಸದ ಬುಟ್ಟಿಗೆ ಹೋಯ್ತಾ? ಎಂದು ಕುಟುಕಿದ ಮಧುಬಂಗಾರಪ್ಪ ಬರ ಸನೀಕ್ಷೆಯಲ್ಲೂ ರಾಜಕಾರಣ ಮಾಡಿದ್ರಲ್ಲಾ?ರಾಜ್ಯದಿಂದ 4 ಲಕ್ಷ ಕೋಟಿ ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ಅಷ್ಟು ಪರಿಹಾರ ನಮಗೆ ವಾಪಸ್ ಕೊಡ್ತಿದ್ದೀರಾ? ಎಂದು ಪ್ರಶ್ನಿದರು.

ಚುನಾವಣಾ ಪೂರ್ವದಲ್ಲಿ ಹಿಜಬ್ ಗೆ ಆಗಿನ ಸಿಎಂ  ವಿರೋಧ ವ್ಯಕ್ತಪಡಿಸಿದ್ದರು. ಎಲ್ಲದಕ್ಕು ಒಂದು ಧರ್ಮ ಇರುತ್ತೆ, ಬದ್ದತೆ ಇರುತ್ತೆ ಗೌರವ ಕೊಡಬೇಕು.ನಮ್ಮ ದೇಶ ಇಷ್ಟೊಂದು ಪ್ರಸಿದ್ದಿಯಾಗಿದ್ದೆ ಗಲಭೆ ಇಂದಲ್ಲ. ಪರೇಶ್ ಮೇಸ್ತಾ, ಅಂತಹ‌ವಿಚಾರ ತಗೊಳ್ಳದು ಚುನಾವಣೆಗೆ ಹೋಗೋದು ಬಿಜೆಪಿಯವರ ಕಾಯಕವಾಗಿದೆ. ಶಿವಮೊಗ್ಗದಲ್ಲಿ ರಾಗಿಗುಡ್ಡಕ್ಕೆ ಕೈ ಹಾಕಲು ಹೋಗಿದ್ರು

ಸಿಎಂ ಸಿದ್ದರಾಮಯ್ಯ ಹಿಜಬ್ ಬಗ್ಗೆ ಮಾತನಾಡಿದ್ದಾರೆ. ಹೃದಯ ಶ್ರೀಮಂತಿಕೆ ತೋರಿದ್ದಾರೆ. ಒಂದು ಧರ್ಮ, ಜಾತಿ ಪದ್ದತಿಯಲ್ಲಿ ಇರುತ್ತೇವೆ ಅದನ್ನು ಅನುಸರಿಸಿಕೊಂಡು ಹೋಗಬೇಕು. ಇಷ್ಟು ವರ್ಷ ಇರಲಿಲ್ಲ. ಹೋದ ಸರಿ ಚುನಾವಣೆ ಸಂದರ್ಭದಲ್ಲಿ ಆ ವಿಚಾರ ಎತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡೋಣ.ಕೋರ್ಟ್ ವಿಚಾರಗಳು ಸೂಕ್ಷ್ಮತೆ ಇರುತ್ತದೆ. ಎಂದರು.

ಎಲ್ಲಾ ಧರ್ಮಗಳಿಗು ಗೌರವ ಕೊಡಬೇಕು. ಕೋರ್ಟ್ ನಲ್ಲಿ ಏನಿದೆ ನೋಡಿಕೊಂಡು ತೀರ್ಮಾನ ಕೈಗೊಳ್ಳುತ್ತೇವೆ. ಬಿಜೆಪಿಯವರು ಚುನಾವಣೆ ಸಂದರ್ಭ ಬಂದಾಗ ಹಿಜಬ್ ತರಬೇಕಾ, ಪಠ್ಯಪುಸ್ತಕ ಪರಿಷ್ಕರಣೆ ಮಾಡಬೇಕಾ?ನೀವೆಷ್ಟು ಕೀಳು ಮಟ್ಟದಲ್ಲಿ ಮಾತನಾಡ್ತೀರಾ ಅದೆಲ್ಲಾ ನೀವೆ ಎಂದು ಗರಂ ಆದರು.

ಹಿಜಬ್ ವಿಚಾರದಲ್ಲಿ ರಾಜ್ಯದಲ್ಲಿ ಗಲಭೆಯಾದ್ರೆ ಸಿಎಂ ಸಿದ್ದರಾಮಯ್ಯ ಕಾರಣ ಎಂಬ ಈಶ್ವರಪ್ಪ ಆರೋಪ ವಿಚಾರದ ಬಗ್ಗೆ ಆರೋಪಿಸಿದರು. ದಂಗೆ ಮಾಡುವವರೇ ಹೀಗೆ ಹೇಳೋದು. ಕಾನೊನು ಬಹಳ ಗಟ್ಟಿಯಾಗಿದೆ ತಲೆ ಕೆಡಿಸಿಕೊಳ್ಳಲು ಹೋಗಬೇಡಿ. ಎಲ್ಲಾ ಧರ್ಮಗಳಿಗು ಗೌರವ ಕೊಡಬೇಕು, ಅದೇ ರೀತಿ ಹಿಜಬ್ ಎಂದರು.

ಬಂಗಾರಪ್ಪ ಕುಟುಂಬದ ಸಹೋದರರು ಒಂದಾಗಬೇಕು ಎಂಬ ಹರತಾಳು ಹಾಲಪ್ಪ ಹೇಳಿಕೆ ವಿಚಾರದ ಬಗ್ಗೆ ಸಚಿವರು ಪ್ರತಿಕ್ರಿಯಿಸಲು ನಿರಾಕರಿಸಿದರು.

ಇದನ್ನೂ ಓದಿ-https://suddilive.in/archives/5318

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373