ಸ್ಥಳೀಯ ಸುದ್ದಿಗಳು

ಮತ್ತೆ ಕೊರೋನ ಹೆಲ್ತ್ ಬುಲಿಟಿನಲ್ಲಿ ತಪ್ಪಾದ ಅಂಕಿ ಅಂಶ

ಸುದ್ದಿಲೈವ್/ಶಿವಮೊಗ್ಗ

ಕೊರೋನ ಹೆಲ್ತ್ ಬುಲಿಟಿನ್ ನಲ್ಲಿ ಪ್ರಕಟವಾಗುವ ಅಂಕಿ ಅಂಶದ ಬಗ್ಗೆ ಸಂಶಯ ಮೂಡುತ್ತಿದೆ. ಡಿಸೆಂಬರ್ 31 ರಂದು ಸಂಖ್ಯೆ ಜಿಲ್ಲೆಯಲ್ಲಿ 28 ಜನರಿಗೆ ಸೋಂಕು ಪತ್ತೆಯಾಗಿದೆ ಎಂದು ದಾಖಲಾಗಿತ್ತು.

ಒಂದು ದಿನ ಬಿಟ್ಟು ಇಂದು ಪ್ರಕಟವಾದ ಹೆಲ್ತ್ ಬುಲಿಟಿನ್ ನಲ್ಲಿ 6 ಜನ ಸೋಂಕಿತರು ಎಂದು ಪ್ರಕಟವಾಗಿದೆ. ಇದರಿಂದ ಒಟ್ಟು 34 ಜನರಿಗೆ ಸೋಂಕು ತಗುಲಿದೆ ಎಂದು ಪ್ರಕಟವಾಗಬೇಕಿತ್ತು. ಆದರೆ 31 ಎಂದು ಹೆಲ್ತ್ ಬುಲಿಟಿನ್ ಪ್ರಕಟವಾಗಿದೆ. ಡಿ. 31 ರಂದು ಪ್ರಕಟವಾದ ಹೆಲ್ತ್ ಬುಲಿಟಿನ್ ನಲ್ಲೂ ಅಂಕಿ ಅಂಶ ತಪ್ಪಾಗಿದೆ. ಡಿ.30 ರಂದು  ಜಿಲ್ಲೆಯಲ್ಲಿ 26 ಸೋಂಕಿತರಿದ್ದಾರೆ ಎಂದು ಪ್ರಕಟಿಸಿದೆ. ಆದರೆ ಡಿ.31 ರಂದು 4 ಜನಕ್ಕೆ ಸೋಂಕು ಪತ್ತೆಯಾಗಿದ್ದರಿಂದ 26 ಕ್ಕೆ 4 ಜನ ಸೋಂಕಿತರು ಸೇರಿದರೆ 30 ಆಗಬೇಕಿತ್ತು. ಆದರೆ 28 ಜನ ಎಂದು ಪ್ರಕಟವಾಗಿದೆ.

ಒಂದೋ ಆರೋಗ್ಯ ಇಲಾಖೆ ಈ ರೀತಿ ಗೊಂದಲದ ಅಂಕಿ ಅಂಶ ನೀಡಿದ್ದಕ್ಕೆ ಸ್ಪಷ್ಟನೆ ನೀಡಬೇಕು. ಇಲ್ಲೋ ಮತ್ತೆ ಕೊರೋನದ ಬಗ್ಗೆ ಇಲಾಖೆ ನಿರ್ಲಕ್ಷ ಹೊಂದಿರಬೇಕು.  ಇಂದು ಜಿಲ್ಲೆಯಲ್ಲಿ 6 ಜನರಿಗೆ ಸೋಂಕು ಪತ್ತೆಯಾಗಿದೆ. ಪತ್ತೆಯಾದ ಸೋಂಕಿತರೆಲ್ಲಿ ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ ಹಾಗೂ  ಶಿಕಾರಿಪುರ ತಾಲುಕಿಗೆ ಸೇರಿದವರೆಂದು‌ ಹೆಲ್ತ್ ಬುಲಿಟಿನ್ ತಿಳಿಸಿದೆ.

ಇವತ್ತು 242 ಜನರನ್ನ ಸೋಂಕಿನ ಪರೀಕ್ಷೆಗೆ ಒಳಪಡಿಸಲಾಗಿದೆ. 242 ಜನರಲ್ಲಿ 6 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ 31 ಕ್ಕೆ ಏರಿಕೆಯಾಗಿದೆ. ಕಳೆದೆರಡು ಎರಡು ದಿನಗಳಲ್ಲಿ 3 ಜನರಿಗೆ ಸೋಂಕು ಪತ್ತೆಯಾಗಿದೆ.

ಇದುವರೆಗೂ ಸೋಂಕು ಪತ್ತೆಯಾದ 31 ಜನರಲ್ಲಿ 27 ಜನರಿಗೆ ಹೋಂ‌ ಐಸೋಲೇಷನ್ ಗೆ ಒಳಪಡಲು ಸೂಚಿಸಲಾಗಿದೆ. ನಾಲ್ವರಿಗೆ ನಿಗದಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಪತ್ತೆಯಾದ 6 ಜನ ಸೋಂಕಿತರಲ್ಲಿ ಮೂವರು ಶಿವಮೊಗ್ಗ ತಾಲೂಕಿನವರು, ಭದ್ರಾವತಿ, ತೀರ್ಥಹಳ್ಳಿ, ಶಿಕಾರಿಪುರ ತಾಲೂಕಿನಲ್ಲಿ ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ.‌  ಇದುವರೆಗೂ ಸೋಂಕಿಗೆ ಯಾರೂ ಬಲಿಯಾಗಿಲ್ಲ ಎಂದು  ಇಂದು ಬಿಡುಗಡೆಯಾದ ಕೊರೋನ ಹೆಲ್ತ್ ಬುಲಿಟಿನ್ ಪ್ರಕಟಿಸಿದೆ.

ಇದನ್ನೂ ಓದಿ-https://suddilive.in/archives/6052

Related Articles

Leave a Reply

Your email address will not be published. Required fields are marked *

Back to top button