ಸ್ಥಳೀಯ ಸುದ್ದಿಗಳು

ಮೂರು ರಾಜ್ಯಗಳ್ಲಿ ಬಿಜೆಪಿ ಜಯಭೇರಿ ಹಿನ್ನಲೆ ಈಶ್ವರಪ್ಪರಿಂದ ಬೆಳ್ಳಂಬೆಳಿಗ್ಗೆ ಸುದ್ದಿಗೋಷ್ಠಿ

ಸುದ್ದಿಲೈವ್/ಶಿವಮೊಗ್ಗ

ನಾಲ್ಕು ರಾಜ್ಯಗಳ ಫಲಿತಾಂಶದಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಗೆದ್ದು ಬೀಗಿದೆ. ಮೂರು ರಾಜ್ಯದಲ್ಲಿ ಬಿಜೆಪಿಯ ಜಯಭೇರಿಯಿಂದ ರಾಜ್ಯದಲ್ಲೂ ಬಿಜೆಪಿ ನಾಯಕರನ್ನ ಆಕ್ಟೀವ್ ಮಾಡಿದೆ.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಿಎಂ ಸಿದ್ದರಾಮಯ್ಯ  ಮುಂದಿನ  ಚುನಾವಣೆಯಲ್ಲಿ ಸ್ಪರ್ಧಿಸೊಲ್ಲವೆಂದಿದ್ದೀರಾ. ಗ್ಯಾರೆಂಟಿಗಾಗಿ ಹಣ ಜೋಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅಭಿವೃದ್ಧಿ ಕೆಲಸ ಕುಂಠಿತಗೊಂಡಿದೆ. ನಿಮ್ಮ ಹಿತೈಷಿಯಾಗಿ ಕೊನೆ ಚುನಾವಣೆ ಎಂದಿರುವ ಸಿದ್ದರಾಮಯ್ಯ ದಲಿತರಿಗೆ ವಸತಿಗಳಿಗೆ ಹಣ ಬಿಡುಗಡೆ ಮಾಡುವಂತೆ ಮನವಿ ಮಢಿಕೊಂಡರು..

ನಗರದಲ್ಲಿ 4800 ಮನೆ ನಿಂತಿದೆ. ಈ ಮನೆಗಳು ಬಡವರು ಮತ್ತು ಹಿಂದುಳಿದವರೆ ಈ ಮನೆಗಳನ್ನ ಹೆಚ್ಚು ಹೊಂದಿರುವುದಾಗಿದ್ದರಿಂದ ಬಡವರಿಗೆ ಅನುಕೂಲವಾಗಲಿದೆ ಗೋವಿಂದಾಪುರ ಮತ್ತು‌ಗೋಪಿಶೆಟ್ಟಿಕೊಪ್ಪದಲ್ಲಿ 400 ಮನೆ ನೀಡಲಾಗಿದೆ 600 ಮನೆ ಹಂಚಲಾಗುವುದು. ಒಬ್ಬರೈತರಿಗೆ ಬೆಳೆ ಪರಿಹಾರ ಬಂದಿಲ್ಲ.ಕೇಂದ್ರದವರ ಮೇಲೆ ಬೆಟ್ಟುಮಾಡುತ್ತಿದೆ. ರಾಜ್ಯ ಮೊದಲು ಹಣ ಬಿಡುಗಡೆ ಮಾಡಿದರೆ ಕೇಂದ್ರ ತಮ್ಮ ಪಾಲು ಬಿಡುಗಡೆ ಮಾಡಲಿದೆ ಎಂದರು.

20 ತಿಂಗಳಿಂದ ಸಂಬಳ ಬಂದಿಲ್ಲವೆಂದು ಪ್ರತಿಭಟನೆ ನಡೆಯುತ್ತಿದೆ. ಹಿಂದುಳಿದ ವರ್ಗಗಳ ವಸತಿ ಮತ್ತು ಹಾಸ್ಟೆಲ್ ಗಳು ನಿರ್ಮಾಣ ಸ್ಥಗಿತಗೊಂಡಿದೆ. ರಾಜ್ಯದಲ್ಲಿ ಮುಂದಿನ ವರ್ಷಗಳಲ್ಲಿ ಸಿದ್ದರಾಮಯ್ಯ ತಮ್ಮ  ಯೋಚನೆಗಳನ್ನ ಸ್ವತಂತ್ಯವಾಗಿ ಜಾರಿಗೊಳಿಸುವಂತಾಗಲಿ ಎಂದರು.

