ಶಾಸಕಿ ಶಾರದ ಪೂರ್ಯನಾಯ್ಕ್ ನೇತೃತ್ವದಲ್ಲಿ ಕುಡಿಯುವ ನೀರಿನ ಕುರಿತು ಚರ್ಚೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಕುಡಿಯುವ ನೀರಿನ ಕುರಿತು ಶಿವಮೊಗ್ಗ ಜಿಪಂ ಸಭಾಂಗಣದಲ್ಲಿ ಇಂದು ಶಾಸಕಿ ಶಾರದಾ ಪೂರ್ಯನಾಯ್ಕ್ ನೇತೃತ್ವದಲ್ಲಿ ಪಿಡಿಒ, ಗ್ರಾಮಪಂಚಾಯಿತಿ ಅಧ್ಯಕ್ಷ ಮತ್ತುಉಪಾಧ್ಯಕ್ಷರ ಸಭೆ ನಡೆದಿದೆ. ಎಲ್ಲಾ ಗ್ರಾಮ ಪಂಚಾಯಿತಿಯ ಕುಡಿಯುವ ನೀರಿನ ಘಟಕವನ್ನ ಆರ್ ಎಎಸ್ ನಿಂದ ನಿರ್ವಹಿಸಲು ತೀರ್ಮಾನಿಸಲಾಗಿದೆ
ಬಿಬೀರನಹಳ್ಳಿ ಕೋಹಳ್ಳಿ, ಆಯನೂರು ಪಂಚಾಯಿತಿಯಲ್ಲಿ ಕುಡಿಯುವ ನೀರಿನ ಎನ್ ಆರ್ ಐಜಿ ಜಲಜೀವನ್ ಮಿಷನ್ ನಲ್ಲಿ ನಿರ್ಮಿಸಲಾಗಿದೆ. ಬಿಬೀರನಹಳ್ಳಿಯಲ್ಲಿ ಪೈಪ್ ಲೈನ್ ಗಳನ್ನ ಕಿತ್ತು ಹಾಕಿರುವ ಬಗ್ಗೆ ಚರ್ಚೆ ನಡೆದಿದೆ.
ಹಳೇ ಪೈಪ್ ನಲ್ಲಿ ನೀರು ಬರ್ತಾ ಇದೆ. ಆದರೆ ಹೊಸ ಪೈಪ್ ಲೈನ್ ನಲ್ಲಿ ನೀರು ಬರುತ್ತಿಲ್ಲ. ಜಲಜೀವನ್ ಯೋಜನೆಯಲ್ಲಿ ನೀರು ಬರುತ್ತಿಲ್ಲ ಎಂದು ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸಮಸ್ಯೆ ಹೇಳಿಕೊಂಡರು. ಹೊಸಪೈಪ್ ಲೈನ್ ನಲ್ಲಿ ಜೆಜೆಎಂ ನೀರು ಕುಡಿಯುವ ಹರಿಸಲು ಶಾಸಕಿ ಸೂಚನೆ ನೀಡಿದರು. ಬಾಳೆಕೊಪ್ಪದಲ್ಲಿ ಜೆಜೆ ಎಂ ಇನ್ನೂ ಕಾಮಗಾರಿ ಸಂಪೂರ್ಣ ಆಗಿಲ್ಲ. ಪೈಪ್ ಲೈನ್ ಆಗಿದೆ ವಿದ್ಯುತ್ ಸಂಪರ್ಕಕ್ಕೆ ಮೆಸ್ಕಾಂ ಆಕ್ಷೇಪಿಸಿದೆ ಎಂದು ಪಿಡಿಒ ತಿಳಿಸಿದರು.
