ಕ್ರೈಂ ನ್ಯೂಸ್

ನಕಲಿ ಬಂಗಾರ ತೋರಿಸಿ ಮಹಿಳೆಯರನ್ನು ವಂಚಿಸುತ್ತಿದ್ದ ಕಳ್ಳರ ಬಂಧನ

ಸುದ್ದಿಲೈವ್/ಶಿವಮೊಗ್ಗ

ಕಾಸಿನ ಸರ ಎಂದು ನಂಬಿಸಿ ಮಹಿಳೆ ಧರಿಸಿದ್ದ ಅಸಲೊ ಚಿನ್ನಾಭರಣವನ್ನ ಇಸ್ಕೊಂಡು ಹೋಗಿದ್ದ ಆರೋಪಿಯನ್ನ ದೊಡ್ಡಪೇಟೆ ಪೊಲೀಸರು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತರೀಕೆರೆಯ ನಿವಾಸಿ ಲಕ್ಷ್ಮಮ್ಮ ರವರು ಅಡಿಕೆ ಸುಲಿಯುವ ಕೆಲಸಕ್ಕೆ ತೀರ್ಥಹಳ್ಳಿಯ 15ನೇ ಮೈಲಿಗಲ್ಲಿಗೆ ತೆರಳಲು ಶಿವಮೊಗ್ಗದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದಿದ್ದು,  ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಖಾಸಗಿ ಬಸ್ ನಿಲ್ದಾಣದ ಕಡೆ ನಡೆದುಕೊಂಡು ಹೋತ್ತಿರುವಾಗ ಇಬ್ಬರು ಅಪರಿಚಿತರು ಬಂದು ಪರಿಚಯಿಸಿಕೊಂಡಿದ್ದಾರೆ.

ತಮ್ಮ ಮಗಳಿಗೆ ಮೆಗ್ಗಾನ್ ಆಸ್ಪತ್ತೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿದ್ದು ಆಪರೇಷನ್ ಮಾಡಿಸಲು ಹೆಚ್ಚಿನ ಹಣ ಬೇಕಾಗಿದ್ದು, ನಮ್ಮ ಬಳಿ ಹೆಚ್ಚಿನ ತೂಕ ಕಾಸಿನ ಸರ ಇದೆ ಇದು ಹೆಚ್ಚಿನ ಬೆಲೆ ಬಾಳುತ್ತದೆ. ನಕಲಿ ಕಾಸಿನ ಸರವನ್ನು ಅಸಲಿ ಕಾಸಿನ ಸರವೆಂದು ಮಹಿಳೆಗೆ ನಂಬಿಸಲು ಯತ್ನಿಸಿದ್ದಾರೆ.

ತಮ್ಮ ಬಳಿ ಹಣವಿಲ್ಲ ಎಂದು ಮಹಿಳೆ ಹೇಳಿದಾಗ ಇದು ಒಳ್ಳೆಯ ಬಂಗಾರ ಹಣವಿಲ್ಲವೆಂದರೆ ಕಾಸಿನ ಸರವನ್ನು ಇಟ್ಟುಕೊಂಡು ನಿಮ್ಮ ಬಳಿ ಇರುವ ಓಲೆ ಮತ್ತು ಕಿವಿ ಚೈನ್ ಕೊಡಿ ನಂತರ ನೀವು ಇದನ್ನು ಮಾರಾಟ ಮಾಡಿ ಹೆಚ್ಚಿನ ಬಂಗಾರವನ್ನು ತೆಗೆದುಕೊಳ್ಳಬಹುದು ಎಂದು ನಂಬಿಸಿದ್ದಾರೆ.

ಕಾಸಿನ ಸರ, ಬಂಗಾರದ ಸರ ಇರಬಹುದು ಎಂದು ನಂಬಿ ಕಿವಿಯಲ್ಲಿದ್ದ ಸುಮಾರು 03 ಗ್ರಾಂ ತೂಕದ ಒಂದು ಜೊತೆ ಬಂಗಾರದ ಕಿವಿ ಓಲೆ ಮತ್ತು ಸುಮಾರು 02 ಗ್ರಾಂ ತೂಕದ ಒಂದು ಜೊತೆ ಕಿವಿ ಮಾಟಿ(ಚೈನ್) ಅನ್ನು ಮಹಿಳೆ ಕೊಟ್ಟಿದ್ದಾರೆ,