ಡಿಕೆಶಿಗೂ ಟಾಂಗ್ ನೀಡಿದ ಈಶ್ವರಪ್ಪ ಅವರಿಗೆ ಉಜ್ವಲ ರಾಜಕಾರಣ ಇದೆ. ಆದರೂ ತೆಲಂಗಾಣಕ್ಕೆ ಹೋಗಿ ಕುಳಿತಿದ್ದಾರೆ. ಸಿಎಂ ಮತ್ತು ಮಗ ಸಾಕಷ್ಟು ದುಡಿದಿದ್ದೀರಿ ಹಲೋ ಅಪ್ಪ ತನಿಖೆ ಮಾಡಿ ಎಂದು ಒತ್ತಾಯಿಸಲಾಗಿತ್ತು. ಹೋಗಲಿ ತನಿಖೆ ಬೇಡ ಅಭಿವೃದ್ಧಿ ಮಾಡಿ. ಜನ ನೆನಪಿಸಿಕೊಳ್ಳುವಂತೆ ಯೋಜನೆ ಜಾರಿಗೆ ತನ್ನಿ ಎಂದು ಸಲಹೆ ನೀಡಿದರು.

ಮೂರು ರಾಜ್ಯದಲ್ಲಿ ಕಾಂಗ್ರೆಸ್ ಅವರ ಗ್ಯಾರೆಙಟಿ ವರ್ಕ್ ಆಗಿಲ್ಲ. ಇನ್ನು ಮುಂದೆ ಪಿಎಂ‌ ಮೋದಿನೇ ಗ್ಯಾರೆಂಟಿ ಎಂದ ಈಶ್ವರಪ್ಪ ತೆಲಂಗಾಣದ ಚುನಾವಣೆಯಲ್ಲಿ  ಜಮೀರ್ ಹೇಳಿಕೆ ನೀಡಿದ್ದ ಮುಸ್ಲೀಂರಿಗೆ ಬಿಜೆಪಿ ತಲೆಬಾಗುವಂತೆ ಮಾಡಿದೆ ಎಂದು ಹೇಳಿದ್ದರು. ಮುಸ್ಲೀಂರಲ್ಲಿ ಹೆಚ್ಚಿನ ಕೋಮುದ್ವೇಷ ತುಂಬಿದ್ದರಿಂದ ಕಾಂಗ್ರೆಸ್ ಗೆಲವಿಗೆ ಕಾರಣವಾಗಿದೆ. ಮುಂದಿನ ಚುನಾವಣೆಯಲ್ಲಿ ಎಚ್ಚೆತ್ತುಕೊಂಡು ಕೇಂದ್ರದ ಶ್ರೀಕೃಷ್ಣನ ತಂತ್ರಗಾರಿಕೆಯಿಂದ ಗೆಲವು ಸಾಧಿಸಲಿದ್ದೇವೆ ಎಂದರು.‌

17 ರಾಜ್ಯ ಬಿಜೆಪಿ, 4 ಕಡೆ ಕಾಂಗ್ರೆದ್ ನವರು ಸರ್ಕಾರ ನಡೆಸುತ್ತಿದ್ದಾರೆ. ಸನಾತನ ಧರ್ಮವನ್ನ iNDIA ಯ  ಸದಸ್ಯರೊಬ್ವರು ಟೀಕಿಸಿದ್ದಾರೆ.ಇದರ ಫ್ರತಿಫಲದೊರೆಯಲಿದೆ. ತೆಲಂಗಾಣದಲ್ಲಿ ಮುಂದಿನ ಸಿಎಂ ಎಂದು ಹೊರಟಿದ್ದ ಯಶವಂತ್ ರೆಡ್ಡಿ ಹಾಲಿ ಸಿಎಂ ಕೆಸಿಎಆರ್‌ನ್ನ ಸೋಲಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ.

ಶಿವರಾಜ್ ಸಿಂಗ್ ಚೌಹಾಣ್ ಅವರನ್ನ ಮಧ್ಯಪ್ರದೇಶದಲ್ಲಿ ಸಿಎಂ ಎಂದು ಬಿಂಬಿಸುತದತಾರೋ ಇಲ್ಲವೋ ಗೊತ್ತಲ್ಲ ಆದರೆ ಬಿಜೆಪಿ ಐದನೇ ಬಾರಿಗೆ ಗೆಲವು ಸಾಧಿಸಲಿದೆ. ಪಂಚರಾಜ್ಯದ ಚುನಾವಣೆ ಸ್ಪೂರ್ತಿ ತುಂಬಿದೆ. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರವನ್ನ ಗೆಲ್ಲುತ್ತೇವೆ ಎಂದರು.

ಯತ್ನಾಳ್ ಪದೇ ಪದೇ ರಾಜ್ಯ ಅಧ್ಯಕ್ಷ ರ ವಿರುದ್ಧ ಮಾತನಾಡುತ್ತಿರುವುದು ಪಕ್ಷಕ್ಕೆ ಮುಜುಗರ ತರೊಲ್ವಾ ಎಂದು ಪ್ರಶ್ನಿಸಿದ ಪ್ರತ್ರಕರ್ತರಿಗೆ ಯತ್ನಾಳ್ ಕಟ್ಟರ್ ಹಿಙದುತ್ವವಾದಿ ಅವರ ಮನಸ್ತಾಪ ತಣ್ಣಗಾಗಿಸಲಾಗುವುದು ಎಂದರು

ಇದನ್ನೂ ಓದಿ-https://suddilive.in/archives/4230

Related Articles

Leave a Reply

Your email address will not be published. Required fields are marked *

Back to top button