ಕತ್ತಲಲ್ಲಿ ಶಿವಮೊಗ್ಗ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ಈಗಾಗಲೇ ರೈತರಿಗೆ ಬೆಳಿಗ್ಗೆ ಎರಡು ಗಂಟೆ ಮತ್ತು ರಾತ್ರಿ ಎರಡು ಗಂಟೆ ನೀಡುತ್ತಿರುವ ಬೆನ್ನಲ್ಲೇ ಶಿವಮೊಗ್ಗದಲ್ಲಿ ಗೊತ್ತಿಲ್ಲದಂತೆ ಲೋಡ್ ಶೆಡ್ಡಿಂಗ್ ಆರಂಭವಾಗಿದೆ.
ಗಾಳಿಯಿಂದ ವಿದ್ಯುತ್ ತಯಾರಿಕೆ, ಜಲವಿದ್ಯುತ್ ಹಾಗೂ ಕೋಲ್ ವಿದ್ಯುತ್ ಗಳು ಬೇಡಿಕೆಗೆ ತಕ್ಕಂತೆ ಸಪ್ಲೆ ಆಗದ ಹಿನ್ನಲೆಯಲ್ಲಿ ಶಿವಮೊಗ್ಗದಲ್ಲಿ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ಈಗಾಗಲೇ ಜಯನಗರ, ಬಸವನಗುಡಿ, ಗಾಂಧಿನಗರ ಚೆನ್ಬಮ್ಮ ಲೇಔಟ್ ಮೊದಲಾದ ಗಳಲ್ಲಿ ಲೋಡ್ ಶೆಡ್ಡಿಂಗ್ ಆರಂಭವಾಗಿದೆ.
ಪವರ್ ಸ್ಟೇಷನ್ ನ್ನ ಪ್ರತಿ ನಾಲ್ಕು ಏರಿಯಾದಲ್ಲಿ ಈ ರೀತಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆಗಸ್ಟ್ ನಲ್ಲಿ ಒಂದೆರಡು ವಾರ ಇದ್ದ ಲೋಡ್ ಶೆಡ್ಡಿಂಗ್ ನಂತರ ಸರಿಪಡಿಸಲಾಗಿತ್ತು. ಆದರೆ ಈಗ ಮತ್ತೆ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ಆದರೆ ಅಧಿಕಾರಿಗಳು ಮಾತ್ರ ಈ ಬಗ್ಗೆ ಅಧಿಕೃತಗೊಳಿಸುತ್ತಿಲ್ಲ.
ಬೇಡಿಕೆಗಿಂತ ಸಪ್ಲೆ ಕಮ್ಮಿಯಾದರೆ ನೂರಾರು ಜನರೇಷನ್ ನ ಸಿಂಕ್ರನೈಜೇಷನ್ ಬಿದ್ದು ಹೋಗುವುದರಿಂದ ಈ ಲೋಡ್ ಶೆಡ್ಡಿಂಗ್ ಆರಂಭವಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಮಳೆಯಿಲ್ಲದ ಕಾರಣ ಮೋಡ ಮುಸುಕಿದ ಕಾರಣ ಲೋಡ್ ಶೆಡ್ಡಿಂಗ್ ಮುಂದಿನ ದಿನಗಳಲ್ಲಿ ಭಾರಿ ಬಾಧಿಸುವ ನಿರೀಕ್ಷೆ ಇದೆ. ಇದು ಹೀಗೆ ನಡೆಯುತ್ತೆ ಎಂಬ ನಿರೀಕ್ಷೆಯೂ ಕಷ್ಟವಾದುದರಿಂದ ಬರುವ ದಿನಗಳು ಕಷ್ಟವೇ…
ಇದನ್ನೂ ಓದಿ-https://suddilive.in/archives/744
