ರಾಷ್ಟ್ರೀಯ ಸುದ್ದಿಗಳು

ಸರ್ವಂ ರಾಮ ಮಯಂ…-ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಸುದ್ದಿಲೈವ್/ಶಿವಮೊಗ್ಗ

ಅಯೋಧ್ಯ ರಾಮ ಮಂದಿರದ ಉದ್ಘಾಟನೆ ಮತ್ತು ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಕ್ಷಣ ಗಣನೆ ಆರಂಭವಾಗಿದೆ. ರಾಮ ಪ್ರಾಣ ಪ್ರತಿಷ್ಠಾನಕ್ಕೆ ಶಿವಮೊಗ್ಗದಲ್ಲೂ ನಿಧಾನವಾಗಿ ಕಾರ್ಯಕ್ರಮಗಳು, ಹೋಮ ಹವನಗಳು ಆರಂಭಗೊಂಡಿದೆ. ಸರ್ವಂ ರಾಮ ಮಯಂ ಎಂಬಂತೆ ಕಂಗೊಳಿಸುತ್ತಿವೆ.

ನಗರದ ಜಯನಗರದ ರಾಮ ಮಂದಿರದಲ್ಲಿ ದೇವರಿಗೆ ವಿಶೇಷ ಪೂಜೆ ಮತ್ತು ರಾಜಬೀದಿ ಉತ್ಸವ ಹಮ್ಮಿಕೊಳ್ಳಲಾಗಿದೆ. ಕೋಟೆ ಆಂಜನೇಯ ದೇವಸ್ಥಾನದಲ್ಲಿ ರಾಮ ತಾರಕ ಹೋಮ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಬೆಳಿಗ್ಗೆನೆ ಮೈಲಾರೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ರಾಮ ಜಪ ಕಾರ್ಯಕ್ರಮ ನಡೆಯುತ್ತಿದೆ.

ನಗರದಲ್ಲಿ ಫ್ಲೆಕ್ಸ್ ಗಳು ರಾರಾಜಿಸಿವೆ. ಲಕ್ಷ್ಮೀ ಚಲನಚಿತ್ರ ಮಂದಿರದ ಬಳಿ ರಾಮನಿಗಾಗಿ ಚೌಡೇಶ್ವರಿ ಗೆಳೆಯರ ಬಳಗದಿಂದ ಅನ್ನ ಸಂತರ್ಪಣ ಕಾರ್ಯಕ್ರಮ ಮತ್ತು ರಾಮನ ವಿಗ್ರಹ ನಿರ್ಮಿಸಲಾಗಿದೆ.

ರಾಮಣ್ಣ ಶ್ರೇಷ್ಠಿಪಾರ್ಕ್ ನ ಸರ್ಕಲ್ ನಲ್ಲಿ ಭಾಹುಸಾರ ಕ್ಷತ್ರಿಯ ಸಂಘದ ವತಿಯಿಂದ ಅನ್ನಸಂತರ್ಪಣ ಕಾರ್ಯಕ್ರಮ ನಡೆಯಲಿದೆ. ಶತಕೋಟಿ ರಾಮತಾರಕ ಯಜ್ಞ ಸಮಿತಿಯಿಂದ 20 ದೇವಸ್ಥಾನಗಳಿಗೆ ಪ್ರಸಾದದ ವಿತರಣೆ ನಡೆಯಿತ್ತಿದೆ.

ಹೊಳೆ ಸೇತುವೆ ಬಳಿಯ ಗಡಿ ಆಂಜನೇಯ ಸ್ವಾಮಿ ದೇವಸ್ಥಾನ, ಭೋವಿ ಕಾಲೋನಿಯ ಆಂಚನೇಯ ಸ್ವಾಮಿ ದೇವಸ್ಥಾನ, ವಿದ್ಯಾನಗರದ ಮಾತಂಗಮ್ಮ ದೇವಸ್ಥಾನ, ಬಾಪೂಜಿನಗರದ ಮಾರಿಕಾಂಬ ದೇವಸ್ಥಾನ, ಬಸ್ ನಿಲ್ದಾಣದ ಹಿಂಭಾಗದ ಅಂಗಳ ಪರಮೇಶ್ವರಿ ದೇವಸ್ಥಾನ ಸೇರಿ 20 ದೇವಸ್ಥಾನಗಳಿಗೆ ಸಮಿತಿ 5 ಸಾವಿರ ಪ್ರಸಾದಗಳ ವ್ಯವಸ್ಥೆ ಮಾಡಿದೆ.

ಮೈಲಾರೇಶ್ವರ, ಉಷ ನರ್ಸಿಂಗ್ ಹೋಮ್ ಹೊರ ಭಾಗದಲ್ಲಿ, ರಾಮಣ್ಣ ಶ್ರೇಷ್ಠಿ ಪಾರ್ಕ್, ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ದೊಡ್ಡ ದೊಡ್ಡ ಸ್ಕ್ರೀನ್ ಅಳವಡಿಸಲಾಗಿದೆ. ಇಲ್ಲಿ ಎಲ್ಲಾ ಅಯೋಧ್ಯ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರ ಆಗುವ ಸಾಧ್ಯತೆ ಇದೆ. ರಾಮ ಮಂದಿರ ಉದ್ಘಾಟನೆಗಾಗಿ ಅಹಲವಾರು ದೇವಸ್ಥಾನದಲ್ಲಿ ಅಯೋದ್ಯ ರಾಮ ಕಾರ್ಯಕ್ರಮ‌ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

ಬೆಳಿಗ್ಗೆ ಶಿವಪ್ಪ ನಾಯಕ ಪ್ರತಿಮೆ ಬಳಿ  ಮಾಜಿ ಸಚಿವ ಈಶ್ವರಪ್ಪರಿಂದ 5 ಸಾವಿರ ಲಾಡು ವಿತರಣೆ ಕಾರ್ಯಕ್ರಮ‌ಜರುಗಲಿದೆ. ಸಂಜೆ ಸಮಿತಿಯಿಂದ ಗೋಪಿ ವೃತ್ತದಲ್ಲಿ ದೀಪ ಹಚ್ಚೋದು, ಪ್ರಸಾದ ವಿತರಣೆ ಹಾಗೂ ಭಕ್ತಿ ಗೀತೆ ಕಾರ್ಯಕ್ರಮ ನಡೆಯಲಿದೆ.‌

ಫುಲ್ ಪೊಲೀಸ್ ಪೋರ್ಸ್

ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಶಿವಮೊಗ್ಗ ಸಜ್ಜಾಗುತ್ತಿದೆ. ಶಿವಮೊಗ್ಗದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಫೋರ್ಸ್ ಅಳವಡಿಸಲಾಗಿದೆ. ಈ ಕುರಿತು ಸುದ್ದಿಲೈವ್ ಗೆ ಮಾಹಿತಿ ನೀಡಿದ ಎಸ್ಪಿ ಮಿಥುನ್ ಕುಮಾರ್ ಜಿಲ್ಲೆಯಲ್ಲಿ 8 ಕೆಎಸ್ ಆರ್ ಪಿ ತುಕಡಿಗಳು, 10 ಡಿಎಆರ್ ಸೇರಿ ಸುಮಾರು 2500 ಸಾವಿರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ-https://suddilive.in/archives/7405

Related Articles

Leave a Reply

Your email address will not be published. Required fields are marked *

Back to top button