ರಾಗಿಗುಡ್ಡದ ಮೆರವಣಿಗೆ ವೇಳೆ ನಡೆದ ಗಲಭೆಯಲ್ಲಿ ದಾಖಲಾದ ಎಫ್ಐಆರ್ ನ ಫುಲ್ ಡಿಟೇಲ್!

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಭೆಯಲ್ಲಿ 24 ಎಫ್ಐಆರ್ ದಾಖಲಾಗಿದೆ. ಕಲ್ಲು ತೂರಾಟ, ಮನೆ ಡ್ಯಾಮೇಜ್ ಹಾಗೂ ಸುಮೋಟೋ ಪ್ರಕರಣ ದಾಖಲಾಗಿದೆ. ಬಹುತೇಕ ಎಫ್ಐಆರ್ ನಲ್ಲಿ ಆರೋಪಿಗಳ ಹೆಸರು ರಿಪೀಟ್ ಆಗಿದೆ. ರೋಹನ್ ರಾವ್ ಮೇಲೆ ನಡೆದ ಅಟ್ಯಾಕ್ ಮೊದಲನೇ ಎಫ್ಐಆರ್ ದಾಖಲಾಗಿದೆ.
ಮನೆ ಮುಂದೆ ಸ್ನೇಹಿತರೊಂದಿಗೆ ನಿಂತಿದ್ದ ರೋಹನ್ ರಾವ್ ಮೇಲೆ ಇರ್ಫಾನ್, ನಭಿ, ರಫಿಕ್, ಇಮ್ರಾನ್ ಎಸ್ ಎಸ್, ಮಾಸಿನ್, ಕಲೀಮ್, ಸೂಫಿ, ಹಿದಾಯತ್ ಯಾನೆ ಪಾಷ ಮತ್ತು ಇತರರು ಗುಂಪು ಕಟ್ಟಿಕೊಂಡು ಬಂದು ಮಚ್ಚು ಮತ್ತು ಕಬ್ಬಿಣದ ರಾಡಿನಿಂದ ದಾಳಿ ನಡೆಸಿದ್ದಾರೆ. ಪೊಲೀಸರ ರಕ್ಷಣೆಯಲ್ಲಿ ಬಚಾವ್ ಆಗಿರುವುದಾಗಿ ದೂರು ದಾಖಲಾಗಿದೆ.
ಎ.ಎನ್.ಮಾರುತಿ ಎಂಬುವರು ಅಂಗಡಿಯಲ್ಲಿದ್ದಾಗ ಅಂಗಡಿಗೆ ನುಗ್ಗಿದ ಇದೇ ಗ್ಯಾಂಗ್ ದಾಂಧಲೆ ನಡೆಸಿದೆ. ಮೆರವಣಿಗೆ ನಡೆಯುತ್ತಿದ್ದರೆ ನೀನು ಅಂಗಡಿ ಬಾಗಿಲು ತೆಗೆದು ವ್ಯಾಪಾರ ಮಾಡುತ್ತಿದ್ದೆಯಾ ಎಂದು ಹೇಳಿ ಅಂಗಡಿ ಸಾಮಾನುಗಳನ್ನ ಬಿಸಾಕಿ ಅವ್ಯಾಚ್ಯಶಬ್ದಗಳಿಂದ ಬೈದಿದ್ದಾರೆ. ಕಬ್ವಿಣದ ರಾಡಿನಿಂದ ಮಾರುತಿಯನ್ನ ಹಲ್ಲೆ ಮಾಡಿದ್ದಾರೆ. ಎಡೆಗಣ್ಣಿನ ಮೇಲೆ ಗಾಯವಾಗಿದೆ. ತಪ್ಪಿಸಿಕೊಂಡು ಓಡಿ ಹೋದಾಗ ಹಲ್ಲೆ ನಡೆದಿದೆ. ದೂರು ದಾಖಲಾಗಿದೆ.
