ಸ್ಥಳೀಯ ಸುದ್ದಿಗಳು

ಗೆಲುವ ಅಭ್ಯರ್ಥಿ ಮತ್ತು ಪಕ್ಷ ನಿಷ್ಠರಿಗೆ ಟಿಕೇಟ್-ಜೋಶಿ

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆ ವಿಚಾರದಲ್ಲಿ ಯಾರಿಗೆ ಟಿಕೇಟ್ ಎಂಬ ಕುತೂಹಲ ಹೆಚ್ಚಾಗಿರುವ ಸಮಯದಲ್ಲಿಯೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ  ಹೇಳಿಕ ಮಹತ್ವ ಪಡೆದಿದೆ.

ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಕೇಂದ್ರ ಸಚಿವರು, ಯಾರು ಪಕ್ಷ ನಿಷ್ಠರಾಗಿದ್ದಾರೆ ಹಾಗೂ ಗೆಲ್ಲುವ ಅಭ್ಯರ್ಥಿಗೆ ಟಿಕೇಟ್ ನೀಡುವುದಾಗಿ ಹೇಳಿದ್ದಾರೆ. ಟಿಕೇಟ್ ಹಂಚಿಕೆ ಒಂದು ಪಕ್ಷದ ಪ್ರಕ್ರಿಯೆ. ಇದರಲ್ಲಿ ಯಾವುದೇ ಕಸರತ್ತು ಎಂಬುದು ಇರೊಲ್ಲ ಎಂದಿದ್ದಾರೆ.

ಇನ್ನು ಚುನಾವಣೆ ಘೋಷಣೆ ಆಗಿಲ್ಲ ಈಗಾಗಲೇ 195 ಸೀಟ್ ನ್ನ ಬಿಜೆಪಿ ಘೋಷಣೆ ಮಾಡಿದೆ. ಎಲ್ಲರೊಂದಿಗೆ ಮಾತುಕತೆ ನಡೆಸಿ, ಗೆಲ್ಲುವ ಅಭ್ಯರ್ಥಿಗಳ ಗಮನಿಸಿ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡ್ತಾರೆ. ಐತಿಹಾಸಿಕ ದಾಖಲೆ ವಿಜಯವನ್ನು ಈ ಬಾರಿ‌ ನಾವು ಪಡೆಯಲಿದ್ದೇವೆ ಎಂದರು.

370 ಕ್ಕು ಹೆಚ್ಚು ಬಿಜೆಪಿ ಗೆಲ್ಲಲ್ಲಿದೆ. ಅಭೂತ ಪೂರ್ವ ಬದಲಾವಣೆ ತರುತ್ತೇವೆ. ಆರ್ಥಿಕ ವ್ಯವಸ್ಥೆಯಲ್ಲಿ ಜಾಗತಿಕ ಮಟ್ಟದಲ್ಲಿ 5 ನೇ ಸ್ಥಾನದಲ್ಲಿ ಇದೆ. 3 ನೇ ಸ್ಥಾನಕ್ಕೆ ತರುವ ಮೂಲಕ ಭಾರತ ಅಭಿವೃದ್ಧಿ ಶೀಲ ರಾಷ್ಟ್ರ ಆಗಲಿದೆ ಸಿದ್ದರಾಮಯ್ಯ ಪುಷ್ಟೀಕರಣ ರಾಜಕಾರಣ ನಡೆಯುತ್ತಿದೆ

ಪಾಕಿಸ್ತಾನ ಜಿಂದಾಬಾದ್ ಅಂದವರಿಗೆ ರಕ್ಷಣೆ, ಹಿಂದುಸ್ತಾನ್ ಜಿಂದಾಬಾದ್ ಅಂದವರಿಗೆ ಶಿಕ್ಷೆ, ಇದು ಸಿದ್ದರಾಮಯ್ಯ ಧೋರಣೆ, ಜನ ಇದನ್ನು ಗಮನಿಸುತ್ತಿದ್ದಾರೆ. ಕರ್ನಾಟಕದಲ್ಲಿ ಕಳೆದ ಬಾರಿ 26 ಸ್ಥಾನ ಗೆದ್ದಿದ್ದೇವು, ಈ ಬಾರಿ 28 ಸ್ಥಾನ ಗೆಲ್ಲುತ್ತೇವೆ. ಬಹುತೇಕ ಹಾಲಿ ಸಂಸದರಿಗೆ ಟಿಕೇಟ್ ಕೈ ತಪ್ಪುವ ವಿಚಾರ ಸತ್ಯಕ್ಕೆ ದೂರವಾದುದ್ದು ಎಂದರು.

ಹಾಲಿ ಸಂಸದರಿಗೆ ಟಿಕೇಟ್ ಕೈತಪ್ಪಲಿದೆ ಎಂಬುದು   ಕೇವಲ ಊಹಾಪೋಹ, ಗೆಲ್ಲುವ ಅಭ್ಯರ್ಥಿಗಳಿಗೆ, ಪಕ್ಷಕ್ಕೆ ನಿಷ್ಟರಾಗಿದ್ದಾರೆ ಅವರಿಗೆಲ್ಲಾ ಟಿಕೇಟ್ ಸಿಗಲಿದೆ ಎಂದರು.‌

ಇದನ್ನೂ ಓದಿ-https://suddilive.in/archives/10381

Related Articles

Leave a Reply

Your email address will not be published. Required fields are marked *

Back to top button