ಅಪರಿಚಿತ ವ್ಯಕ್ತಿಗಳಿಂದ ಪಡೆದ ಕರಿಮಣಿ ಸರದಲ್ಲಿ ಪೊಣಿಸಿರುವ ಕಾಸಿನ ಸರವನ್ನು ಚಿನ್ನ ಬೆಳ್ಳಿ ಕೆಲಸ ಮಾಡುವರ ಹತ್ತಿರ ಪರಿಶೀಲಿಸಿದಾಗ ನಕಲಿ ಎಂದು ತಿಳಿದುಬಂದಿದೆ. ಅಪರಿಚಿತ ವ್ಯಕ್ತಿಗಳಿಂದ ನಕಲಿ ಬಂಗಾರವನ್ನು ಪಡೆದು ಅಸಲಿ ಬಂಗಾರವನ್ನು ಕೊಟ್ಟು ಮೋಸ ಹೋಗಿರುವ ಬಗ್ಗೆ ಮಹಿಳೆ ದೂರು ನೀಡಿದ್ದು ಈ ಬಗ್ಗೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿತರ ಪತ್ತೆಯ ಬಗ್ಗೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್  ರವಿ ಪಾಟೀಲ್, ಶ್ರೀನಿವಾಸ್ ಪೊಲೀಸ್ ಇನ್ಸ್ ಪೆಕ್ಟರ್, ಪಾಲಾಕ್ಷ ನಾಯ್ಕ-ಸಿಹೆಚ್ಸಿ-448, ಲಚ್ಚಾ ನಾಯ್ಕ್ ಸಿಹೆಚ್ಸಿ-288, ಚಂದ್ರ ನಾಯ್ಕ್ ಸಿಪಿಸಿ-1321, ಚಂದ್ರ ನಾಯ್ಕ್ ಸಿಪಿಸಿ-1228, ನಿತಿನ್-ಸಿಪಿಸಿ-1504, ಪುನೀತ್ ರಾವ್ ಸಿಪಿಸಿ-1666, ಮನೋಹರ್ ರವರನ್ನು ಒಳಗೊಂಡ ತಂಡ ಬಂಧಿಸಿದೆ.‌

ಆರೋಪಿ 1) ಕೃಷ್ಣಪ್ಪ ತಂದೆ ಗೋವಿಂದಪ್ಪ, 62 ವರ್ಷ, ಕೊರಮ ಜನಾಂಗ, ಕೂಲಿಕೆಲಸ, ವಾಸ ಭದ್ರಾಪುರ ಗ್ರಾಮ. ದುರ್ಗಮ್ಮ ದೇವಸ್ಥಾನದ ಹತ್ತಿರ, ತರಲಘಟ್ಟ ಹೋಬಳಿ, ಶಿಕಾರಿಪುರ ತಾಲ್ಲೂಕ್ ಶಿವಮೊಗ್ಗ ಇವರನ್ನು ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಿದಾಗ ಆರೋಪಿತನು ತನ್ನ ಸಹಚರ ಶಿಕಾರಿಪುರ ತರಲಘಟ್ಟ ವಾಸಿ ಹಾಲೇಶ್ ನಾಯ್ಕ್ ರವರೊಂದಿಗೆ ಸೇರಿ ಈ ಕೃತ್ಯಕ್ಕೆ ಕೈಹಾಕಿದ್ದಾನೆ.

ಈ ಪ್ರಕರಣದಲ್ಲಿ ಆರೋಪಿ ಕೃಷ್ಣಪ್ಪ ನಿಂದ ಸುಮಾರು 25,000/- ರೂ ಬೆಲೆ ಬಾಳುವ ಒಂದು ಜೊತೆ ಬಂಗಾರ ಕಿವಿ ಓಲೆ ಮತ್ತು ಒಂದು ಜೊತೆ ಕಿವಿ ಮಾಟಿಯನ್ನು ವಶಪಡಿಸಿಕೊಳ್ಳಲಾಗಿದೆ. 02 ನೇ ಆರೋಪಿ ಹಾಲೇಶ್ ನಾಯ್ಕ ತಲೆಮರೆಸಿಕೊಂಡಿದ್ದಾನೆ‌. ಆರೋಪಿತನನ್ನು ಪತ್ತೆ ಮಾಡಲು ಸತತ ಪ್ರಯತ್ನ ಮಾಡಿ ಆರೋಪಿಯನ್ನು ಬಂದಿಸಿದ್ದು ಸದರಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ರವರು ಅಭಿನಂದನೆ ಸಲ್ಲಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/6648

Related Articles

Leave a Reply

Your email address will not be published. Required fields are marked *

Back to top button