ಸುಮೋಟೋ ಪ್ರಕರಣ
ಅದರಂತೆ ಸಾದಿಕ್ ಅಹ್ಮದ್, ಅಜರುದ್ದಿನ್, ಸಯ್ಯದ್, ಮೊಹ್ಮದ್, ಸಯ್ಯದ್ ಸುಭನ್, ಫೈರೋಜ್ ಖಾನ್, ಸಯಗಯದ್ ಖಾದ್ರಿ, ಅನ್ವರ್ ಪಾಶ, ಸಯ್ಯದ್ ಶಫೀರ್ ಮತ್ತು ಇತರ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ. ರಾಗಿಗುಡ್ಡದ ಮುಖ್ಯರಸ್ತೆಯಲ್ಲಿದ್ದ ಶನೀಶ್ವರ ದೇವಸ್ಥಾನದ ಬಳಿ ಮೆರವಣಿಗೆ ಬಂದ ವೇಳೆ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ 10-15 ಜನ ಹಿಂದೂ ಜನ ಮೆರವಣಿಗೆ ನೋಡುತ್ತಿದ್ದ ವೇಳೆ 50-100 ಜನ ಯುವಕರು ತಳ್ಳಾಡಿಕೊಂಡು ಬಂದು ಇವರು ಯಾಕೆ ನಮ್ಮ ಮೆರವಣಿಗೆ ನೋಡಲು ಬಂದಿದ್ದಾರೆ ಎಂದು ಗಲಾಟೆಗೆ ಮುಂದಾಗಿದ್ದಾರೆ.
ಕರ್ತವ್ಯದಲ್ಲಿದ್ದ ಪೊಲೀಸರು ತಡೆಯಲು ಹೋದಾಗ ಮೇಲೆ ಕಾಣಿಸಿದ ಆರೋಪಿಗಳು ಅವರನ್ನ ತಳಿ ವೀರೇಶ್ ಎಂಬುವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದೆ. ಪಾಯಿಂಟ್ ಕರ್ತವ್ಯದ ಮೇಲೆ ಹಲ್ಲೆ ನಡೆಸಿದ ಪೊಲೀಸರ ಮೇಲೆ ಹಲ್ಲೆ ನಡೆದ ಹಿನ್ನಲೆಯಲ್ಲಿ ದೂರು ದಾಖಲಾಗಿದೆ. ಇದರಂತೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ನಾಲ್ವರು ಪೊಲೀಸ್ ಕಾನ್ ಸ್ಟೇಬಲ್, ಮತ್ತು ಮಹಿಳಾ ಕಾನ್ ಸ್ಟೇಬಲ್ ವಿರುದ್ಧ ದೂರು ದಾಖಲಾಗಿದೆ.
ಮುನೀರ್ ಖಾನ್ ರಿಂದ ದೂರು
ರಾಗಿಗುಡ್ಡದ 8ನೇ ತಿರುವಿನಲ್ಲಿ ಈದ್ ಮೆರವಣಿಗೆಯ ವೇಳೆ ಎಡಭಾಗದಲ್ಲಿ ಶಂಕರ್, ಪುರುಷೋತ್ತಮ, ಹರೀಶ್ ಮತ್ತು 10-15 ಜನ ಒಂದು ಕಟ್ಟಡದ ಮೇಲೆ ನಿಂತಿದ್ದು, ಮೋಹಿನ್ ಖಾನ್ ರನ್ನ ನೋಡಿದಾಗ ಅವ್ಯಚ್ಯಶಬ್ದಗಳಿಂದ ಬೈದು ಮೆರವಣಿಗೆಯ ಮೇಲೆ ಕಲ್ಲು ತೂರಿದ್ದಾರೆ. ಇದರಿಂದ ಗಾಯಗಳಾಗಿದ್ದು, ಪೊಲೀಸರಿಂದ ತಾವು ಬಜಾವ್ ಆಗಿರುವುದಾಗಿ ಉಲ್ಲೇಖಿಸಲಾಗಿದೆ.
ಶಾಂತಮ್ಮನವರ ದೂರು
ಅದರಂತೆ ರಾಗಿಗುಡ್ಡದ 6 ನೇ ತಿರುವಿನಲ್ಲಿ ಶಾಂತಮ್ಮನವರು ಈದ್ ಮೆರವಣಿಗೆ ಹೊರಟಾಗ ನಿಂತಿದ್ದ ವೇಳೆ ಶಹಬಾಜ್, ಫರ್ದೀನಾ, ಫರಾಜ್, ಅಜರುದ್ದಿನ್, ಸಯ್ಯದ್ ಸುಭಾನ್ ಮತ್ತು ಇತರೆ 30 ಜನ ಅಡಿಕೆ ದಬ್ಬೆಯಿಂದ ಹಲ್ಲೆ ನಡೆಸಿದ್ದು, ಹಲ್ಲೆ ನಡೆಸಿ ಸಾಯಿಸಲು ಮುಂದಾಗಿದ್ದು ಪೊಲೀಸ್ ಸೈರನ್ ಶಬ್ದ ಕೇಳಿ ಪರಾರಿಯಾಗಿದ್ದಾರೆ.