ಒಂದು ಬೋರ್ ಇದೆ. ಇನ್ನೋಂದು ಅವಶ್ಯಕತೆ ಇದೆ. ಗ್ರಾಪಂ ನ ವ್ಯಾಪ್ತಿಯಲ್ಲಿ ಈ ಹಿಂದೆ ಕುಡಿಯುವ ನೀರಿನ ಯೋಜನೆ ಮಾಡಿ ಡೆಡ್ ಆಗಿರುವ ಮೀಟರ್ ನ್ನ ಬಳಸಿಕೊಳ್ಳಲು ಸೂಚನೆ ನೀಡಲಾಯಿತು. ಡೆಡ್ ಆಗಿರುವ ಹಳೇಯ ಮೀಟರ್ ಇಲ್ಲ ಎಂದು ಪಿಡಿಒ ಹೇಳಿದ್ದಾರೆ. ಕುಡಿಯುವ ನೀರಿಗೆ ಅವಕಾಶ ಕೊಡಲು ಮೆಸ್ಕಾಂಗೆ ಸೂಚಿಸಲಾಗಿದೆ ವಿಜಿಲೆನ್ಸ್ ಬಂದರೆ ಎಇಇಗೆ ಕರೆ ಮಾಡಲು ಪಿಡಿಒಗೆ ಸೂಚಿಸಲಾಗಿದೆ.
ಬೇಡರಹೊಸಳ್ಳಿಯ ಎರಡು ಬೋರ್ ನಿಂದ ಬುಳ್ಳಾಪುರ ಕ್ಕೆ ನೀರು ಕೊಡಿಸಲಾಗಿದೆ. ಬೋರ್ ಕೊರೆಯಿಸಿದ ಹಣ ಬಾಕಿ ಇದ್ದು ಜೆಜೆಎಂನಿಂದ ಹಣವಿಲ್ಲ ಹಾಗಾಗಿ ಶಾಸಕರ ಅನುದಾನದಿಂದಲೇ ಹಣ ನೀಡುವ ಬಗ್ಗೆ ಚರ್ಚೆ ಆಗಿದೆ. ಹಣ ನೀಡುವುದಾಗಿ ಶಾಸಕರು ಒಪ್ಪಿಕೊಂಡರು.
ಬಿದರೆ ಗ್ರಾಮಪಂಚಾಯಿತಿಯಲ್ಲಿ ಪೈಪ್ ಲೈನ್ ಸಮರ್ಪಕವಾಗಿ ಹಾಕದಿರುವುದರಿಂದ ನೀರು ಸಮರ್ಪಕ ಹಂಚಿಕೆಯಾಗುತ್ತಿಲ್ಲ. ಪೈಪ್ ಲೈನ್ ಮೇಲೆ ಕೆಳಗೆ ಇರುವುದರಿಂದ ಕಂಟ್ರೋಲ್ ವಾಲ್ ಅಳವಡಿಸಲು ಸಭೆಯಲ್ಲಿ ಸೂಚಿಸಲಾಯತು. ಹೊನ್ನವಿಲೆ ಗ್ರಾಮದ ಸ್ಮಶಾನದ ಜಾಗವನ್ನ ಆರ್ ಟಿ ಸಿ 11 ರಲ್ಲಿದೆ ಅದನ್ನ 9 ರಲ್ಲಿ ಬರುವಂತೆ ಗ್ರಾಪಂ ಅಧ್ಯಕ್ಷರು ಉಪಾಧ್ಯಕ್ಷರು ಕೇಳಿಕೊಂಡರು. ತಹಶೀಲ್ದಾರ್ ನಾಗರಾಜ್ ಮಾತನಾಡಿ ಆರ್ಟಿಸಿ 9 ಗೆ ತರುವ ಅಧಿಕಾರವಿಲ್ಲ ಎಂದರು
ಶಾಸಕಿ ಪೂರ್ಯನಾಯ್ಕ್ ಸ್ಮಶಾಸನ ಜಾಗಕ್ಕೆ ಬೇಲಿಹಾಕಿಕೊಳ್ಳಿ ಕಂದಾಯ ಭೂಮಿನೇ ಆಗಿರುವುದರಿಂದ ಯಾವುದರಲ್ಲಿ ಇದ್ದರೆ ಏನು? ಪಹಣಿಯಲ್ಲಿ ಸ್ಮಶಾನ ಇರುವುದನ್ನ ಗಮನ ಹರಿಸಿ ಎಂದು ಸೂಚಿಸಿದರು. ಚೋರಡಿ ಗ್ರಾಪಂ ನಿರಂಜನ್ ಗೌಡ ಮಾತನಾಡಿ ನೀರಿನ ಸಮಸ್ಯೆ ವಾರ್ಡ ಎರಡರಲ್ಲಿ ಇದೆ. ಮಸೀದಿ ಎದುರಿನ ಒಂದೇ ಬೋರ್ ನಿಂದ ನೀರು ಹರಿಸಲಾಗುತ್ತಿದೆ ಎಂದು ತಿಳಿಸಿದರು.
