ಬಿಜೆಪಿಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿಕೊಳ್ಳಿ ಅದರ ಕಥೆ ಮುಗಿದಿದೆ-ಸಚಿವ ಶರಣ ಪ್ರಕಾಶ್ ಪಾಟೀಲ್

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಯಾರನ್ನ ಬೇಕಾದರೂ ಆಯ್ಕೆ ಮಾಡಿಕೊಳ್ಳಲಿ, ಬಿಜೆಪಿ ಕತೆ ಮುಗಿದು ಹೋಗಿದೆ ಅವರು ಮತ್ತೆ ಗೆಲ್ಲಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಭವಿಷ್ಯ ನುಡಿದಿದ್ದಾರೆ.
ಅವರು ಸಿಮ್ಸ್ ನ ಪರಿಶೀಲನಾ ಸಭೆ ಮುಗಿಸಿ ನಂತರ ಮಾಧ್ಯಮಗಳಿಗೆ ಮಾತನಾಡಿ, ಬಿಜೆಪಿ ಎಂಎಲ್ಎ ಖರೀದಿ ಮಾಡಿ ಸರ್ಕಾರ ಮಾಡಿದ್ರು, ಕೇಂದ್ರ ಸರ್ಕಾರ ದೇಶದಲ್ಲಿ ಅದೇಷ್ಟೋ ಚುನಾಯಿತ ಸರ್ಕಾರ ಕೆಡವಿದೆ. ಜನ ಬಿಜೆಪಿಯನ್ನ ರಿಜೆಕ್ಟ್ ಮಾಡಿದ್ದಾರೆ. ಜನ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
40 ಪರ್ಸೆಂಟ್ ಸರ್ಕಾರ ಮಾಡಿದ್ರು, ಹಣ ಲೂಟಿ ಮಾಡಿದ್ರು, ಜನ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ಬಿಜೆಪಿ ಪರ್ಸೆಂಟೇಜ್ ಸರ್ಕಾರ ಅಂತನೇ ಹೆಸರಾಗಿತ್ತು ಎಂದರು.
ಪಿಎಸ್ಐ ಹಗರಣ ಬಯಲು ಮಾಡಿದ್ದೆ ಸಚಿವ ಪ್ರಿಯಾಂಕಾ ಖರ್ಗೆ ಅವರು. ಪಿಎಸ್ಐ ಹಗರಣ ನಡೆದಿದ್ದು ಬಿಜೆಪಿ ಅವಧಿಯಲ್ಲಿ. ಕೆಇಎ ಅಕ್ರಮ ಸಂಬಂಧ ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಆರ್ ಡಿ ಪಾಟೀಲ್ ಗೆ ಸಚಿವ ಪ್ರಿಯಾಂಕಾ ಖರ್ಗೆ ಸಂಬಂಧ ಇದೆ ಎಂಬ ಬಿಜೆಪಿ ಆರೋಪ ಸುಳ್ಳು ಎಂದರು.
ಇದನ್ನೂ ಓದಿ-https://suddilive.in/archives/2916