ಅದರಂತೆ, ವೆಂಕಟೇಶ್, ಜಯಂತ್ ಕುಮಾರ್, ಗೌತಮ್, ವೆಂಕಟೇಶ್ ಪ್ರವೀಣ, ಹರೀಶ ಶಂಕರ ಪುರುಷೋತ್ತಮ ಹಾಗೂ ಇತರೆ 9 ಜನರ ವಿರುದ್ದ ಈದ್ ಮೆರವಣಿಗೆ ಹೋಗುವಾಗ ಮುಸ್ಲೀಂ ರಿಗೆ ಬೈದಿದ್ದು ಅವರೊಂದಿಗೆ ಜಗಳಕ್ಕೆ ಹೋಗಲು ಮುಂದಾದಾಗ ಪೊಲೀಸರು ತಡೆದಿದ್ದಾರೆ. ಇವರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ತಳ್ಳಿದ್ದು ಪೊಲೀಸರ ಮೇಲೆ ಕಲ್ಲು ತೂರಿದ್ದು ಇವರ ಮೇಲೆ ಸುಮೋಟೊ ದೂರು ದಾಖಲಾಗಿದೆ
ಅದರಂತೆ ಕಾಣಿಕ್ಯರಾಜ್, ನಂದಿನಿ, ವೆಂಕಟೇಶ್ ಮನೆ ಜಖಂ ಆಗಿರುವ ದೂರು ದಾಖಲಾಗಿದ್ದರೆ, ರಮಾಬಾಯಿ ಅವರ ಮನೆಯ ಮುಂದೆ ದಾಂಧಲೆ ನಡೆಸಿದ ಇದೇ ಗುಂಪು 25 ಸಾವಿರ ರೂ ನಷ್ಟ ಮಾಡಿದೆ. ಲತಾರವರ ಮನೆಯನ್ನ ಹಾನಿಮಾಡಿರುವ ಗ್ಯಾಂಗ್ 25 ಸಾವಿರ ರೂ ನಷ್ಟವುಂಟು ಮಾಡಿದೆ
ಆಟೋ ಜಖಂ
ಗಣೇಶ್ ರವರ ಮಾವ ಮನೆಯ ಮುಂದೆ ಆಟೋ ನಿಲ್ಲಿಸಿ ಭದ್ರಾವತಿಯ ಅಗದಹಳ್ಳಿಗೆ ಹೋಗಿ ಬಂದಾಗ ಆಟೋ ಜಖಂಗೊಳಿಸಲಾಗಿದೆ. ಇದನ್ನ ಪಕ್ಕದ ಮನೆಯ ನಂದಿನಿಯವರಿಂದ ವಿಚಾರಿಸಿದಾಗ ಈದ್ ಮೆರವಣಿಗೆ ವೇಳೆ ಅನ್ವರ್ ಪಾಷ ಯಾನೆ ಅನ್ನು, ನಭಿ ಯಾನೆ ಡಿಚ್ಚಿ, ಎಸ್ ಎಸ್ ಇಮ್ರಾನ್, ಇರ್ಫಾನ್ ರಫೀಕ್ ಯಾನೆ ಪಾಪ, ಸಾದಿಕ್ ಅಹ್ಮದ್ ಖದೀರ್ ಮತ್ತು 30-40 ಜನರ ಅಕ್ರಮಕೂಟ ಜಖಂ ಗೊಳಿಸಿರುವುದಾಗಿ ತಿಳಿಸಿದ್ದು ಅವರ ವಿರುದ್ಧ ದೂರು ದಾಖಲಾಗಿದೆ.
