ಶೈಕ್ಷಣಿಕ ಸುದ್ದಿಗಳು

ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನ ಅನುಚಿತ ವರ್ತನೆ ವಿರುದ್ಧ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಸಹ್ಯಾದ್ರಿ ಸೈನ್ಸ್ ಕಾಲೇಜಿನಲ್ಲಿ ಫಿಸಿಕ್ಸ್ ಅತಿಥಿ ಉಪನ್ಯಾಸಕನ ಅನುಚಿತ ವರ್ತನೆ ವಿರುದ್ಧ ಬಿಎಸ್ಪಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಭೌತಶಾಸ್ತ್ರಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುವರ   ವಿರುದ್ಧ ವಿದ್ಯಾರ್ಥಿನಿಯರು ಕಾಲೇಜಿನ ಪ್ರಿನ್ಸಿಪಾಲ್ ರಿಗೆ ದೂರು ನೀಡಲಾಗಿತ್ತು. ದೂರು ನೀಡಿದರೂ ಯಾವುದೇ ಕ್ರಮ ಜರುಗಿಸಿಲ್ಲವೆಂದು ಇಂದು ದಿಡೀರ್ ಪ್ರತಿಭಟನೆ ನಡೆದಿದೆ. ಅಖಿಲ‌ ಭಾರತೀಯ ವಿದ್ಯಾರ್ಥಿ ಪರಿಷತ್ ಶಿವಮೊಗ್ಗ ಘಟಕದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕನನ್ನ ಕೆಲಸದಿಂದ ತೆಗೆಯುವಂತೆ ಆಗ್ರಹಿಸಲಾಯಿತು‌

ಉಪನ್ಯಾಸಕರು ವಿದ್ಯಾರ್ಥಿಗಳ ಜೊತೆ ಅನುಚಿತ ವರ್ತನೆ ಮಾಡುವುದನ್ನ ಒಂದು ವರ್ಷದ ಹಿಂದೆಯೇ ದೂರು ನೀಡಿದ್ದರು ಎಂಬ ಆರೋಪವೂ ಕೇಳಿ ಬಂದಿದೆ. ಒಂದು ವೇಳೆ ಅಥಿತಿ ಉಪನ್ಯಾಸಕನನ್ನ ಕೆಲಸದಿಂದ ತೆಗೆಯದಿದ್ದರೆ ಹಾಗೂ ಎಫ್ಐಆರ್ ದಾಖಲಿಸದಿದ್ದರೆ ಎಬಿವಿಪಿ ಕುವೆಂಪು ವಿಶಗವವಿದ್ಯಾಲಯವನ್ನ ಮುತ್ತಿಗೆ ಹಾಕಲಾಗುವುದು ಎಂದರು.

ಪ್ರತಿಭಟನೆಯ ವೇಳೆ ಗೊಂದಲ

ಎಬಿವಿಪಿ ತಾನು ಈ ಪ್ರತಿಭಟನೆಯನ್ನ ಮುಂದೆ ನಡೆಸಿತ್ತು ಎಂದು ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದ ವೇಳೆ ಎನ್ ಎಸ್ ಯುಐ ಪ್ರತಿಭಟನೆಯ ಮುಂದಾಳುತ್ವ ನನ್ನದು ಎಂದು ಹೇಳಿದೆ. ಈ ವೇಳೆ ಕೆಲವರು ಎನ್ ಎಸ್ ಯು ಐ ಪರ ಘೋಷಣೆ ಮೊಳಗಿದರೆ. ವಿದ್ಯಾರ್ಥಿನಿಯರು ಎಬಿವಿಪಿ ಪರ ಘೋಷಣೆ ಮೊಳಗಿಸಿದೆ. ಇದೇ ವೇಳೆ ಘಟನೆಗೆ ನ್ಯಾಯ ಕೂಡಿಸಿ ಎಂಬ ಘೋಷಣೆಯೂ ಕೇಳಿ ಬಂದಿದೆ.

ಇದನ್ನೂ ಓದಿ-https://suddilive.in/archives/6215

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373