ಶೈಕ್ಷಣಿಕ ಸುದ್ದಿಗಳು

ಸರ್ಕಾರಿ ಶಾಲೆ ಅಭಿಮಾನ – ಸುಣ್ಣಬಣ್ಣ ಅಭಿಯಾನಕ್ಕೆ ಕೈ ಜೋಡಿಸಿದ ಕೆಚ್ಚೆದೆಯ ಕನ್ನಡತಿ ಅಕ್ಕ ಅನು

ಸುದ್ದಿಲೈವ್/ಶಿವಮೊಗ್ಗ

ಪೋಸ್ಟ್ ಮ್ಯಾನ್ ನ್ಯೂಸ್ ಬಳಗ ಆಯೋಜಿಸಿರುವ “ಸರ್ಕಾರಿ ಶಾಲೆ ಅಭಿಮಾನ ಸುಣ್ಣಬಣ್ಣ ಅಭಿಯಾನ” ಎಂಬ ಘೋಷಣೆಯಡಿಯಲ್ಲಿ ಸರಕಾರಿ ಕನ್ನಡ ಶಾಲೆಗಳಿಗೆ ಕಾಯಕಲ್ಪ ನೀಡುವ ಮಹತ್ಕಾರ್ಯದಲ್ಲಿ ನಮ್ಮ ಜೊತೆ ಸರ್ಕಾರಿ ಶಾಲೆ ಉಳಿಸಿ ಅಭಿಯಾನದಡಿಯಲ್ಲಿ “ಅನುಕರಣೆ ಪ್ರತಿಷ್ಠಾನದ” ಮೂಲಕ ರಾಜ್ಯದ ನೂರಾರು ಶಾಲೆಯನ್ನು ಅಂದಗಾಣಿಸಿ ಯುವ ಪೀಳಿಗೆಗೆ ಆದರ್ಶವಾಗಿರುವ ನನ್ನ ಸಹೋದರಿ ಕುಮಾರಿ|| ಕೆಚ್ಚೆದೆಯ ಕನ್ನಡತಿ ಅಕ್ಕ ಅನು ನಮಗೆ ಕೈ ಜೋಡಿಸಿದ್ದಾರೆ.

ದಿನಾಂಕ 11-10-2023 ರ ಬುಧವಾರ ನಮ್ಮ ಕ್ಷೇತ್ರದ ಜನಪ್ರೀಯ ಶಾಸಕ ಬೇಳೂರು ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿರುವ ಕಾರ್ಯಕ್ರಮದಲ್ಲಿ ಅಕ್ಕ ಅನು ನಮ್ಮ ನೂತನ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಈ ಅಭಿಯಾನದ ಚಾಲನೆ ಕಾರ್ಯಕ್ರಮದಲ್ಲಿ ಕನ್ನಡ ಪ್ರೇಮಿ, ಜನಸ್ನೇಹಿ ಪೊಲೀಸ್ ಅಧಿಕಾರಿಯಾದ ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್ಪಿ ಗಜಾನನ ವಾಮನ ಸುತಾರ ,ಹೊಸನಗರ ತಾಪಂ ಕಾರ್ಯ ನಿರ್ವಾಹಣಾಧಿಕಾರಿ ವೈ ನರೇಂದ್ರ ಕುಮಾರ್ ,ಕ್ರೀಯಾಶೀಲ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಆರ್ ಕೃಷ್ಣಮೂರ್ತಿ ಹಾಗೂ ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ ಭಾಗವಹಿಸಲಿದ್ದರೆ.

ನಾವು ಮೊದಲ ಹಂತದಲ್ಲಿ ಹೊಸನಗರ ತಾಲೂಕಿನ 21 ಶಾಲೆಗಳನ್ನು ನಾವು ಗುರುತಿಸಿದ್ದು ಅದರಲ್ಲಿ ಮೊಟ್ಟಮೊದಲನೆಯದಾಗಿ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಚಂದವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದು 09-10-2023 ರ ಸೋಮವಾರದಂದು ಚಾಲನೆ ನೀಡಲಿದ್ದೇವೆ.

