ಕ್ರೈಂ ನ್ಯೂಸ್

20 ನೇ ಕಳವು ಪ್ರಕರಣ ದಾಖಲು

ಸುದ್ದಿಲೈವ್/ಶಿವಮೊಗ್ಗ

KSRTC ಬಸ್ ನಿಲ್ದಾಣದ ಕಳುವು ಪ್ರಕರಣದಲ್ಲಿ ನಗಬೇಕೋ ಅಳಬೇಕೋ ದೇವರಿಗೆಗೊತ್ತು. ಯಾಕೆಂದರೆ ಒಂದೊಂದು ತಿಂಗಳಲ್ಲಿ ನಿರಂತರವಾಗಿ ಕಳುವು ಪ್ರಕರಣ ನಡೆಯುತ್ತಿದ್ದರೂ ಪ್ರಯಾಣಿಕರ ಸುರಕ್ಷತೆ ಮಾತ್ರ ಮರಿಚಿಕೆಯಾಗಿದೆ.

ಕಳುವು ಪ್ರಕರಣಗಳು ನಿರಂತರವಾಗಿ ನಡೆಯುತ್ತಿದೆ. ಎರಡು ದಿನಗಳ ಹಿಂದೆ ಅಷ್ಟೆ ಸಂಘಟನೆ KSRTC ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಹಿತರಕ್ಷಣೆಗಾಗಿ ಸಿಸಿ ಟಿವಿ ಹಾಕಿ ಎಂದು ಮನವಿ ಮಾಡಿಕೊಂಡಿದೆ. ಯಾವ ಮನವಿ, ಪತ್ರಿಕೆಗಳ ಸುದ್ದಿಗೆ ಇಲಾಖೆ ಎಚ್ಚರಿಕೆಗೊಳ್ಳುತ್ತಿಲ್ಲ.

ಬ್ಯಾಕ್ ಟು ಬ್ಯಾಕ್ ಪ್ರಕರಣಗಳು ನಡೆಯುತ್ತಿವೆ. ನ.22 ರಂದು KSRTC ಬಸ್ ನಿಲ್ದಾಣದಲ್ಲಿ ಈ ವರ್ಷದಲ್ಲಿ ನಡೆಯುತ್ತಿರುವ 19 ನೇ ಕಳಪ್ರಕರಣಗಳು ನಡೆದಿತ್ತು.‌ ನ.23 ರಂದೇ ಚಿತ್ರದುರ್ಗದಿಂದ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಶ್ರೀಮತಿ ಶಶಿಕಲಾ ಎಂಬುವರು 5 ಲಕ್ಷದ 72 ಸಾವಿರ 614 ರೂ. ಮೌಲ್ಯದ 93 ಗ್ರಾಂ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿದ್ದಾರೆ.

ಕೆಎ 17- ಎಫ್ 1562 ಕ್ರಮ ಸಂಖ್ಯೆಯ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾದಲ್ಲಿ ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಹೊರಟ ಮಹಿಳೆಯ ಚಿನ್ನಾಭರಣ ಕಳ್ಳತನವಾಗಿದೆ ಎಂದು ಶಶಿಕಲಾ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/3959

Related Articles

Leave a Reply

Your email address will not be published. Required fields are marked *

Back to top button