ನೆಹರೂ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ವಿಶ್ವಕಪ್ ಮ್ಯಾಚ್ ವೀಕ್ಷಣೆಗೆ ಅವಕಾಶ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ನಾಳೆ ವಿಶ್ವಕಪ್ ಫೈನಲ್ ಪಂದ್ಯಾವಳಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಹೈವೋಲ್ಟೇಜ್ ಪಂದ್ಯಾವಳಿಗಳಾದ ಆಸ್ಟ್ರೇಲಿಯ ಮತ್ತು ಭಾರತದ ನಡುವಿನ ಪಂದಗಯಾವಳಿ ವೀಕ್ಷಣೆಗೆ ಯುವ ಸಬಲೀಕರಣ ಇಲಾಖೆ ಸಿದ್ದತೆ ಮಾಡಿಕೊಂಡಿದೆ.
2023ನೇ ಸಾಲಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ನಮ್ಮ ದೇಶದಲ್ಲಿ ಆಯೋಜಿಸುತ್ತಿದ್ದು, ಇದರಲ್ಲಿ ಭಾರತ ತಂಡವು ವಿಶ್ವಕಪ್ ಪಂದ್ಯಾವಳಿಯ ಫೈನಲ್‌ಗೆ ತಲುಪಿರುವುದು ಸಂತೋಷದ ವಿಷಯವಾಗಿದೆ. ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದೊಡ್ಡ ಎಲ್.ಇ.ಡಿ ಸ್ಟೀನ್‌ಗಳನ್ನು ಅಳವಡಿಸಿ, ಫೈನಲ್ ಪಂದ್ಯಾವಳಿಯನ್ನು ಕ್ರೀಡಾಪಟುಗಳಿಗೆ ಮತ್ತು ಸಾರ್ವಜನಿಕರಿಗೆ MC&A ಇವರ ಸಹಯೋಗದೊಂದಿಗೆ ನೇರ ಪ್ರಸಾರ ಮಾಡುವಂತೆ ಸರ್ಕಾರ ಆದೇಶವನ್ನೇ ಹೊರಡಿಸಿದೆ.
ಆದ್ದರಿಂದ ನಾಳೆವ ನಡೆಯುವ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯವನ್ನು ಮಧ್ಯಾಹ್ನ 1.30 ರಿಂದ ಮುಕ್ತಾಯವಾಗುವವರೆಗೆ ನೆಹರೂ ಕ್ರೀಡಾಂಗಣದಲ್ಲಿ ದೊಡ್ಡ ಎಲ್.ಇ.ಡಿ ಸ್ಟೀನ್‌ಗಳನ್ನು ಅಳವಡಿಸಿ, ನೇರ ಪ್ರಸಾರ ಮಾಡಲು ಸೂಚಿಸಿದೆ.
ಇದನ್ನೂ ಓದಿ-https://suddilive.in/archives/3263
