ಸ್ಥಳೀಯ ಸುದ್ದಿಗಳು

ಡಿ.14 ರಂದು ಮೀಸಲಾತಿ ಸಂರಕ್ಷಣಾ ಒಕ್ಕೂಟ ಜಿಲ್ಲಾಸಮಿತಿಯಿಂದ ಬೃಹತ್ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ನ್ಯಾಯವಾದಿ ಸದಾಶಿವ‌ ಆಯೋಗವನ್ನ ಮತ್ತೆ ಜಾರಿಗೊಳಿಸಲಾಗುವುದು ಎಂಬ ಕೂಗು ಕೇಳಿದ ಬಂದ ಹಿನ್ನಲೆಯಲ್ಲಿ ಮೀಸಲಾತಿ ಸಂರಕ್ಷಣಾ ಒಕ್ಕೂಟ ಜಿಲ್ಲಾಸಮಿತಿ ಡಿ.14 ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಒಕ್ಕೂಟದ ನಾನ್ಯ ನಾಯ್ಕ್ , ಡಿ.14 ರಂದು ಮಹಾನಗರ ಪಾಲಿಕೆಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಪ್ರತಿಭಟನೆ ನಡೆಯಲಿದೆ. ನ್ಯಾ.ಸದಾಶಿವ ಆಯೋಗ ಅವೈಜ್ಞಾನಿಕ ವರದಿಯನ್ನ ತಿರಸ್ಕರಿಸಿ ನಡೆಯುವ ಈ ಪ್ರತಿಭಟನೆ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

ಮಾದಿಗ, ಛಲವಾದಿ, ಭೋವಿ ಲಂಬಾಣಿ ಕೊರಮ ಕೊರಚ ದೊಂಬಿದಾಸ, ಬುಡ್ಗ ಜಂಗಮ, ಸಿಳ್ಳೆಕ್ಯಾತ, ಅಲೆಮಾರಿಗಳ ನಡುವೆ ದ್ವೇಷ ಬಿತ್ತಲಾಗುತ್ತಿದೆ. ಟಚಬಲ್ ಮತ್ತು ಅನ್ ಟಚಬಲ್ ಎಂಬ ವಿಷಯವಿದೆ. ಆರ್ಥಿಕ ಸಾಮಾಜಿಕ ಶೈಕ್ಷಣಿಕ ವಿಷಯವನ್ನ 10 ವರ್ಷಗಳಿಗೊಮ್ಮೆ ಪರಿಶೀಲಿಸಬೇಕಿತ್ತು. ಆದತೆ ಆಯೋಗ ರಚನೆ ಮಾಡಿ ಜಾತಿಗಳನ್ನ ಕೈಬಿಡಲಾಗಿದೆ.

2023 ರಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ವಂದಿತಾ ಶರ್ಮಾ ಎಸ್ ಸಿ ಕಮ್ಯೂನಿಟಿಯಿಂದ ಲಂಬಾಣಿ, ಕೊರಮ, ಕೊರಚ ಮೊದಲಾದ ಸಮುದಾಯಗಳನ್ನ‌ಕೈವಿಡಬಾರದು ಸೇರಿಸಬೇಕೆಂದು ವರದಿ ನೀಡಿದ್ದಾರೆ. ಕ್ಯಾ. ಮಣಿವಣನ್ನ ಅವರು ಸದಾಶಿವ ಆಯೋಗವನ್ನ ಕೈಬಿಡುವುದಾಗಿ ಸಚಿವ ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನವನ್ನ‌ ಕೇಂದ್ರಕ್ಕೆ ಸಲ್ಲಿಸಿದ್ದಾರೆ ಎಂದರು.

ಸದಾಶಿವ ಆಯೋಗವನ್ನ ತಕ್ಷಣ ರದ್ಧು ಮಾಡಬೇಕು, ಒಳಮೀಸಲು ನೀಡಲು ರಾಜ್ಯ ಸರ್ಕಾರಕ್ಜೆ ಹಕ್ಕಿಲ್ಲವೆಂದು ಸುಪ್ರೀಂ ತಿಳಿಸಿದೆ. ಹಾಗಾಗಿ ಒಳಮೀಸಲನ್ನ ನಿಲ್ಲಿಸಬೇಕು. ಅಧಿವೇಶನದಲ್ಲಿ ಚರ್ಚೆಗೆ ಮಂಡಿಸಬಾರದು, ಮತ್ತು ಕೇಂದ್ರಕ್ಕೂ ಶಿಫಾರಸು ಮಾಡಬಾರದು ಎಂದು ಮನವಿಯಲ್ಲಿ ಹಕ್ಕೋತ್ತಾಯ ಮಾಡುವುದಾಗಿ ತಿಳಿಸಿದರು.

ಸುದ್ದಿಗೋಷ್ಣಿಯಲ್ಲಿ, ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್, ಭೋವಿ ಸಮಾಜದ ಅಧ್ಯಕ್ಷ,  ರವಿಕುಮಾರ್, ಮುಖಙಡ ಧೀರಾಜ್ ಹೊನ್ಬವಿಲೆ, ಒಕ್ಜೂಟದ ಪ್ರಧಾನ ಕಾರ್ಯದರ್ಶಿಆರ್.ಜಗದೀಶ್, ಜಿಲ್ಲಾ ಸಂಚಾಲಕರಾದ ವೀಋಭದ್ರಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು

ಇದನ್ನೂ ಓದಿ-https://suddilive.in/archives/4761

Related Articles

Leave a Reply

Your email address will not be published. Required fields are marked *

Back to top button