ಶೈಕ್ಷಣಿಕ ಸುದ್ದಿಗಳು

ಶುಗರ್ ಫ್ಯಾಕ್ಟರಿ ಜಾಗದಲ್ಲಿ ಶಾಲೆಯ ಜಾಗ ನೀಡುವಂತೆ ಡಿಸಿಗೆ ಮನವಿ

ಮಲವಗೊಪ್ಪ

ಸುದ್ದಿಲೈವ್/ಶಿವಮೊಗ್ಗ

ಮಲವಗೊಪ್ಪದಲ್ಲಿರುವ ಎರಡು ಸರ್ಕಾರಿ ಶಾಲೆಗಳು ರಾಜ್ಯ ಹೆದ್ದಾರಿ 206 ರ ಅಗಲೀಕರಣಕ್ಕೆ ಹೋಗುತ್ತಿದ್ದು, ಶಾಲೆಗೆ  ಶುಗರ್ ಫ್ಯಾಕ್ಟರಿಯ 10 ಎಕರೆ ಜಾಗದಲ್ಲಿ ಅವಕಾಶ ಮಾಡಿಕೊಡುವಂತೆ ಗ್ರಾಮಸ್ಥರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆ ಎರಡೂ ಶಾಲೆಗಳು ರಸ್ತೆ ಅಗಲೀಕರಣಕ್ಕೆ ಹೋಗಲಿದೆ. ಮಲವಗೊಪ್ಪದಿಂದ ಶಿವಮೊಗ್ಗದ ಹೊಳೆ ಬಸ್ ನಿಲ್ದಾಣದ ವರೆಗೆ ಯಾವುದೇ ಸರ್ಕಾರಿ ಶಾಲೆಗಳು ಇಲ್ಲ. ಹಾಗಾಗಿ ಶುಗರ್ ಫ್ಯಾಕ್ಟರಿಯ ಜಾಗದಲ್ಲಿ 10 ಎಕರೆ ಜಾಗವನ್ನ ಎರಡು ಸರ್ಕಾರಿ ಶಾಲೆಗೆ ಮಂಜೂರು ಮಾಡಬೇಕು ಎಂದು ಆಗ್ರಹಿಸಲಾಗಿದೆ.

ಸರ್ಕಾರಿ ಶಾಲೆಯಲ್ಲಿ ಅತಿ ಹೆಚ್ಚು ನೋಂದಣಿ ಇದ್ದು, ಮಲವಗೊಪ್ಪದಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪಂಗಡದವರು ನೆಲಸಿದ್ದಾರೆ. ಈಗಿರುವ ಶಾಲೆ ರಸ್ತೆ ಅಗಲೀಕರಣಕ್ಕೆ ಹೋದರೆ ಉಳಿದ ಜಾಗದಲ್ಲಿ ಮಕ್ಕಳ ದಾಖಲಾತಿಗೆ ತಕ್ಕಂತೆ ಕಟ್ಟಡ ನಿರ್ಮಾಣ ಕಷ್ಟವಾಗುತ್ತದೆ.

ಅಲ್ಲದೆ ಉಳಿದರುವ ಜಾಗದಲ್ಲಿ ಶಾಲೆ ಕಟ್ಟಡ ನಿರ್ಮಿಸಿದಲ್ಲಿ ಅಪಘಾತ ಸಂಭವಿಸುತ್ತದೆ. ಇದಕ್ಕೆ ಉದಾಹರಣೆಯಂತೆ ಚಿರಂತ್ ಎಂಬ ಬಾಲಕ ಜ.13 ರಂದು ಶಾಲೆಗೆ ಬರುವಾಗ ಆಗಿರುವ ರಸ್ತೆ ಅಪಘಾತದಲ್ಲಿ ಸಾವು ಸಂಭವಿಸಿದೆ. ಹಾಗಾಗಿ  ಶುಗರ್ ಫ್ಯಾಕ್ಟರಿಯ ಜಾಗದಲ್ಲಿ ಮಲವಗೊಪ್ಪದ ಎರಡು ಶಾಲೆಗಳನ್ನ ಆರಂಭಿಸಲು ಆಗ್ರಹಿಸಲಾಗಿದೆ.

ಎರಡೂ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ವೆಂಕಟೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಇದನ್ನೂ ಓದಿ-https://suddilive.in/archives/8475

Related Articles

Leave a Reply

Your email address will not be published. Required fields are marked *

Back to top button