ಜೆಜೆಎಂ ಕಾಮಗಾರಿ ಕೆಲವೊಂದುಕಡೆ ಹಾಳಾಗಿದೆ. ಕೆಲವರು ಗೊಬ್ಬರ ಗುಂಡಿಗೆ ಬಿಡಲಾಗರುವ ಘಟನೆ ನಡೆದಿದೆ. 40ವರ್ಷದ ಹಿಂದಿನ ಪೈಪ್ ಲೈನ್ ಇಲ್ಲದೆ ಇರುವುದರಿಂದ ಮತ್ತೊಂದು ಹೊಸ ಪೈಪ್ ಲೈನ್ ಗೆ ಸೂಚನೆ ನೀಡಬೇಕು ಎಂದು ಆಕ್ಷೇಪಿಸಿದರು.
ಪಿಡಿಒ ಮಾತನಾಡಿ ಕೆಲ ಏಜೆನ್ಸಿ ಸರ್ವೆ ಮಾಡಿ ಹಳೆ ಪೈಪ್ ಲೈನ್ ನಲ್ಲೇ ಕುಡಿಯುವ ನೀರು ಹಂಚಲು ಫಿಟ್ ನೆಸ್ ಕೊಟ್ಟಿತ್ತು. ಹಾಗಾಗಿ ಹಳೇ ಪೈಪ್ ಲೈನ್ ನಲ್ಲೇ ನೀರು ಹರಿಸಲಾಗುತ್ತಿದೆ. ಜೆಜೆಎಂ ಯೋಜನೆ ಮುಕ್ತಾಯವಾಗಿದೆ ಹಾಗಾಗಿ ಹೊಸ ಪೈಪ್ ಲೈನ್ ಗೆ ಅರ್ಜಿ ಹಾಕಲು ಸಾಧ್ಯವಿಲ್ಲವೆಂಬ ಅಂಶ ಬೆಳಕಿಗೆ ಬಂದಿದೆ.
ಕಸವಿಲೇವರಿ ಮತ್ತ ಸಶ್ಮಾನ ಜಾಗ ಅರಣ್ಯದವರ ಆಕ್ಷೇಪಣೆ ಇದೆ. ಇದನ್ನ ಚಾಯಿತಿಗೆ ಪಹೀ ಮಾಡಿಸಲು ತಹಶೀಲ್ದಾರ್ ನಾಗರಾಜ್ ಗೆ ತಿಳಿಸಲಸಯಿತು. ಎಲ್ಲಾ ಗ್ರಾಮ ಪಂಚಾಯಿತಿಯವರು ಕುಡಿಯುವ ನೀರಿನ ಘಟಕವನ್ನ ಆರ್ ಎಸಿ ಮೂಲಕ ನೀಡುವ ಅನುದಾನದಿಂದ ನಿರ್ವಹಿಸಲು ಸೂಚಿಸಲಾಯಿತು.
ಇದನ್ನೂ ಓದಿ-https://suddilive.in/archives/2305
