ಕ್ರೈಂ ನ್ಯೂಸ್

ಉರುಸ್ ಆಚರಣೆ ವಿಚಾರದಲ್ಲಿ ಮಾರಾಮಾರಿ-ಕಾಜಾ ಬಂದ ನವಾಜ್ ಕಮಿಟಿಯವರ ಮೇಲೆ ಹಲ್ಲೆ

ಸುದ್ದಿಲೈವ್/ಶಿವಮೊಗ್ಗ

ಶಿರಾಳಕೊಪ್ಪದಲ್ಲಿ ಉರುಸ್ ಆಚರಣೆ ವಿಚಾರದಲ್ಲಿ ಉದ್ಭವಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಕಾಜಾ ಬಂದ ನವಾಜ್ ಕಮಿಟಿಯ ಸದಸ್ಯನ ಮೇಲೆ ಹಲ್ಲೆ ನಡೆದಿದೆ.

ಇಂದು ನಗರದ ಜಿಲ್ಲಾ ವಕ್ಫ್ ಬೋರ್ಡ್ ನಲ್ಲಿ ಶಿರಾಳಕೊಪ್ಪದ  ಮಸೀದಿ ಕಮಿಟಿಗಳ ಸಭೆ ನಡೆದಿದೆ. ಸಭೆಯಲ್ಲಿ ಅಧ್ಯಕ್ಷ ಮೊಹ್ಮದ್ ಶಫಿ ಹಾಜರು ಇರಲಿಲ್ಲ. ಉಪಾಧ್ಯಕ್ಷ ಅಲ್ಲಾ ಭಕ್ಷ್ ಮತ್ತು ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆದಿದೆ.

ಸಭೆಯಲ್ಲಿ ಶಿರಾಳಕೊಪ್ಪದಲ್ಲಿ ಜ.29 ರಂದು ಉರುಸ್ ಆಚರಣೆಯನ್ನ ಈ ಬಾರಿ ನಡೆಸಬೇಕು ಮತ್ತು ಉರುಸ್ ಆಚರಣೆಗೆ ಇದುವರೆಗೂ ನಡೆಸಿಕೊಂಡು ಬಂದ ಕಮಿಟಿಗೆ ಮಾಹಿತಿ ನೀಡಿಲ್ಲ ಎಂಬ ವಿಷಯ ಸಭೆಯಲ್ಲಿ ಚರ್ಚೆ ನಡೆದಿದೆ.

ಐದಯ ಕಮಿಟಿಗಳಾದ ಜಾಮೀಯ ಮಸಿದಿ ಕಮಿಟಿ, ಹಜರತ್ ಬಿಲಾಲ್ ಕಮಿಟಿ, ನೂರಾನಿ ಮಸೀದಿ ಕಮಿಟಿ, ಮದೀನ ಮಸೀದಿ ಕಮಿಟಿ, ದರ್ಗಾ ಮಸೀದಿ ಕಮಿಟಿಯವರು‌ ಅಂಜುಮನ್ ಕಮಿಟಿಯ ಅಡಿಯಲ್ಲಿ ಉರುಸ್ ಆಚರಿಸಿಕೊಂಡು ಬರುತ್ತಿದೆ.

ಅಂಜುಮನ್ ಕಮಿಟಿಯ ಅಡಿಯಲ್ಲಿ ಈ ಐದು ಮಸೀದಿ ಕಮೀಟಿಗಳು ಅಹಮದ್ ರಜ಼ಾ ಕಮಿಟಿ ರಚಿಸಿಕೊಂಡು ಪ್ರತಿ ವರ್ಷ ಉರುಸ್ ನಡೆಸಿಕೊಂಡು ಬರುತ್ತಿದೆ. ಆದರೆ ಈ ಬಾರಿ ಹಜರತ್ ಬಂದಾ ನವಾಜ್ ಕಮಿಟಿ ಉರುಸ್ ನಡೆಸಲು ಮುಂದಾಗಿದೆ ಎಂಬ ವಿಷಯದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಮಾತಿಗೆ ಮಾತು ಬೆಳೆದು ಕಚೇರಿಯ ಹೊರಗೆ ಬಂದು ಮುಬಾರಕ್ ಅಲಿಯ ಮೇಲೆ ಹಲ್ಲೆ ನಡೆದಿದೆ.

ಈ ವಿಷಯದಲ್ಲಿ ಹಜರತ್ ಬಂದಾ ನವಾಜ್ ಕಮಿಟಿ ಮತ್ತು ಅಹಮದ್ ರಜಾ ಕಮಿಟಿ ನಡುವೆ ಗಲಾಟೆ ನಡೆದಿದೆ. ಸಂದಲ್ ಉರುಸ್ ಯಾರು ನಡೆಸಬೇಕು ಎನ್ನುವ ವಿಚಾರದಲ್ಲಿ ವಕ್ಫ್ ಅಧಿಕಾರಿ ವ್ಯಾಪ್ತಿ ಮೀರಿ ಕಾಜಾ ಬಂದಾ ಕಮಿಟಿಗೆ ನೀಡಿದ್ದಾರೆ.  ಅಹಮದ್ ರಜ಼ಾ ಕಮಿಟಿಗೆ ಮಾಹಿತಿ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸಭೆಯನ್ನ ಮದ್ಯದಲ್ಲಿಯೇ ಕಮಿಟಿ ಸದಸ್ಯರು ಮಾತಿಗೆ ಮಾತು ಬೆಳೆದು ಹೊರ ನಡೆದು ಎಳೆದಾಡಿಕೊಂಡಿದ್ದಾರೆ. ಮುಬಾರಕ್ ಅಲಿಗೆ  ಗಲಾಟೆಯಲ್ಲಿ ಹೊಡೆತ ಬಿದ್ದಿದೆ.

ಇದನ್ನೂ ಓದಿ-https://suddilive.in/archives/6635

Related Articles

Leave a Reply

Your email address will not be published. Required fields are marked *

Back to top button