ಸ್ಥಳೀಯ ಸುದ್ದಿಗಳು

“ಅಬ್ ಕಿ ಬಾರ್ 400 ಪಾರ್” ಅಭಿಯಾನಕ್ಕೆ ಸಾಥ್ ನೀಡಲು ಮೋದಿ ಮನವಿ

ಸುದ್ದಿಲೈವ್/ಶಿವಮೊಗ್ಗ

ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಸಿಗಂಧೂರು ಚೌಡೇಶ್ವರಿಗೆ ನಮಸ್ಕರಿಸಿ ಭಾಷಣ ಆರಂಭಿದರು.

ಫ್ರೀಡಂ ಪಾರ್ಕ್ ನಲ್ಲಿ ನಡೆದ ಮೋಇ ಸಭೆಯಲ್ಲಿ ಕಾಂಗ್ರೆಸ್ ನ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ. ಕರ್ನಾಟಕದಲ್ಲಿ 28 ಕ್ಕೆ 28 ಗೆಲ್ಲಿಸಿಕೊಡಬೇಕು. ಆಬ್ ಕಿ ಕಾ ಬಾರ್ ಚಾರ್ ಸೌ ಪಾರ್ ಕಾ ಅಭಿಯಾನಕ್ಕೆ ಕರ್ನಾಟಕ ಬೆಂಬಿಸಬೇಕಿದೆ. ವಿಕಾಸಿತ ಭಾರತಕ್ಕಾಗಿ 400 ಪಾರ್ ಎಂಂದು ಹೇಳಿದರು.

ಕಿಸಾನ್ ಸಂಮೃದ್ಧಿ, ಭ್ರಷ್ಟಾಚಾರದ ನಿವಾರಣೆಗೆ 400 ಕ್ಕೂ ಹೆಚ್ಚು ಸ್ಥಾನ ಪಡೆಯಬೇಕಿದೆ. ಈ ಬಾರಿ ಬಿಜೆಪಿಗೆ ಅನುಕೂಲವಾಗಲಿದೆ. ಕಾಂಗ್ರೆಸ್ ಗೆ ವಿಕಾಸದ ಅಭಿವೃದ್ಧಿಯ ಬಗ್ಗೆ ಆಸಕ್ತಿಯಿಲ್ಲ.‌ ಸುಳ್ಳು ಹೇಳೋದು, ಮತ್ತಷ್ಟು ಸುಳ್ಳು ಹೇಳೋದಿ, ದಿನವಿಡಿ ಸುಳ್ಳು ಹೇಳುವುದು ಅದರ ಅಜೆಂಡಾ ಆಗಿದೆ ಎಂದು ಲೇವಡಿ ಮಾಡಿದರು.

ಕರ್ನಾಟಕದಲ್ಲಿಯೂ ಕಾಂಗ್ರೆಸ್ ಇದೇ ಕೆಲಸ ಮಾಡಿದೆ. ಕೆಲವೊಮ್ಮೆ ಮೋದಿಯನ್ನ ಟೀಕಿಸುವುದು ಮತ್ತೆ. ಕೆಲವೊಮ್ಮೆ ವಿಪಕ್ಷಗಳ ಕಾಲೆಳೆಯುವ ಕೆಲಸದಲ್ಲಿ ಕಾಂಗ್ರೆಸ್ ಮುಳಿಗಿದೆ. ಕಾಂಗ್ರೆಸ್ ಕರ್ನಾಟಕವನ್ನ ಎಟಿಎಂ ಮಾಡಿಕೊಂಡಿದೆ. ಅಭಿವೃದ್ಧಿ ಗೆ ಹಣ ವಿಲ್ಲ ಚುನಾವಣೆಗೆ ಹಣಹಾಕಲು ಸಿದ್ದವಿದೆ ಎಂದು ದೂರಿದರು.

ಕರ್ನಾಟಕದಲ್ಲಿ ಕೆಲವೊಬ್ಬರು ಶ್ಯಾಡೋ ಸಿಎಂ ಇದ್ದಾರೆ. ಸೂಪರ್ ಸಿಎಂ ಇದ್ದಾರೆ. ಕೆಲವೊಬ್ಬರು ದೆಹಲಿಯಲ್ಲಿ ಕರ್ನಾಟಕದ ಮಿನಿಸ್ಟರ್ ಇದ್ದಾರೆ. ಕರ್ನಾಟಕದ ಜನತೆಯ‌ಸಿಟ್ಟನ್ನ ನೋಡುತ್ತಿದ್ದೇನೆ. ಬದಲಾವಣೆಯನ್ನ ಬಯಸಿದ್ದಾರೆ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನ ಎನ್ ಡಿಎಯನ್ನ‌ಗೆಲ್ಲಿಸಬೇಕೆಂದರು.‌ ಹಿಂದೂ ಸಮಾಜದ ಶಕ್ತಿ ಮುಗಿಸಲು ಕಾಂಗ್ರೆಸ್ ಹೊರಟಿದೆ.‌ಆ ಶಕ್ತಿಯ್ನ‌ಉಳಿಸಲು ನಾವು ಸದಾ ಸಿದ್ದ ಎಂದರು.

