ಕ್ರೈಂ ನ್ಯೂಸ್

ದರೋಡೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಪ್ರಕಟ

ಸುದ್ದಿಲೈವ್/ಶಿವಮೊಗ್ಗ

2019 ರಂದು ಭದ್ರಾವತಿಯ ಲಕ್ಕಿನಕೊಪ್ಪ ಮತ್ತು ಹೆಚ್ ಕೆ ಜಂಕ್ಷನ್ ನಲ್ಲಿ ನಡೆದ 6 ಜನರ  ದರೋಡೆ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ದಿನಾಂಕಃ 05-03-2019 ರಂದು ರಾತ್ರಿ ಭದ್ರಾವತಿಯ ಲಕ್ಕಿನಕೊಪ್ಪ ಕ್ರಾಸ್ ನ ಹತ್ತಿರ 06 ಜನ ಅಪರಿಚಿತರು 02 ಬೈಕ್ ಗಳಲ್ಲಿ ಬಂದು ವ್ಯಕ್ತಿ ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ, ಬೆದರಿಕೆ ಹಾಕಿ ರೂ 20,000/- ನಗದು ಮತ್ತು ಐ-ಪಾಡ್ ಮತ್ತು ಐ-ಫೋನ್ ಅನ್ನು ದರೋಡೆ ಮಾಡಿಕೊಂಡು ಹೋಗಿದ್ದರು,

ಮತ್ತು ಅದೇ ದಿನ ರಾತ್ರಿ ಭದ್ರಾವತಿಯ ಹೆಚ್ ಕೆ ಜಂಕ್ಷನ್  ಹತ್ತಿರ 06 ಜನ ಅಪರಿಚಿತರು 02 ಬೈಕ್ ಗಳಲ್ಲಿ ಬಂದು ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ, ಬೆದರಿಕೆ ಹಾಕಿ ರೂ 500/- ನಗದು ಮತ್ತು ಮೊಬೈಲ್ ಫೋನ್ ಅನ್ನು ದರೋಡೆ ನಡೆಸಿದ್ದರು.

ನೊಂದ ವ್ಯಕ್ತಿಗಳು ನೀಡಿದ ದೂರಿನ ಮೇರೆಗೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಗುನ್ನೆ ಸಂಖ್ಯೆ 0067/2019 ಕಲಂ 395 ಐಪಿಸಿ ಕಾಯ್ದೆ ಮತ್ತು ಗುನ್ನೆ ಸಂಖ್ಯೆ 0069/2019 ಕಲಂ 395 ಐಪಿಸಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

ಆಗಿನ ತನಿಖಾಧಿಕಾರಿಗಳಾದ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಕೆ ಎಂ ಯೋಗೇಶ್  02 ಪ್ರಕರಣಗಳ ತನಿಖೆ ಪೂರೈಸಿ, ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ಪ್ರತ್ಯೇಖವಾಗಿ ದೋಷಾರೋಪಣಾ ಪತ್ರಗಳನ್ನು ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ಸರ್ಕಾರಿ ಅಙಿಯೋಜನಕರಾಗಿ ಶ್ರೀಮತಿ ರತ್ನಮ್ಮ, 2 ಪ್ರಕರಣಗಳ ವಾದ ಮಂಡಿಸಿದ್ದರು.  4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯ ಶಿವಮೊಗ್ಗ, ಪೀಠಾಸೀನ ಭದ್ರಾವತಿಯಲ್ಲಿ 2 ಪ್ರಕರಣಗಳ ವಿಚಾರಣೆ ನಡೆದು ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧಿಶರಾದ ಶ್ರೀ ಆರ್ ವೈ ಶಶಿಧರ ರವರು ಆರೋಪಿ 1) ಸಿದ್ದಾಪುರದ ದೃವಕುಮಾರ್(22) ಈತನಿಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ 5,000/- ದಂಡ ವಿಧಿಸಲಾಗಿದೆ.

ದಂಡ ಕಟ್ಟಲು ವಿಫಲನಾದಲ್ಲಿ 03 ತಿಂಗಳು ಸಾಧಾ ಕಾರಾಗೃಹ ಶಿಕ್ಷೆ ಮತ್ತು ಉಳಿದ ಆರೋಪಿತರಾದ 2)  ವೇಲೂರು ಜನ್ಬಾಪುರದ ಸೈಯ್ಯದ್ ಇಮ್ರಾನ್, (22),  3) ಸಿದ್ದಾಪುರ ಗ್ರಾಮ ಶಿವಕುಮಾರ್ (24) 4)ಸಿದ್ದಾಪುರದ ಸಚಿನ್ (21), 5) ವೇಲೂರು ಶೆಡ್ ನ ಯೋಗೇಶ್ (24),  ಮತ್ತು 6) ಹೊಸ ಸಿದ್ದಾಪುರದ ಗಿರೀಶ ಕುಮಾರ್ (21) ವರ್ಷ, ತಲಾ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ ರೂ 5,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ 03 ತಿಂಗಳು ಸಾಧಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/3965

Related Articles

Leave a Reply

Your email address will not be published. Required fields are marked *

Back to top button