ಕಾಂತರಾಜ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ನ.20 ರಂದು ಧರಣಿ ಮತ್ತು ಹಕ್ಕೊತ್ತಾಯ

ಸುದ್ದಿಲೈವ್/ಶಿವಮೊಗ್ಗ

ಹಿಂದುಳಿದ ಜನ ಜಾಗೃತಿ ವೇದಿಕೆಯು ಕಾಂತರಾಜ ಆಯೋಗದ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಧರಣಿ ನಡೆಸಲು ಮುಂದಾಗಿದೆ.
ಈ ಜುರಿತು ಸುದ್ದಿಗೋಷ್ಠಿ ನಡೆಸಿದ ವೇದಿಕೆಯ ಮುಖಂಡ ತೀನಾ ಶ್ರೀನಿವಾಸ್, ಯಾವಾಗ ಹಿಂದುಳಿದ ಜನಾಂಗದ ವರದಿ ಜಾರಿಯಾಗುತ್ತೆ ಆವಗೆಲ್ಲಾ ಅಡ್ಡಿ ಆತಂಕ ನಿರಂತರವಾಗಿ ಎದುರಾಗಿದೆ. 1955 ರ ಕಾಕಾ ಕಾಲೇಲ್ಕರ್ ವರದಿಯೂ ಸರ್ಕಾರ ಮಟ್ಟದಲ್ಲಿ ತಿರಸ್ಕೃತಗೊಂಡಿದೆ. 1960 ರ ನಾಗನಗೌಡ ವರದಿ ತಿರಸ್ಕೃತ ಗೊಂಡಿದೆ. 1992 ರಲ್ಲಿ ಬಂದ ಮಂಡಲ್ ವರದಿಯೂ ತಿರಸ್ಕೃತಗೊಂಡಿದೆ.
2014 ರಲ್ಲಿ ಬಂದ ಕಾಂತರಾಜು ವರದಿ ಸಹ ಸುಪ್ರೀಂ ಕೋರ್ಟ್ ನ ನಿರ್ದೇಶನದಂತೆ ರಚನೆ ಗೊಂಡಿದೆ. ಆದರೆ ಸಿದ್ದರಾಮಯ್ಯನವರೇ ರಚಿಸಿ ನೂರಾರು ಕೋಟಿ ಹಣ ವ್ಯಯ ಮಾಡಿದರೂ ಜಾರಿಗೊಳಿಸಲಿಲ್ಲ. ಈಗ ಮತ್ತೆ ಕಾಂತರಾಜು ವರದಿ ಜಾರಿಗೊಳಿಸುವುದಾಗಿ ವಾಗ್ದಾನ ನೀಡಿದ್ದರು.
ಆದರೆ ಮೇಲ್ವರ್ಗದ ಸ್ವಾಮೀಜಿಗಳು ಕಾಂತಗರಾಜ ವರದಿ ತಿರಸ್ಕೃತಗೊಳಿಸಿದ್ದಾರೆ. ಆದರೆ ಕಾಂತರಾಜು ವರದಿಯನ್ನಸರ್ಕಾರ ಬಹಿರಂಗ ಪಡಿಸದೆ ಇದ್ದರೂ ವಿರೋಧಗಳು ವ್ಯಕ್ತವಾಗಿರುವುದು ದುರದೃಷ್ಟಕರ. ವರದಿಯನ್ನ ಓದಿ ನಂತರ ಮಾತನಾಡಬೇಕಾದ ವರ್ಗದವರು ಕಾಂತರಾಜ ವರದಿ ಜಾರಿಗೊಳುಸುವ ಮೊದಲೇ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ವರದಿ ಜಾರಿಯಾಗುವ ವರೆಗೂ ವೇದಿಕೆ ವಿಶ್ರಮಿಸುವುದಿಲ್ಲ ಎಂದು ತಿಳಿಸಿದರು.
158.47 ಕೋಟಿ ವೆಚ್ಚ ಮಾಡಿ 58 ವಿವಿಧ ರೀತಿಯಲ್ಲಿ ವರದಿ ಮಾಡಲಾಗಿದೆ. ಸಿದ್ದರಾಮಯ್ಯನವರು 2018 ರಲ್ಲಿ ವಿಧಾನ ಸಭೆ ಚುನಾವಣೆ ಬಂದ ಹಿನ್ನಲೆಯಲ್ಲಿ ಜಾರಿಗೊಳಸಲಿಲ್ಲ. ಹೆಚ್ ಡಿ ಕುಮಾರ ಸ್ವಾಮಿ, ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ನಾಯಿ ವರದಿ ಬಗ್ಗೆ ಚಕಾರವೆತ್ತದೆ ಜಾಣ ಮೌನ ವಹಿಸಿದ್ದಾರೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಯ ವರದಿಯನ್ನ ಸರ್ಕಾರ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಕಾಂತರಾಜು ವರದಿ ಜಾರಿಗೊಳಿಸುವಂತೆ ನ.20 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಹಾಲಿ ಅಧ್ಯಕ್ಷ ಜಯಪ್ರಕಾಶ್ ಹೆಗಡೆಯವರು ವರದಿಯನ್ನ ರಾಜ್ಯ ಸರ್ಕಾರಕ್ಕೆ ನೀಡಲು ಮತ್ತು ಸರ್ಕಾರ ವರದಿಯನ್ನ ಜಾರಿಗೊಳಿಸಲು ಆಗ್ರಹಿಸುವುದಾಗಿ ತಿಳಿಸಿದರು.
ಪ್ರೊ.ಹೆಚ್ ಆರ್ ರಾಜಪ್ಪ, ಉಮಾಪತಿ, ವಿ.ರಾಜು, ಸಿದ್ದರಾಮಪ್ಪ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/3141
