ಕ್ರೈಂ ನ್ಯೂಸ್

ಕೊನೆಗೂ ಜೈಲಿನಲ್ಲಿ ಮುದ್ದೆ ಮುರಿದಿದ್ದ ಆ ಪಾಗಲ್ ಪ್ರೇಮಿ!

ಸುದ್ದಿಲೈವ್/ತೀರ್ಥಹಳ್ಳಿ

ಪ್ರೀತಿಸು ಎಂದು ಬೆನ್ನುಬಿದ್ದಿದ್ದ ತೀರ್ಥಹಳ್ಳಿಯ ಯುವತಿಗೆ ನಕಲಿ ವಿಡಿಯೋ ರಚಿಸಿ ಮದುವೆಯನ್ನೂ ಮುರಿದು ಬೀಳುವಂತೆ ಮಾಡಿದ ಪಾಗಲ್ ಪ್ರೇಮಿಗೆ ಕೊನೆಗೂ ಪೊಲೀಸರು ಜೈಲಿನಲ್ಲಿ ಮುದ್ದೆ ಮುರಿಸಿದ್ದಾರೆ.

ಡಿ.7 ರಂದು ಯುವತಿ ಪೋಷಕರು ತೋರಿಸಿದ್ದ ಯುವಕನನ್ನ ವರಿಸಿ ನವದಾಂಪತ್ಯವನ್ನ ಆರಂಭಿಸಿದ್ದಾಳೆ. ಆದರೆ ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಇಡೀ ಕುಟುಂಬ ಚಿತ್ರಹಿಂಸೆಗೊಂಡಿರುವ ಘಟನೆ ಬಗ್ಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

2017 ರಲ್ಲಿ ಬ್ಯಾಂಕಿಂಗ್ ಕೋಚಿಗೆ ಬೆಂಗಳೂರಿನಲ್ಲಿದ್ದ ಯುವತಿಗೆ ಬೆಳಗಾವಿಯ ಅಥಣಿ ತಾಲೂಕಿನ ದಶರಥ ದೇವರೆಡ್ಡಿ ಎಂಬಾತ ಪರಿಚಯವಾಗುತ್ತಾನೆ. ಈ ಪರಿಚಯವನ್ನ ದುರುಪಯೋಗ ಪಡಿಸಿಕೊಂಡು ಯುವತಿಯನ್ನ ಪ್ರೀತಿಸುವಂತೆ ಹಠಕ್ಕೆ ಬೀಳುತ್ತಾನೆ.

ಪ್ರೀತಿಸಿದವನು ಮದುವೆಯಾಗುವಂತೆ ಹಠಕ್ಕೆ ಬೀಳುತ್ತಾನೆ. ಪ್ರೀತಿಯನ್ನ ನಿರಾಕರಿಸಿದರೆ ಬಸ್ ಕೆಳಗೆ ಬಿದ್ದು ಸಾಯುವುದಾಗಿ ಬೆದರಿಸಿದ್ದಾನೆ. ಯುವತಿಯ ಕೋಚಿಂಗ್ ಸೆಂಟರ್ ನಲ್ಲಿದ್ದ ವಾಟ್ಸಪ್ ಗ್ರೂಪ್ ನಲ್ಲಿ ನಂಬರ್ ಪಡೆದು ಕರೆ ಮಾಡಿ ಪ್ರೀತಿಸದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದಾನೆ.

ಇವನ್ನೆಲ್ಲಾ ಸಹಿಸಿಕೊಂಡ ಯುವತಿಗೆ ಅಶ್ಲೀಲ ಮೆಸೇಜ್ ಮಾಡಿದ್ದಾನೆ. ಯುವತಿಗೆ ಬೇರೆ ಯುವಕನ ಜೊತೆ ಮದುವೆ ದಿನಾಂಕ ನಿಗದಿಪಡಿಸಿದರೂ ಆತನ ಹತ್ತಿರ ಹೋಗಿ ಫೋಟೋ ವಿಡಿಯೋಗಳನ್ನ ಎಡಿಟ್ ಮಾಡಿ, ನಕಲಿ ಅಶ್ಲೀಲ ವಿಡಿಯೋ ಮಾಡಿ ಮದುವೆ ನಿಗದಿಯಾದ ಯುವಕನಿಗೆ ತೋರಿಸಿ ಯುವತಿಯ ಬಾಳನ್ನೇ ಹಾಳು ಮಾಡಲು ಯತ್ನಿಸಿದ್ದ.

ಈ ಎಲ್ಲದರ ಬಗ್ಗೆ ಬೆಂಗಳೂರಿನ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆತನಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತಾದರೂ, ತೀರ್ಥಹಳ್ಳಿಯ ಯುವತಿ ಮನೆಗೆ ನುಗ್ಗಿದ ದಶರಥ ದೇವರೆಡ್ಡಿ, ಯುವತಿಯನ್ನ ನನಗೆ ಮದುವೆ ಮಾಡಿಕೊಡಬೇಕು ಇಲ್ಲ ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಈತನ ಹುಚ್ಚಾಟಕ್ಕೆ ಕುಟುಙಬವೇ ಹೈರಾಣಾಗಿದೆ.

ಮೊನ್ನೆ ಡಿ. 7 ರಂದು ಯುವತಿ ನವ ಜೀವನಕ್ಕೆ ಕಾಲಿಟ್ಟಿದ್ದಾಳೆ. ಇದನ್ನೂ ಸಹ ಮುರಿಯಲು ಯತ್ನಿಸಿದ್ದ ದಶರಥ ದೇವರೆಡ್ಡಿಗೆ ಜೈಲೂಟ ಬಡಿಸಲಾಗಿದೆ.

ಇದನ್ನೂ ಓದಿ-https://suddilive.in/archives/4740

Related Articles

Leave a Reply

Your email address will not be published. Required fields are marked *

Back to top button