ಈ ಕಾರ್ಯಕ್ಕೆ ಸಂಪನ್ಮೂಲವನ್ನಾಗಿ ಮಲೆನಾಡಿನ ಓದುಗರು ಪ್ರೋತ್ಸಾಹಿಸಿ ಬೆಳೆಸಿದ ಪೋಸ್ಟ್ ಮ್ಯಾನ್ ನ್ಯೂಸ್ ಡಿಜಿಟಲ್ ಮಾದ್ಯಮಕ್ಕೆ ಗೂಗಲ್ AdSense(ಜಾಹಿರಾತು) ನಿಂದ ಬಂದ ಹಣವನ್ನು ಬಳಸಲು ನಿರ್ಧರಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯ ಶಾಲೆಗಳಿಗೆ‌ ಮೆರಗು ನೀಡಲು ದಾನಿಗಳನ್ನು ಅವಲಂಬಿಸಲಿದ್ದೇವೆ.

ಈ ಮಹತ್ತರ ಕಾರ್ಯವನ್ನು ನನ್ನ ಗುರುಗಳು ,ಆತ್ಮೀಯರು ಹಾಗೂ ಪೋಸ್ಟ್ ಮ್ಯಾನ್ ನ್ಯೂಸ್ ಸಂಸ್ಥೆಯ ಪ್ರಮುಖರಾದ ಸಬಾಸ್ಟಿನ್ ಮ್ಯಾಥ್ಯೂಸ್ ರವರ ಮಾರ್ಗದರ್ಶನದಲ್ಲಿ ನಾನು ಹಾಗೂ ನನ್ನ ಸ್ನೇಹಿತ ಸಂಸ್ಥೆಯ ಮತ್ತೊಬ್ಬ ಪ್ರಮುಖರಾದ ಉಮೇಶ್ ಸಿ ಜಾಗದ್ದೆ ನಡೆಸಲು ಮುಂದಡಿ ಇಟ್ಟಿದ್ದೇವೆ.

ನನ್ನ ಕನಸಿನ ಅಭಿಯಾನದ ಚಾಲನೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಮ್ಮಲ್ಲಿ ಮನೋಸ್ಥೈರ್ಯ ತುಂಬಿಸಿ‌ ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಹಕರಿಸಿ ಎಂದು ಕೇಳಿಕೊಳ್ಳುತ್ತೇವೆ.

ಅಭಿಯಾನಕ್ಕೆ ಸಹಕಾರ :

ಹೊಸನಗರ ತಾಲೂಕ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ,  ಗುರುಕುಲಾ ಕಲಾ ಪ್ರತಿಷ್ಠಾನ ಶಿವಮೊಗ್ಗ ಜಿಲ್ಲಾ ಘಟಕ
ಜಿಆರ್ ಕೆ ಮೂರ್ತಿ ಸೇವಾ ಟ್ರಸ್ಟ್ ರಿಪ್ಪನ್‌ಪೇಟೆ
ಮಲೆನಾಡ ರಹಸ್ಯ ವಾರ ಪತ್ರಿಕೆ
ಮಲೆನಾಡು ವಾಯ್ಸ್ ದಿನಪತ್ರಿಕೆ
Malnad Times-ಮಲ್ನಾಡ್ ಟೈಮ್ಸ್
ಕರ್ನಾಟಕ ರಾಜ್ಯ ಬರಹಗಾರರ ಬಳಗ ಶಿವಮೊಗ್ಗ ಜಿಲ್ಲಾ ಘಟಕ ಸಹಕರಿಸಿದೆ ಎಂದು ಪೋಸ್ಟ್ ಮ್ಯಾನ್ ನ್ಯೂಸ್ ಕನ್ನಡದ ಪ್ರಧಾನ ಸಂಪಾದಕ ರಫ಼ಿ ರಿಪ್ಪನ್‌ಪೇಟೆ ತಿಳಿಸಿದ್ದ

ಇದನ್ನೂ ಓದಿ-https://suddilive.in/archives/854

Related Articles

Leave a Reply

Your email address will not be published. Required fields are marked *

Back to top button