ಇದೇ ಗ್ಯಾಂಗ್ ಶಶಿಕುಮಾರ್ ಅವರ ಮನೆಯನ್ನೂ ಜಖಂಗೊಳಿಸಿದ್ದು, ಪುಷ್ಪ, ಲೋಕೇಶ್ ರೆಡ್ಡಿ, ಪೀಟರ್ ಅವರ ಮನೆಯನ್ನ ಜಖಂ ಗೊಳಿಸಿದೆ.
ಐದು ನಿಮಿಷ ಸುಮ್ಮನಿರಿ ಮುಗಿಸುವುದಾಗಿ ಬೆದರಿಕೆ
ಅದಲ್ಲದೇ ಮಹಿಳಾ ಪೊಲೀಸ್ ಮೇಲೆ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದು, ಐದು ನಿಮಿಷ ಸುಮ್ಮನಿದ್ದರೆ ಇವರನ್ನಇಲ್ಲ ಎನಿಸುವುದಾಗಿ ಹೇಳಿ ಎಳೆದಾಡಿದ್ದಾರೆ. ಈದ್ ಮೆರವಣಿಗೆಯ ವೇಳೆ ಮೆರವಣಿಗೆ ನೋಡುತ್ತಿದ್ದ ಹಿಂದೂ ಯುವಕರನ್ನ ಕಂಡ ಇದೇ ಗುಂಪು ಕಲ್ಲಿನಲ್ಲಿ ಹೊಡೆದಿದ್ದು, 100-200 ಜನರ ಗುಂಪು ಇವರನ್ನ ಅಟ್ಟಿಸಿಕೊಂಡು ಹೋಗಿದ್ದು ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿಯನ್ನ ನೋಡಿ ಅವ್ಯಾಚ್ಯ ಶಬ್ದಗಳಿಂದ ಬೈದು ಕಲ್ಲಿನಲ್ಲಿ ಹಲ್ಲೆ ನಡೆಸಿದ್ದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಸುಮೋಟೋ ದೂರು ದಾಖಲಾಗಿದೆ.
ಜಬೀನಾ ದೂರು
ರೋಹನ್, ಭರತ್, ಕಿರಣ್ ಕುಮಾರ್, ಪ್ರದೀಪ್, ಜಯಂತ್ ಕುಮಾರ್, ಗೌತಮ್ ವೆಂಕಟೇಶ, ಪ್ರವೀಣ್, ಹರೀಶ, ಶಂಕರ, ಪುರುಷೋತ್ತಮರ ವಿರುದ್ಧ ಜಬೀನರವರು ದೂರು ದಾಖಲಿಸಿದ್ದು ಮೆರವಣಿಗೆಯ ವೇಳೆ ಈ 11 ಕ್ಕೂ ಹೆಚ್ಚು ಜನ ಮಗ ಖಾಜಾನ ಮೇಲೆ ಹಲ್ಲೆ ನಡೆಸಿದ್ದು ಅವನ ಮೇಲೆ ಅಡಿಜೆ ದಬ್ಬೆಯಿಂದ ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ.
ಸುಮೋಟೋ ದೂರು
ಈ ಸುಮೋಟೋ ಪ್ರಕರಣದಲ್ಲಿ ಮೆರವಣಿಗೆಯ ವೇಳೆ ಎರಡೂ ಗುಂಪಿನ ಯುವಕರು ಪರಸ್ಪರ ಗಲಾಟೆ ಮಾಡುತ್ತಿದ್ದು ಬಿಡಿಸಲು ಹೋದ ಪೊಲೀಸರಿಗೆ ಜೀವಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ದೂರು ದಾಖಲಾಗಿದೆ. ರೆಹಮತ್, ಭರತ್, ಇಮ್ರಾನ್ , ಮೌಸೀನ್ , ಹರೀಶ, ಪ್ರದೀಪ ನಭಿ ಪ್ರವೀಣ ಮತ್ತು ಇತರೆ 8 ಜನರ ವಿರುದ್ಧ ದೂರು ದಾಖಲಾಗಿದೆ.
ಒಟ್ಟು 24 ಎಫ್ಐಆರ್ ದಾಖಲಾಗಿದ್ದು, ಇದರಲ್ಲಿ 7 ಮನೆ ಜಖಂ ಪ್ರಕರಣ ದಾಖಲಾಗಿದೆ ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. 8 ಸುಮೋಟೋ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/480