ಕೋಟಿ ಜನ ಹಿಂದೂ ಉಪಾಸನೆಯ ಶಕ್ತಿಗಳಿದ್ದಾರೆ. ಶಿವಾಜಿ ಪಾಠದಲ್ಲಿ ಹಿಂದೂ ಸಮಾಜದ ಶಕ್ತಿವೇನು ಎಂಬುದು ಇದೆ. ಜೈಭವಾನಿ ಜೈ ಶಿವಾಜಿ ಘೋಷಣೆಯಿಂದ ಹಿಂದೂ ಸಮಾಜದ ರಕ್ಷಣೆ ಆಗಿದೆ. ಶಿವಾಜಿಯ ಹಿಂದಿನ‌ ಶಕ್ತಿಯೇ ಆಕೆಯ ತಾಯಿ. ಆ ತಾಯಿ ಒಬ್ವಳು ನಾರಿಯಾಗಿದ್ದಾಳೆ. ಆ ನಾರಿ ಶಕ್ತಿಯನ್ನ ಹೆಚ್ಚಿಸಬೇಕಿದೆ. ಅದಕ್ಕಾಗಿ ಬಿಜೆಪಿ ಕೇಂದ್ರದಲ್ಲಿ ಯೋಜನೆ ರೂಪಿಸಿದ್ದೇವೆ ಎಂದರು.

ಶಕ್ತಿಯ ವಿರುದ್ಧ ಮಾತನಾಡುವುದು ಭಾರತ ಮಾತೆಯನ್ನ ನಿಷ್ಕ್ರಿಯೆಗೊಳಿಸಿದಂತಾಗುತ್ತದೆ. ಈ ಶಕ್ತಿಯನ್ನ ಕಾಂಗ್ರೆಸ್ ನಿಂದ ಐಎನ್ ಡಿಎ ಸಂಘಟನೆಯಿಂದ ನಡೆಯುತ್ತಿದೆ. ಹಾಗಾಗಿ 400 ಸ್ಥಾನನ್ನ ಬಿಜೆಪಿ ಪಡೆಯುವ ಮೂಲಕ ಶಕ್ತಿಯನ್ನ ಕೆಣಕಿದರೆ ಏನಾಗಲಿದೆ ನೋಡುವಂತಾಗುತ್ತದೆ ಎಂದರು.

ಹಾಗಾಗಿ ಕರ್ನಾಟಕದ ಜನ ಕಾಂಗ್ರೆಸ್ ಗೆ ಎಣೆಸಿ ಎಣೆಸಿ ಬುದ್ದಿಕಲಿಸಬೇಕಿದೆ. ಯುಪಿಐ ತಂತ್ರಜ್ಞಾನ, 5g ಇಂಟರ್ ನೆಟ್ ಗಳನ್ನ ರಾಷ್ಟ್ರೀಯ ಹೆದ್ದಾರಿ 6000 ಕಿಮಿ ರಾಷ್ಟ್ರೀಯ ಹೆದ್ದಾರಿಯನ್ನ ರಾಜ್ಯದಲ್ಲಿ ನಿರ್ಮಿಸಲಾಗಿದೆ. ಶಿವಮೊಗ್ಗ ದ ಕೋಟೆಗಂಗೂರಿನಲ್ಲಿ ರೈಲ್ವೆ ಜಂಕ್ಷನ್ ನಿರ್ಮಿಸಲಾಗುತ್ತಿದೆ. ಕಳೆದ 10 ವರ್ಷದಲ್ಲಿ ಅಭಿವೃದ್ಧಿ ಮಾಡಲಾಗಿದೆ ಎಂದರು.

ಡಾ.ಮಂಜುನಾಥ್ ಬೆಂಗಳೂರು ಗ್ರಾಮಾಂತರದಲ್ಲಿ, ದಾವಣಗೆರೆಯಲ್ಲಿ ಗಾಯಿತ್ರಿ ಸಿದ್ದೇಶ್ವರ, ಮಂಗಳೂರಿನಲ್ಲಿ ಬ್ರಿಜೇಶ್ ಚೋಟಾ, ಕೋಟಾ ಶ್ರೀನಿವಾಸ್ ಪೂಜಾರಿ ಶಿವಮೊಗ್ಗದಲ್ಲಿ ರಾಘವೇಂದ್ಋನ್ನ ಗೆಲ್ಲಿಸುವ ಮೂಲಕ ಈ ಬಾರಿ ಬಿಜೆಪಿ ನೇತೃತ್ವದ ಎನ್ ಡಿಎಯನ್ನ 400 ರಗಡಿ ದಾಟಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರನಕ್ಕೂ ಮುನ್ನಾ ತೆರೆದ ವಾಹನದಲ್ಲಿ ಆಗಮಿಸಿದ ಪ್ರಧಾನಿ ಮೋದಿ ಸಾರ್ವಜನಿಜರಿಗೆ ವಿಧ್ ಮಾಡಿಕೊಂಡು ವೇದಿಕೆಗೆ ಆರಂಭಿಸಿದರು. ಈ ವೇಳೆ ಸಂಸದ ರಾಘವೇಂದ್ರ, ದಾವಣಗೆರೆಯ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ, ಡಾ.ಮಂಜುನಾಥ್ ಮೊದಲಾದವರು ಸಾಥ್ ನೀಡಿದರು.

ಇದನ್ನೂ ಓದಿ-https://suddilive.in/archives/10979

Related Articles

Leave a Reply

Your email address will not be published. Required fields are marked *

Back to top button