ರಾಜಕೀಯ ಸುದ್ದಿಗಳು

ಸದಾಶಿವ ಆಯೋಗ ಜಾರಿಗೊಳಿಸದಂತೆ ಜಿಲ್ಲಾ ಬಂಜಾರ ಸಂಘ ಒತ್ತಾಯ

ಸುದ್ದಿಲೈವ್/ಶಿವಮೊಗ್ಗ

ಎಜೆ ಸದಾಶಿವ‌ ಆಯೋಗವನ್ನ ಜಾರಿಗೊಳಿಸುವಂತೆ ಬಿಜೆಪಿ ಒಳಮೀಸಲಾತಿ ತರಲು ಯೋಚಿಸಿ ಅದು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತ್ತು. ಈ ಹಿನ್ನಲೆಯಲ್ಲಿ ಎಜೆ ಸದಾಶಿವ ಆಯೋಗವನ್ನ‌ ಬಿಜೆಪಿ ತಿರಸ್ಕರಿಸಿದ್ದರು.  ಆದರೆ ಈಗ ಕಾಂಗ್ರೆಸ್ ಮತ್ತೆ ಆಯೋಗದ ವರದಿ ಜಾರಿಗೆತರಲು ಹೊರಟಿದೆ ಎಂದು ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ತಿಳಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಮಾಜ ಕಲ್ಯಾಣದ ಪ್ರಧಾನಿ ಕಾರ್ಯದತ್ಶಿ ಮಣಿವಣ್ಣನ್ ಅವರು ಎಜೆ ಸದಾಶಿವ ಆಯೋಗ ಈಗ ಸೂಕ್ತವಲ್ಲವೆಂದು ಬತೆದಿದ್ದಾರೆ.  ಸೇರ್ಪಡೆಹೊರಗಡೆ ಇಡುವ ಆಧಾರದ ಬಗ್ಗೆ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಸರ್ಕಾರ ಬೋವಿ ಲಂಬಾಣಿ ಕೊರಮ‌, ಕೊರಚ 16/02/2023 ಕ್ಕೆ ಕೇಂದ್ರ ಸರ್ಕಾರಕ್ಕೆ ವಙದಿತ ಶರ್ಮ ತಿಳಿಸಿದ್ದಾರೆ. ಆದರೆ ಮುನಿಯಪ್ಪನವರು ಸದಾಶಿವ ಆಯೋಗವನ್ನ ಜಾರಿಗೆ ತರುವುದಾಗಿ ಹೇಳಿದ್ದಾರೆ. ಅವೈಜ್ಞಾನಿಕ ವರದಿಯನ್ನ ಸಾರಾಸಗಟವಾಗಿ ತಿರಸ್ಕರಿಸಿದೆ ಜಾರಿಗೊಳಿಸಬಾರದು.

ಸಚಿವ ಸಂಪುಟದಿಂದ ಕೆ.ಹೆಚ್.ಮುನಿಯಪ್ಪರನ್ನ ಕೈಬಿಡಬೇಕು. ಸೋತಿಕೆ ವರದಿ ಜಾರಿಗೆಯಾಗಬಾರದು.‌ ಸದನದಲ್ಲಿ ಈ ವಿಷಯ ಮಂಡನೆಯಾಗಬಾರದು. ಸದಾಶಿವ ವರದಿಯನ್ನ‌  ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.

ದೇಬೇಗೌಡರು ಒಳಮೀಸಲಾತಿ ಜಾರಿಗೆ ತರಲು ಯತ್ನಿಸಿದರು.  ಆರ್ಥಿಕ, ಸಾಮಾಜಿಕ ಶೈಕ್ಷಣಿಕ ಪ್ರಗತಿಯನ್ನ ಕೇಂದ್ರ ಪ್ರತಿವರ್ಷ 10 ಕ್ಕೆ ಪರಿಶೀಲಿಸಲಿದೆ. ಸದಾಶಿವ ಆಯೋಗವನ್ನ ದೇವೇಗೌಡರು ಸಾಮಾಜಿ ಅಸಮಾನತೆ ಹೋಗಲಾಡಿಸಲು ಆಯೋಗ ರಚಿಸಿದರು.  ಒಳ ಜಾತಿಯ ಮಾಹಿತಿಯನ್ನ‌ ಆಯೋಗ ತಯಾರಿಸಿತ್ತು. ಈ ವರದಿ ಸೋರಿಕೆ ಆಗಿವೆ. ಒಳ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶ ಇಲ್ಲ.

ಆಂದ್ರ ಸರ್ಕಾರ ಕೇಂದ್ರಕ್ಕೆ ಒಳಮೀಸಲಾತಿಕೊಡಲು ಪತ್ರ ಬರೆದಿತ್ತು. ನ್ಯಾಯಾಲಯವೇ ತಿರಸ್ಕರಿಸಿತ್ತು. ಆದರೆ ನಮ್ಮಗಳ ನಡುವೆ ಒಡೆದು ಆಳುವ ನೀತಿ ಜಾರಿಗೆ ತರಲಾಯಿತು. ಹಾಗಾಗಿ ವಿರೋಧವಾಗಿದೆ ಎಂದರು. ಬಿಜೆಪಿ ಸರ್ಕಾರ ಒಳ ಮೀಸಲಾತಿ ಹೆಚ್ಚಿಸಿ ಆದೇಶಿಸಿದ್ದು ರಾಜ್ಯಾದ್ಯಂತ ಚುನಾವಣೆಯ ವೇಳೆ ಹೊಡೆತ ಬಿದ್ದಿತ್ತು.‌

ಒಂದು ವರ್ಷದ ಹಿಂದೆ ಸಾರ್ವಜನಿಕ ಚರ್ಚೆಗೆ ತರದೆ ಜಾರಿ ತರಲು ಹೊರಟಿದ್ದು ಚುನಾವಣೆಯ ವೇಳೆ ಪಕ್ಷಕ್ಕೆ ಹಿನ್ನಡೆಯಾಯಿತು ಎಂದು ಮಾಜಿ ಶಾಸಕರು ತಿಳಿಸಿದರು. ಆದರೆ ಇದೇ ಶಾಸಕರು ಆ ವೇಳೆ ಒಳ ಮೀಸಲಾತಿಯನ್ನ‌ ಬೆಂಬಲಿಸಿದ್ದರು.

ಒಂದು ವೇಳೆ ಜಾರಿಗೆ ತಂದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ನಾಗರಾಜ್ ನಾಯ್ಕ್, ವಾಸುದೇವ ನಾಯ್ಕ್, ಶಿವಾನಂದ‌ ನಾಯ್ಕ್ ಉಪಸ್ಥಿತರಿದ್ದರು

ಇದನ್ನೂ‌ ಓದಿ-https://suddilive.in/archives/4238

Related Articles

Leave a Reply

Your email address will not be published. Required fields are marked *

Back to top button